ತಾಲ್ಲೂಕಿನ ಮರಿಕುಂಟೆ ಗ್ರಾಮದಲ್ಲಿ ಸಭ್ ಕಾಂಟ್ರಕ್ಟ್  ಗುತ್ತಿಗೆದಾರ ಅನಿಲ್ ರವರಿಂದ  ಹಳ್ಳ ಹಿಡಿಯುತ್ತಿದೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಲಜೀವನ ಮಿಷನ್ ಯೋಜನೆ ಕಾಮಗಾರಿ 

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೧೪

ಜಗಳೂರು ತಾಲ್ಲೂಕಿನ ಮರಿಕುಂಟೆ  ಗ್ರಾಮದಲ್ಲಿ ಭಾರತ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಜಲಜೀವನ್ ಮಿಷನ್ ಕಾಮಗಾರಿ ಸಂಪೂರ್ಣವಾಗಿ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರ   ಕೆ ವಿ ಆರ್ ಕನ್ ಸ್ಟ್ರಕ್ಷನ್ ವೆಂಕಟರಮಣರೆಡ್ಡಿ ಹಾಗೂ ಸಭ್ ಗುತ್ತಿಗೆದಾರ ಅನಿಲ್.ಮತ್ತು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಚಂದನ್ ಶಾಮಿಲಾಗಿ ಕಮೀಷನ್ ಪಡೆದು ಕಳೆಪೆ ಕಾಮಗಾರಿ ನಿರ್ಮಿಸುತ್ತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ  ಮರಿಕುಂಟೆ ಗ್ರಾಮದಲ್ಲಿ ನಿರ್ಮಿಸುತ್ತಿರುವ ಮನೆ ಮನೆಗೆ ಜಲಗಂಗೆ ನಲ್ಲಿ ಆಳವಡಿಸುವ ಕಾಮಗಾರಿ ಕಳಪೆಯಾಗುತ್ತಿದೆ. ಮತ್ತು ಸಮರ್ಪಕವಾಗಿ ಅನುಷ್ಠಾನ ಮಾಡಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಹ ವಿಫಲರಾಗಿದ್ದಾರೆ.     ತಾಲ್ಲೂಕಿನ ಮರಿಕುಂಟೆ ಗ್ರಾಮದಲ್ಲಿ  ಜಲ ಜೀವನ್ ಮಿಷನ್  ಯೋಜನೆಡಿಯಲ್ಲಿ  ನಿರ್ಮಿಸುತ್ತಿರುವ ಪೈಪುಲೈನ್  ಒವರ್ ಟ್ಯಾಂಕ್ ಕಳಪೆಯಾಗುತ್ತಿದೆ‌     . ಗ್ರಾಮದ ಪ್ರೌಡಶಾಲಾಂಗಳದಲ್ಲಿ ನಿರ್ಮಿಸುತ್ತಿರುವ ಒವರ್ ಟ್ಯಾಂಕ್ ಮನೆ ಮನೆಗೆ ಜಲಗಂಗಾ ಪೈಪುಲೈನ್ ಸರಬರಾಜು ಕಾಮಗಾರಿ ಕೈಗೋಂಡಿರುವ ಒವರ್  ಟ್ಯಾಂಕ್ ಕಟ್ಟಡವನ್ನು ಸರಿಯಾದ ರೀತಿ ಕಾಮಗಾರಿ ನಿರ್ಮಿಸದೇ ಗುಣಮಟ್ಟದ ಪರಿಕರಗಳು ಬಳಸುತ್ತಿಲ್ಲ ಅತ್ಯಂತ ಕಡಿಮೆ ಕ್ವಾಲಿಟಿ ಸಿಮೆಂಟ್ ಬಳಕೆ ಮಾಡಲಾಗುತ್ತಿದೆ.

ಪೈಪುಲೈನ್ ಕಾಮಗಾರಿ ಸಹ ಅಪೂರ್ಣಗೊಂಡು ಸರಿಯಾದ ರೀತಿ ಆಳವಡಿಸಿರುವುದಿಲ್ಲ ಒಟ್ಟಾರೆ ಸರ್ಕಾರದ ಮಹತ್ವದ ಕಾಂಕ್ಷೆ ಯೋಜನೆ ಕಳಪೆಯಾಗುತ್ತಿದ್ದು ಸರ್ಕಾರಿ ನೀಯಮವನ್ನ ಗಾಳಿಗೆ ತೂರಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮಿಲು ಆಗಿ   ಸರ್ಕಾರದ ಹಣ ಗುಳುಂ ಮಾಡಲು ಹೊರಟಿರುವ ಗುತ್ತಿಗೆದಾರನಿಗೆ ಕಡಿವಾಣ ಹಾಕಿ ಸಮರ್ಪಕವಾಗಿ ಗುಣಮಟ್ಟದ ಕಾಮಗಾರಿ ನಿರ್ಮಿಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ. ಸುಮಾರು 1. ಕೋ 25 ಲಕ್ಷ ರೂಗಳಲ್ಲಿ ನಿರ್ಮಿಸುತ್ತಿರುವ ಪೈಪುಲೈನ್ ಹಾಗೂ ಒವರ್ ಟ್ಯಾಂಕ್ ನ್ನು ಗುತ್ತಿಗೆದಾರರ ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡದೆ  ಕಾಮಗಾರಿ ಅತ್ಯಂತ ಕಳಪೆಯಾಗುತ್ತಿದೆ.

.ಸಂಬಂಧಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರರಾದ ಸಾಧಿಕ್ ಉಲ್ಲಾಖಾನ್ ಡಿ ಎಚ್ ‌. ರವರು  ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ಸ್ಥಾಪನೆ ಮಾಡುಲು ಮುಂದಾಗಬೇಕು.  ಗುತ್ತಿಗೆದಾರರು ಕಳಪೆ ಕಾಮಗಾರಿ ನಿರ್ಮಿಸಿ ಕೈತೊಳೆದುಕೊಳ್ಳಲು ಹೊರಟಿದ್ದಾರೆ.ಈಗಾಗಲೇ ಸುಮಾರು ೬೦ ಲಕ್ಷ ಹಣ ಡ್ರಾ ಮಾಡಿಕೊಂಡು ಗುತ್ತಿಗೆದಾರರು ಹಾಗೂ ಸೆಕ್ಷನ್ ಇಂಜಿನಿಯರ್ ಅತಿಯಾದ ಕಮಿಷನ್ ನ್ನು ತಮ್ಮಗಳ ಜೇಬಿಗೆ ಇಳಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು     ಸರ್ಕಾರದ ಅನುದಾನವನ್ನು ಅಧಿಕಾರಿಗಳು ಸರಿಯಾದ ರೀತಿ ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿ ನಿರ್ಮಿಸದೆ ಗುತ್ತಿಗೆದಾರರ ಬಳಿ ಶಾಮಿಲು ಆಗಿ ಕಳಪೆ ಕಾಮಗಾರಿ ನಿರ್ಮಿಸಿ ಸರ್ಕಾರಿ  ಹಣವನ್ನ  ಕೋಟಿ ಕೊಟಿ ಲೂಟಿ ಹೊಡೆಯುವರು  ಇತ್ತ ಕಡೆ ಸಂಬಂಧಿಸಿದ  ಮೇಲಾ ಅಧಿಕಾರಿಗಳು ಗಮನಹರಿಸಿ ಕಳಪೆ ಮಟ್ಟದ ಕಾಮಗಾರಿ ಸರಿಪಡಿಸಿ ಉತ್ತಮ ಗುಣಮಟ್ಟದ ಕಾಮಗಾರಿ  ನಿರ್ಮಿಸುವಂತೆ ಗ್ರಾಮಸ್ಥರು ಅಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಒತ್ತಾಯಿಸಿದ್ದಾರೆ.ಇನ್ನು ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಪೈಪ್ ಲೈನ್ ಕೆಲ ಗುತ್ತಿಗೆದಾರರು ಸರಿಯಾದ ರೀತಿ ಪೂರ್ಣಗೋಳಿಸದೆ ಅಪೂರ್ಣ ಕಾಮಗಾರಿ ಮಾಡಿ ಬಿಲ್ ಪಾವತಿಸಿಕೊಂಡಿದ್ದಾರೆ.  ಕಾಮಗಾರಿ ಮಾಡುವ ವೇಳೆ ಸಿಸಿ ರಸ್ತೆಯನ್ನು ಹೊಡೆದು ಹಾಕಿ ಆಳು ಮಾಡುವರು ಸರಿಯಾದ ರೀತಿ ಪೈಪ್ ಲೈನ್ ಆಳವಡಿಸದೆ  ಸಂಪೂರ್ಣ ಕಳಪೆಯಿಂದ ಕೂಡಿದ್ದು ಪೈಪ್ ಲೈನ್ ಸರಿಯಾದ ರೀತಿ ಅಳವಡಿಸದೆ  ಕೊಳವೆಗಳನ್ನು ಸರಿಯಾಗಿ ಜೋಡಿಸದೆ  ಮನೆಗಳಿಗೆ ನೀರು ಸರಿಯಾಗಿ ಬರುತ್ತಿಲ್ಲ ಇದು ನಾಮಕ ವ್ಯವಸ್ಥೆಗೆ ಕಾಮಗಾರಿ ಮಾಡಿ ಪರಾರಿಯಾಗುವರು ಎಂದು ನಿವಾಸಿಗಳು ದೂರಿದ್ದಾರೆ. ಜಲಗಂಗೆ ನಲ್ಲಿಗಳ ಆಳವಡಿಸುತ್ತಿರುವ ಮನೆ ಮುಂದೆ ನಿರ್ಮಿಸಿರುವ ಸಿಮೆಂಟ್ ಕಟ್ಟೆಯೂ ಕಳಪೆಯಾಗಿದ್ದು ಕೆಲ ಬಾಗಗಳಲ್ಲಿ   ಬಿರುಕು ಬಿಟ್ಟಿವೆ.ಕೆಲ ನಲ್ಲಿಗಳಿಗೆ ಕ್ಯಾಪ್ ಗಳಿಲ್ಲ. ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲಾ ಎಂದು ಆರೋಪಿಸಿದ್ದಾರೆ.

