ಪೋಡಿಸಂಖ್ಯೆ ಸರಿಪಡಿಸಲು ಲಂಚ: ಡಿಡಿಎಲ್ಆರ್ ಇಲಾಖೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ
ದಾವಣಗೆರೆ: ಪೋಡಿಸಂಖ್ಯೆ ಸರಿಪಡಿಸಲು ಲಂಚ: ಡಿಡಿಎಲ್ಆರ್ ಇಲಾಖೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ ೯
ದಾವಣಗೆರೆ: ಜಮೀನಿನ ಚೆಕ್ ಬಂದಿ, ಪೋಡಿ ಸಂಖ್ಯೆ ಸರಿಪಡಿಸಲು ಮುಂಗಡವಾಗಿ ಐದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಡಿಡಿಎಲ್ಆರ್ ಇಲಾಖೆಯ ಕಚೇರಿ ವ್ಯವಸ್ಥಾಪಕರನ್ನು ಗುರುವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಡಿಡಿಎಲ್ಆರ್ ಇಲಾಖೆಯ ಕಚೇರಿ ವ್ಯವಸ್ಥಾಪಕ ಕೇಶವಮೂರ್ತಿ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ.
ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಕೆ.ಎಸ್. ಮೀನಾಕ್ಷಮ್ಮ ಎಂಬುವರ ಸರ್ವೆ 65/ 7 ರ ಜಮೀನಿನ 12 ಗುಂಟೆ ಪ್ರದೇಶದ ಚೆಕ್ ಬಂಧಿ ಮತ್ತು ಪೋಡಿ ನಂಬರ್ ಅದಲು ಬದಲು ಆಗಿತ್ತು. ಸರಿಪಡಿಸಿಕೊಡುವಂತೆ ಮೀನಾಕ್ಷಮ್ಮ ಅವರ ಪರವಾಗಿ ಪಿ.ಜಿ. ಮುನಿಯಪ್ಪ ಎಂಬುವರು ಡಿಡಿಎಲ್ಆರ್ ಇಲಾಖೆಯ ಕಚೇರಿ ವ್ಯವಸ್ಥಾಪಕರಿಗೆ ಅರ್ಜಿ ಸಲ್ಲಿಸಿದ್ದರು. ಸರಿಪಡಿಸಲು ಕೇಶವಮೂರ್ತಿ 40 ಸಾವಿರದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 30 ಸಾವಿರಕ್ಕೆ ಕೆಲಸ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು.
ಈತನ ಬಗ್ಗೆ ಮುನಿಯಪ್ಪ ಅವರು ಲಂಚದ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಗುರುವಾರ ಸಂಜೆ ಕೇಶವಮೂರ್ತಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲೇ ಮುಂಗಡವಾಗಿ ಐದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಯುಕ್ತ ಎಸ್ ಪಿ . ಎಂ ಎಸ್ ಕೌಲಾಪೂರಿ ನೇತೃತ್ವದಲ್ಲಿ ಅವರ ಸಿಬ್ಬಂದಿಗಳು ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.