ಶುಕ್ರದೆಸೆ ನ್ಯೂಸ್ :-ಜಗಳೂರು

ಕ್ಷೇತ್ರಕ್ಕೆ ನೂತನವಾಗಿ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ  ಎಸ್ ಎಸ್ ಮಲ್ಲಿಕಾರ್ಜುನ ರವರಿಗೆ   ಅದ್ದೂರಿ ಸ್ವಾಗತದೊಂದಿಗೆ ಕ್ಷೇತ್ರದ    ಶಾಸಕ ಬಿ ದೇವೇಂದ್ರಪ್ಪ ಹಾಗೂ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಬರಮಾಡಿಕೊಂಡರು .

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೨೧ 

ಜಗಳೂರು ಪಟ್ಟಣಕ್ಕೆ  ಸಚಿವರಾಗಿ ಆಯ್ಕೆಯಾದ ದಿನಗಳಿಂದಲೂ ಕ್ಷೇತ್ರಕ್ಕೆ   ಗಣಿ ಮತ್ತು ಭೂವಿಜ್ಞಾನ   ಹಾಗೂ ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ರವರು ತಾಲ್ಲೂಕಿಗೆ ಆಗಮಿಸಿರಲಿಲ್ಲ ದಿ.೨೧ ಮಂಗಳವಾರ ಜನಸ್ವಂದನಾ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ಸಚಿವರಿಗೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತ ಅಭಿಮಾನಿಗಳು ಮತ್ತು ಶಾಸಕರು ಅದ್ದೂರಿ ಸಂಭ್ರದಿಂದ ಬರಮಾಡಿಕೊಂಡು ಬೃಹತ್ತಾದ ಹೂವಿನ  ಹಾರ ಹಾಕಿ  ಸ್ವಾಗತ ಕೋರಿದರು. ನಂತರ ಶಾಸಕರ ಜನ ಸಂಪರ್ಕ ಕಛೇರಿಗೆ ತೆರಳಿ ಕಾರ್ಯಕರ್ತರುನ್ನು ಉದ್ದೇಶಿ ಅವರು ಮಾತನಾಡಿದರು ಜಗಳೂರು ಪ್ರದೇಶ ರಾಜ್ಯದಲ್ಲಿಯೆ ಅತ್ಯಂತ ಹಿಂದೂಳಿದ ಕ್ಷೇತ್ರಕ್ಕೆ ನಮ್ಮ ಸರ್ಕಾರದ ಯೋಜನೆಗಳುನ್ನು ಕ್ಷೇತ್ರದ ಜನತೆಗೆ ಪ್ರಾಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದು ಕ್ಷೇತ್ರದ ಮಹತ್ವದ ಯೋಜನೆಯಾದ 57 ಕೆರೆ ತುಂಬಿಸುವ ಯೋಜನೆಡಿ ಈಗಾಗಲೇ ಕೆಲ ಕೆರೆಗಳಿಗೆ  ನೀರು ಬಿಡಲಾಗಿದ್ದು ಕಾಮಗಾರಿ ಚುರುಕುಗೋಳಿಸಲಾಗುವುದು.

ಪಟ್ಟಣದಲ್ಲಿ ಯುಜಿಡಿ ಯೋಜನೆಯಡಿಯಲ್ಲಿ ಒಳಚರಂಡಿ ವ್ಯವಸ್ಥೆಗೆ ಒತ್ತು ನೀಡಲಾಗುವುದು .ಈಗಾಗಲೇ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿರುವ ಜಗಳೂರು ತಾಲ್ಲೂಕು ಕೇಂದ್ರಕ್ಕೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಪಟ್ಟಣ ಮತ್ತು ಗ್ರಾಮೀಣ ಬಾಗಗಳಲ್ಲಿ ರಸ್ತೆ ಚರಂಡಿ .ಕುಡಿಯುವ ನೀರು ಮೂಲಭೂತ ಸೌಕರ್ಯಗಳ ಆದ್ಯತೆ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬರುವ ಲೋಕಸಭಾ ಚುನಾವಣೆ ದಾವಣಗೆರೆ ಕ್ಷೇತ್ರವನ್ನ ಕಾಂಗ್ರೆಸ್ ಗೆಲುವಿಗೆ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುವಂತೆ ತಿಳಿಸಿದರು.

ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ರವರ ಸಹಕಾರದಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ದವಾಗಿರುವೆ.ನಮ್ಮ  ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳು ಇಂತ ಬರಪೀಡಿತ ತಾಲ್ಲೂಕು ಕೇಂದ್ರಕ್ಕೆ ಅತ್ಯಂತ ಸಹಕಾರಿಯಾಗಿವೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಕೆಪಿಸಿಸಿ ಕಾರ್ಯಧರ್ಶಿ ಅಸಗೋಡು ಜಯಸಿಂಹ. ಕಾಂಗ್ರೆಸ್ ಮಾಜಿ ಬ್ಲಾಕ್ ಅಧ್ಯಕ್ಷ ಪಿ ಎಸ್ ಸುರೇಶ್ ಗೌಡ್ರು.ಬ್ಲಾಕ್ ಅಧ್ಯಕ್ಷ ಷಂಷೀರ್ ಆಹಮದ್.ಕೆ ಪಿ ಸಿಸಿ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆಪಿ.ಪಾಲಯ್ಯ. ಬ್ಲಾಕ್ ಅಧ್ಯಕ್ಷರಾದ ಕಂಬತ್ತಹಳ್ಳಿ ಮಂಜಣ್ಣ   ಕೆಪಿಸಿಸಿ ಸದಸ್ಯ ಹಾಗೂ ಲೋಕಸಭಾ ಆಕಾಂಕ್ಷಿ ಕಲ್ಲೇಶ್ ರಾಜ್ ಪಟೇಲ್. ಲೋಕಸಭಾ ಚುನಾವಣೆ ಆಕಾಂಕ್ಷಿ ಶಿವಕುಮಾರ್ ಒಡೆಯರ್ .ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ.ಮಹಮದ್ ಗೌಸ್ ಸೇರಿದಂತೆ ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!