Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೧೫

ಭದ್ರಾಮೇಲ್ದಂಡೆ ಯೋಜನೆ ಅನುದಾನವನ್ನು ಸಂಸದರು ಶೀಘ್ರ ಬಿಡುಗಡೆ ಗೊಳಿಸಲಿ:ಕಲ್ಲೇಶ್ ರಾಜ್ ಪಟೇಲ್ ಒತ್ತಾಯ.

ಜಗಳೂರು ಸುದ್ದಿ:ಭದ್ರಾಮೇಲ್ದಂಡೆ ಯೋಜನೆ ಅನುದಾನ ಬಿಡುಗಡೆಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಕೇಂದ್ರಸರಕಾರಕ್ಕೆ ಒತ್ತಡ ತರಲಿ ಎಂದು ಕೆಪಿಸಿಸಿ ಸದಸ್ಯ ಹಾಗೂ ದಾವಣಗೆರೆ ಲೋಕಸಭಾ ಆಕಾಂಕ್ಷಿ ಕಲ್ಲೇಶ್ ರಾಜ್ ಪಟೇಲ್ ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು‌.

ಬಹುದಿನ ಕನಸಿನ ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಿ ಕೇಂದ್ರ ಆಡಳಿತ ಸರಕಾರ ಕಳೆದ ಬಜೆಟ್ ನಲ್ಲಿ ₹5300ಕೋಟಿ ಅನುದಾನ ಘೋಷಿಸಿ ಅನುದಾನ ಬಿಡುಗಡೆ ಭರವಸೆ ನೀಡಿತ್ತು‌.ಇದರ ಕಡತ ಪ್ರಧಾನಮಂತ್ರಿ ಕಛೇರಿಯಲ್ಲಿದೆ.ಸಚಿವ ಸಂಪುಟದಲ್ಲಿ ಇದುವರೆಗೂ ಚರ್ಚೆಯಾಗಿಲ್ಲ.ತಾಲೂಕಿನಲ್ಲಿ ಭದ್ರಾಮೇಲ್ದಂಡೆ ಕಾಮಗಾರಿ ಆರಂಭವಾಗಿದೆ.ಕೆಲವಡೆ ಭೂಸ್ವಾಧೀನಮಾಡಿಕೊಳ್ಳಬೇಕಿದೆ.ಅಧಿಕೃತವಾಗಿ ಘೋಷಿಸಿದರೆ ಶೀಘ್ರ ಕಾಮಗಾರಿ ಪೂರ್ಣಗೊಳ್ಳುತ್ತದೆ.

ಇದರಿಂದ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿ
18423ಹೆಕ್ಟರ್ ಪ್ರದೇಶ ನೀರಾವರಿ ಸೌಲಭ್ಯ ಸಿಗಲಿದೆ.9ಕೆರೆಗಳು ಭರ್ತಿಯಾಗಲಿವೆ.ಕೂಡಲೇ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್,ಚಿತ್ರದುರ್ಗ ಸಂಸದ ಹಾಗೂ ಕೇಂದ್ರ ಸಚಿವ ನಾರಾಯಣಸ್ವಾಮಿ,ಉಡುಪಿ-ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ,ಅವರು ಸಂಪುಟದಲ್ಲಿ ಅನುಮೋದನೆಗೊಳಿಸಿ ಹಣ ಬಿಡುಗಡೆಗೆ ಒತ್ತಡ ತರಬೇಕಿದೆ.ದಾವಣಗೆರೆ ಜಿಲ್ಲೆಯ ಸಂಸದ ಜಿ.ಎಂ ಸಿದ್ದೇಶ್ವರ್ ಅವರು ಜನತೆಗೆ ಸ್ಪಂದಿಸದೆ ನಿರ್ಲಕ್ಷ್ಯವಹಿಸಿ ಜಿಲ್ಲೆಯ ರೈತರಿಗೆ ಅನ್ಯಾಮಾಡುತ್ತಿರುವುದು ಖಂಡನೀಯ ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

You missed

error: Content is protected !!