ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮದ ಸತ್ಯಮ್ಮ ದೇವಿ ರಥೋತ್ಸವ ಬುಧವಾರ ದಿ ಮಾರ್ಚ್ 15 ರಂದು 4.30 ಸಮಯದಲ್ಲಿ ವಿಜೃಂಭಣೆಯಿಂದ ಜರುಗಿತು . ಸುಕ್ಷೇತ್ರದ ಸತ್ಯಮ್ಮ ದೇವಿಗೆ ಆಪಾರ ಭಕ್ತ ಸಮೂಹ ರಥೋತ್ಸವಕ್ಕೆ ಭಾಗಿಯಾಗಿ ಬಾಳೆ ಹಣ್ಣು ಎಸೆಯುವ ಮೂಲಕ ದೇವರ ದರ್ಶನ ಪಡೆದು ದೇವಿ ಕೃಪೆಗೆ ಪಾತ್ರರಾದರು. ವಿವಿಧ ಬಾಗಗಳಿಂದ ಆಗಮಿಸಿದ ಸದ್ಭಕ್ತರಿಗೆ ಜಾತ್ರಮಹೋತ್ಸವಕ್ಕೆ ಪ್ರತಿ ವರ್ಷದಂತೆ ಈ ಬಾರಿಯು ಕೂಡ ಸತ್ಯಮ್ಮ ದೇವರ ಪೂಜಾ ಕೈಂಕಾರ್ಯದಲ್ಲಿ ಪಾಲ್ಗೋಂಡಿದ್ದರು ಮಹಿಳೆಯರು ಮಕ್ಕಳು ವಯಸ್ಕರು ಆಪಾರ ಸಂಖ್ಯೆಯಲ್ಲಿ ಜನಸ್ತೋಮದ ನಡುವೆ ರಥೋತ್ಸವ ಜರುಗಿತು.. ರಥೋತ್ಸವ ಸಾಗುವ ಸಂದರ್ಭದಲ್ಲಿ ಭಕ್ತರು ಬಾಳೆ ಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳುನ್ನು ಹಿಡೇರಿಸುವಂತೆ ಶ್ರೀ ಸತ್ಯಮ್ಮ ದೇವಿಗೆ ಹಣ್ಣು ಕಾಯಿ ಕೊಟ್ಟು ಬೇಡಿಕೊಳ್ಳುವ ದೃಶ್ಯ ಕಂಡುಬಂದಿತು