Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ ೯
ಜಗಳೂರು ಕ್ಷೇತ್ರದಲ್ಲಿ ಸುಮಾರು ನಾಲ್ಕೈದು ಬಾರಿ ಶಾಸಕರಾಗಿ ಆಯ್ಕೆಯಾಗಿ ಎರಡು ಬಾರಿ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಜನಾನುರಾಗಿ ಜನಪರ ಆಡಳಿತ ನಡೆಸಿರುವ ದಿವಂಗತ ಮಾಜಿ ಸಚಿವ ಜಿ ಹೆಚ್ ಆಶ್ವಥರೆಡ್ಡಿರವರ ಧರ್ಮ ಪತ್ನಿ ಜಿ. ಹೆಚ್. ತಿಪ್ಪಮ್ಮನವರು ಸುಮಾರು 85 ವರ್ಷ ಇಂದು ಸಾಯಿಂಕಾಲ ಚಿತ್ರದುರ್ಗದ ಅವರ ಸ್ವಗೃಹದಲ್ಲಿ ಇಹ್ಯಲೋಕ ತ್ಯಜಿರುತ್ತಾರೆ
.ಶ್ರೀಯುತರ ಅಂತ್ಯಕ್ರಿಯೆಯನ್ನು ನಾಳೆ ಶುಕ್ರವಾರ ಚಿತ್ರದುರ್ಗದಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ವಯೋಸಹಜತೆಯಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿರುತ್ತಾರೆ. ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ
.ಇಬ್ಬರು ಪುತ್ರರು ಇಬ್ಬರು ಪುತ್ರಿಯರು ಸೇರಿದಂತೆ ಆಪಾರ ಕುಟುಂಬ ವರ್ಗದವರುನ್ನು ಬಿಟ್ಟು ಆಗಲಿದ್ದಾರೆ.ಇವರ ಅಂತ್ಯಕ್ರಿಯೆ ಚಿತ್ರದುರ್ಗದ ನಗರದಲ್ಲಿ ನೇರವೇರಲಿದೆ ಎಂದು ಸಂಬಧಿಕರಾದ ಸುದೀರ್ ರೆಡ್ಡಿ ತಿಳಿಸಿದ್ದಾರೆ. ಶ್ರೀಯುತರ ಆತ್ಮಕ್ಕೆ ಜಗಳೂರು ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ .ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ.ಪಿ ಪಾಲಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಪ್ರಕಾಶರೆಡ್ಡಿ. ಬಿ ಮಹೇಶ್ವರಪ್ಪ ಶಾಂತಿ ಕೋರಿದ್ದಾರೆ
ಮಾಜಿ ಸಚಿವರ ಧರ್ಮ ಪತ್ನಿಯವರಾದ ಜಿ ಹೆಚ್ ತಿಪ್ಪಮ್ಮನವರು ಈ ಹಿಂದೆ ಕಳೆದ ಎರಡು ತಿಂಗಳುಗಳ ಹಿಂದೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಕೆಲವೆ ತಿಂಗಳುಗಳಲ್ಲಿ ವಿಧಿವಶರಾಗಿರುತ್ತಾರೆ ಎಂದು ನೆನೆದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ..