ದೇಶಿಯ ದಾರ್ಶನಿಕ ಕವಿ ಮಹಾಲಿಂಗ ರಂಗನ ಸಮಾಧಿ ಸ್ಥಳ ಕೊಣಚಗಲ್ ಬೆಟ್ಟದ ತಪ್ಪಲಿನ ಸ್ಥಳನಾಮದಿಂದ ಜಗಳೂರು ನಾಡ ಇತಿಹಾಸದ ಹಿರಿಮೆ ಗರಿಮೆ ಹೆಚ್ಚಿದೆ ಕ.ಸಾ.ಪ.ಅಧ್ಯಕ್ಷ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ ೨೧
ಸುದ್ದಿ ಜಗಳೂರು
ಜಗಳೂರು ತಾಲ್ಲೂಕಿನ ಗೌರಿಪುರ ಸರ್ಕಾರಿ ಪ್ರೌಡಶಾಲಾಂಗಳದಲ್ಲಿ ಮಂಗಳವಾರ ಜಗಳೂರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಗಿದ್ದ ಉದ್ಗಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಕರ್ತ ಹಾಗೂ ಕಸಾಪ ಬಿಳಿಚೋಡು ಹೊಬಳಿ ಘಟಕದ ಅದ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿರವರು ಅನುಭವಿ ಕವಿ ಮಹಾಲಿಂಗ ರಂಗನ ಕುರಿತು ವಿಷಯ ಮಂಡನೆ ಮಂಡಿಸಿದರು ಅನುಭವಮೃತ ಕಾವ್ಯನಾಮದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಆಪಾರವಾದ ಕೊಡುಗೆ ನೀಡಿದ ಕವಿ ಕ್ರಿ.ಶ ೬೦೭೬ ರ ಕಾಲಘಟ್ಟದ ೧೭ ನೇ ಶತಮಾನದಲ್ಲಿ ಭಾಮಿನಿ ಷಟ್ಪದಿಯಲ್ಲಿ ಕಾವ್ಯ ರಚನೆ ಮಾಡುವುದರ ಜೊತೆಗೆ ಅವರ ಕಾವ್ಯನಾಮದಲ್ಲಿ ಕನ್ನಡ ಭಾಷೆ ಬಗ್ಗೆ ಬಣ್ಣಿಸಿದ್ದಾರೆ.
ಸುಲಿದ ಬಾಳೆಯ ಹಣ್ಣಿನಂದದಿ.
ಕಳೆದ ಸಿಗುರಿನ ಕಬ್ಬಿನಂದದಿ.
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ.
ಲಲಿತವಹ ಕನ್ನಡದ ನುಡಿಯಲಿ.
ತಿಳಿದು ತನ್ನೊಳು ತನ್ನ ಮೋಕ್ಷವ. ಎಂಬ ಸಾಲುಗಳ ಮೂಲಕ ಕನ್ನಡ ನಾಡಿಗೆ ಕೊಡುಗೆ ನೀಡಿದ ದಾರ್ಶನಿಕ ಕವಿ ಮಹಾಲಿಂಗ ರಂಗ ಅವರ ಕೊನೆಯ ದಿನಗಳ ಅವಧಿಯಲ್ಲಿ ಜಗಳೂರು ತಾಲ್ಲೂಕಿನ ಕೊಣಚಗಲ್ ಬೆಟ್ಟದ ಅಜ್ಞಾತ ಸ್ಥಳದ ಬೆಟ್ಟದ ಗುಹೆಗಳಲ್ಲಿ ತಪ್ಪಸ್ಸು ಮಾಡಿ ಅಲ್ಲಿಯೇ ಐಕ್ಯವಾದ ನಂತರ ಬೆಟ್ಟದ ಪೂಜಾ ಹೊಂಡದ ಬಳಿ ಅಂದಿನ ಅರಸ ಚಿಕ್ಕಣ್ಣ ನಾಯಕ ಆಡಳಿತಾವಧಿಯಲ್ಲಿ ರಾಜಾ ಮರ್ಯಾದಿಯೊಂದಿಗೆ ಸಮಾಧಿ ಮಾಡಲಾಗಿರುವುದನ್ನ ಸಂಶೋಧಕರಾದ ಸಾಹಿತಿ ಮಲ್ಲಿಕಾರ್ಜುನಪ್ಪ ಗುರುತಿಸಿ ಕೃತಿ ಹೊರತಂದಿರುವುದು ಶ್ಲಾಘನೀಯ.. ಅಂದಿನ ಚಿತ್ರದುರ್ಗ ಪಾಳೆಗಾರರ ಆಡಳಿತದಲ್ಲಿ ದಳವಾಯಿ ಮುದ್ದಣ್ಣ ಕೊಣಚಗಲ್ ಬೆಟ್ಟದಲ್ಲಿ ಪುಷ್ಕರಣಿ ಅಭಿವೃದ್ಧಿಪಡಿಸಲಾಗಿದೆ.ಒಟ್ಟಾರೆ ಜಗಳೂರಿನ ಇತಿಹಾಸ ಪುಟಗಳ ದಾಖಲೆ ಸಾರ್ಥಕ ವಿದ್ಯಾರ್ಥಿಗಳು ಕನ್ನಡ ನಾಡಿನ ಅನೇಕ ದೇಶಿಯ ಕವಿಗಳ ಪರಿಚಯದ ಬಗ್ಗೆ ಅರಿಯಬೇಕಿದೆ.ಜಗಳೂರು ತಾಲ್ಲೂಕಿನಲ್ಲಿ ಬೆಟ್ಟ ಗುಡ್ಡಗಳು ಗವಿಮಠದ ಕಣ್ವಕುಪ್ಪೆಯಂತ ಕೊಟೆಕೊತ್ತಲಗಳ ನಾಡಿನ ಇತಿಹಾಸ ಪರಂಪರೆಯಿದೆ. ಎಂದು ಅಭಿಪ್ರಾಯಪಟ್ಟರು
ಕ.ಸಾ.ಪ.ಬಳಗದ ಪದಾಧಿಕಾರಿಗಳಾದ ಓಬಣ್ಣ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಾಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ಸಾಹಿತ್ಯಭಿರುಚಿ ಮೂಡಿಸಲು ಈ ಕಾರ್ಯಕ್ರಮ ಅತ್ಯಂತ ವಿಶಿಷ್ಟ ಪೂರ್ಣವಾಗಿದೆ.
.
ಗೌರಿಪುರದ ಸರ್ಕಾರಿ ಪ್ರೌಡಶಾಲಾ ಮುಖ್ಯೋಪಾಧ್ಯಾಯರಾದ ರೇವಣ್ಣಸಿದ್ದಪ್ಪ ಮಾತನಾಡಿ ಕನ್ನಡ ಭಾಷೆಗೆ ೨೫೦೦ ಸಾವಿರ ವರ್ಷಗಳ ಇತಿಹಾಸವಿದ್ದು ಕನ್ನಡ ಭಾಷೆ ಸುಲಿದ ಬಾಳೆ ಹಣ್ಣಿನಂತೆ ಸುಲಲಿತವಾದ ಭಾಷೆಯಾಗಿದ್ದು ೮ ಜ್ಞಾನ ಪೀಠ ಪ್ರಶಸ್ತಿ ಲಭಿಸಿರುವುದು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು.ಶಿಕ್ಷಕಿ ಎನ್ ಶಾರದಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಎ.ಮಂಜುನಾಥ.ಜೆ ಪಾಲಾಕ್ಷಪ್ಪ.ಸಿ .ಮಧು ಶಶಿಕಲಾ ಅಕ್ಕನಾಗಮ್ಮ ಸೇರಿದಂತೆ ವಿದ್ಯಾರ್ಥಿಗಳು ಮುಂತಾದವರು ಶಿಕ್ಷಕರು ಹಾಜರಿದ್ದರು.