ಕೆಲ ಬಾಗಗಳಲ್ಲಿಯ ಸಹ ಪೈಪುಗಳುನ್ನು ಸರಿಯಾದ ರೀತಿ ಆಳವಡಿಸಿರುವುದಿಲ್ಲ

ಈ ಹಿಂದೆ ನಮ್ಮ ಮನೆಗೆ ನೀರು ಸರಾಗವಾಗಿ, ಸಾಕಾಗುವಷ್ಟು ನೀರು ಬರುತ್ತಿತ್ತು. ಆದರೆ ಇದಕ್ಕಿಂತಲೂ ಹೆಚ್ಚಿನ ನೀರು ಸಮಾನವಾಗಿ ಬರುತ್ತದೆ ಎಂದು ನಾವು ನಂಬಿದ್ದೆವು.  ಇದರಿಂದ ಗ್ರಾಮದ ಬಹುತೇಕ ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿದ್ದು, ಒಂದು ಬಿಂದಿಗೆ ನೀರು ತುಂಬಲು ಅರ್ಧಗಂಟೆಗೂ ಹೆಚ್ಚು ಸಮಯ ಬೇಕಾಗಿದೆ. ಎಲ್ಲಾ ಕೆಲಸಗಳನ್ನು ಬಿಟ್ಟು ನೀರಿಗಾಗಿಯೆ ಕಾಯುವಂತಾಗಿದೆ ಎಂದು ಇಲ್ಲಿನ ಮಹಿಳೆಯರು ಆರೋಪಿಸಿದ್ದಾರೆ.ಒಟ್ಟಾರೆ ಇಂತ ಕಳಪೆ ಕಾಮಗಾರಿಗಳಿಗೆ ಕಡಿವಾಣ ಹಾಕಿ ಈ ಯೋಜನೆಡಿ ಗುಣಮಟ್ಟದ ಕಾಮಗಾರಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.                                 

ವರದಿ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ  

Leave a Reply

Your email address will not be published. Required fields are marked *

You missed

error: Content is protected !!