ಜಗಳೂರು ಪಟ್ಟಣದಲ್ಲಿ ಸಂವಿಧಾನ ಸಮರ್ಪಣಾ ದಿನ ಅರ್ಥಪೂರ್ಣ .
. ಬೃಹತ್ ಸಂವಿಧಾನವನ್ನ ನಮಗೆ ನಾವೆ ಸಮರ್ಪಿಸಿಕೊಂಡ ಮಹತ್ವದ ನವೆಂಬರ್ 26 ರ ಸುದೀನವಾಗಿದೆ ಎಂದು ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಹೇಳಿದರು.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ 26
ಸಂವಿಧಾನದ ದಿನದ ಅಂಗವಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ದಸಂಸ ಪ್ರೊ ಬಿ ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಸಂವಿಧಾನದ ಅಂಗೀಕಾರ ನವೆಂಬರ್ 26.ರ ದಿನವನ್ನ ಸ್ಮರಿಸಿಕೊಳ್ಳುವ ಮೂಲಕ ