ಪಪಂ ಬಜೆಟ್ ಸಭೆಯಲ್ಲಿ ಪಪಂ ಅದ್ಯಕ್ಷೆ ವಿಶಾಲಾಕ್ಷಿ ಒಬಳೇಶ್ ರವರು 52.44.28.117.೦೦ ರೂಗಳ ಬಜೆಟ್ ಮಂಡನೆ ಜಗಳೂರು ಪಟ್ಟಣದ ಕೃಷ್ಣ ಬಡಾವಣೆಯಲ್ಲಿರುವ ನೂತನ ಪಪಂ ಕಚೇರಿ ಸಭಾಂಗಣದಲ್ಲಿ 2023_2024 ನೇ ಸಾಲಿನ ಅಯವ್ಯಯ ಬಜೆಟ್ ತಯಾರಿಸಿ ಸಭೆಯಲ್ಲಿ ಮಂಡಿಸಲಾಯಿತು 52.44.28.117.00 ರೂಗಳ ಆದಾಯ ನಿರೀಕ್ಷಿಸಲಾಗಿದ್ದು 52.41.97.777.೦೦ ರೂಗಳ ವೆಚ್ಚಗಳೆಂದು ಅಂದಾಜಿಸಲಾಗಿದೆ.2,30,340.00 ಗಳ ಉಳಿತಾಯ ಆಯವ್ಯಯ ಮಂಡನೆ ಮಾಡಲಾಗಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಅಭಿವೃದ್ಧಿಗೆ 5.93.634 ರೂಗಳು ಹಾಗೂ ಹಿಂದುಳಿದ ವರ್ಗದವರ ಅಭಿವೃದ್ಧಿಗೆ 1.78.583 ರು. ವಿಕಲಚೇತನರ ಕಲ್ಯಾಣಕ್ಕಾಗಿ 73 .896ರೂ ಕ್ರೀಡಾ ಯೋಜನೆಗಾಗಿ 24 .632 ಸೇರಿದಂತೆ ಬೀದಿ ನಾಯಿಗಳ ಸಂತಾನ ನಿಯಂತ್ರಣ 1 ಅನುಪಾತ 24 .632 ರೂಗಳುನ್ನ ಮೀಸಲಿಡಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಅವರು ಬಜೆಟ್ ಮಂಡನೆ ಮಾಡಿ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು ಪಟ್ಟಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಹೆಚ್ವಿನ ಆದ್ಯತೆ ನೀಡಿ ಅವಶ್ಯಕತೆಯಿರುವ ಕಾಮಗಾರಿಗಳುನ್ನು ಕೈಗೆತ್ತಿಕೊಳ್ಳಲಾಗುವುದು .ರಸ್ತೆ ಚರಂಡಿ ಕುಡಿಯುವ ನೀರು ಮೂಲಸೌಲಭ್ಯಕ್ಕಾಗಿ ಒತ್ತು ನೀಡಲಾಗುವುದು. ಕರ ವಸೂಲಿಗೆ ವಿಶೇಷ ಆದ್ಯತೆ ನೀಡಿ ಪಪಂ ಆದಾಯವನ್ನು ದ್ವಿಗುಣಗೋಳಿಸಿ ಜನಸ್ನೇಹಿ ಆಡಳಿತ ನಡೆಸಲು ಬದ್ದವಾಗಿದ್ದು ಪಪಂ ಆಡಳಿತ ಮತ್ತು ನಾಗರಿಕರು ಸಹಕರಿಸಬೇಕೆಂದರು. ಪಪಂ ಸದಸ್ಯ ಎನ್ ರವಿಕುಮಾರ್ ಮಾತನಾಡಿ ಪಟ್ಟಣದಲ್ಲಿ ಕುಡಿಯುವ ನೀರಿನ ನಿರ್ವಹಣೆ ಸರಿಯಾಗಿ ನಿರ್ವಹಿಸುತ್ತಿಲ್ಲ ಬೇಸಿಗೆ ಕಾಲದಲ್ಲಿ ಮುಖ್ಯವಾಗಿ ಕುಡಿಯುವ ನೀರಿಗೆ ಆದ್ಯತೆ ನೀಡಬೆಕು ಬರುವ ಏಪ್ರಿಲ್ ತಿಂಗಳಲ್ಲಿ ಜಗಳೂರು ಮಾರಿಕಾಂಬ ಜಾತ್ರಮಹೋತ್ಸವವಿದ್ದು ಪೂರಕವಾಗಿ ಪಟ್ಟಣದ ಜನತೆಗೆ ನೀರು ಒದಗಿಸಲು ಮುಂದಾಗುವಂತೆ ತಿಳಿಸಿದರು .ಕುಡಿಯುವ ನೀರಿನ ಮೋಟರ್ ದುರಸ್ತೆಗೆ ನಿಡಿದ ಮೋಟರ್ ರಿಪೇರಿಗೆ ಹಣ ನೀಡದೆ ಇರುವಷ್ಟು ದಿವಾಳಿತನಕ್ಕೆ ಪಪಂ ಇಲಾಖೆ ಬಂದಿದೆ ಎಂದರೆ ನಾಚಿಕೆಗೇಡಿತನ ಎಂದುಅ ಅಧಿಕಾರಿಗಳ ವಿರುದ್ದ ಹರಿಹಾಯ್ದರು.ನಾಮನಿರ್ದೇಶನ ಸದಸ್ಯ ಬಿ ಪಿ ಸುಭಾನ್ ಮಾತನಾಡಿ ಘನತ್ಯಾಜ್ಯ ವಿಲೆವಾರಿ ಘಟಕ್ಕಾಗಿ ಜಾಗ ಖರಿದಿಸಲಾಗಿದೆ ಆದರೆ ಆ ಘಟಕದ ಸುತ್ತ ಕಾಂಪೌಂಡ್ ನಿರ್ಮಿಸದೆ ಅಭಿವೃದ್ಧಿ ಮರಿಚೀಕೆಯಾಗಿದೆ. ವಸೂಲಾದ ಕಂದಾಯದ ಲೆಕ್ಕಾವೆಷ್ಟು ಎಂದು ಪ್ರಶ್ನಿಸಿದರು. ಪಪಂ ಮಾಜಿ ಆದ್ಯಕ್ಷ ಅರ್ ತಿಪ್ಪೇಸ್ವಾಮಿ ಮಾತನಾಡಿ ಸರ್ಕಾರ ಪಪಂ ಸದಸ್ಯರ ಗೌರವಧನ ಹೆಚ್ಚಿಸಬೇಕು ಇದೀಗ ನಿಡುತ್ತಿರುವ ಗೌರವಧನ ಸಾಕಾಗುತ್ತಿಲ್ಲ ಎಂದರು ಪಪಂ ಸದಸ್ಯ ಬಿ ಕೆ ರಮೇಶಣ್ಣ ಮಾತನಾಡಿ ಪೌರಕಾರ್ಮಿಕರಿಗೆ ವರ್ಷಕ್ಕೊಂದು ಬಾರಿ ಯುಗಾದಿ ಹಬ್ಬಕ್ಕೆ ಬೊನಸ್ ನೀಡಬೇಕು ಅವರುಗಳು ನಗರ ಸ್ವಚತೆಯಲ್ಲಿ ಬಹುಮಖ್ಯ ಪಾತ್ರವಹಿಸಲಿದ್ದಾರೆ ಎಂದರು.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ಮಾತನಾಡಿ 15 ನೇ ಹಣಕಾಸು ಎಸ್ ಎಪ್ ಸಿ ಯೋಜನೆಡಿಯಲ್ಲಿ 2 ಕೋಟಿ ಅನುದಾನ ಮೀಸಲಿರಿಸಿದ್ದು ಕುಡಿಯುವ ನೀರಿಗಾಗಿ 40 ಲಕ್ಷ ಸೆರಿದಂತೆ ಅಗತ್ಯ ಸೌಕರ್ಯಗಳಿಗೆ ಆದ್ಯತೆ ನೀಡಿ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಸರ್ಕಾರ ವಿಧಾನ ಸಭಾ ಚುನಾವಣೆ ಕುರಿತು ಪಟ್ಟಣದಲ್ಲಿ ಬೇಕಾ ಬಿಟ್ಟಿ ಬ್ಯಾನರ್ ಬಂಟಿಗ್ಸ್ ಆಳವಡಿಸುವುದನ್ನ ತೆರೆ ಎಳೆಯಲಾಗಿದೆ ಪಪಂ ಇಲಾಖೆ ಪರವಾನಿಗೆಯಿಲ್ಲದೆ ಪ್ಲಕ್ಸ್ ಗಳು ಆಳವಡಿಸುವಂತಿಲ್ಲ ಎಂದು ಸಭೆಯ ಗಮನಕ್ಕೆ ತಂದರು ಈ ಸಂದರ್ಭದಲ್ಲಿ ಪಪಂ ಉಪಾದ್ಯಕ್ಷೆ ನಿರ್ಮಲಕುಮಾರಿ.ಹಾಲಿ ಸದಸ್ಯ ಮಾಜಿ ಅದ್ಯಕ್ಷ ಅರ್ ತಿಪ್ಪೇಸ್ವಾಮಿ. ಮಾಜಿ ಉಪಾದ್ಯಕ್ಷೆ ಹಾಲಿ ಸದಸ್ಯ ಲಲಿತಾಮ್ಮ ಶಿವಣ್ಣ ಪಪಂ ಸದಸ್ಯರಾದ ದೇವರಾಜ್.ಲುಖ್ಮಾನ್ ಖಾನ್.ಮಂಜಣ್ಣ.ಹಾಲಿ ಸದಸ್ಯರು ಮಾಜಿ ಅದ್ಯಕ್ಷರು ರೇವಣಸಿದ್ದಪ್ಪ.ಪಪಂ ಸದಸ್ಯರಾದ ಸರೋಜಮ್ಮ.ಲೋಕಮ್ಮ.ಎನ್ ರವಿಕುಮಾರ್. ಪಪಂ ಅರೋಗ್ಯ ಅಧಿಕಾರಿ ಕಿಪಾಯತ್.ಸಿಬ್ಬಂದಿಗಳಾದ ನಾಯ್ಕ್.ಭರಮಣ್ಣ ಸೇರಿದಂತೆ ಮುಂತಾದವರು ಹಾಜರಿದ್ದರು.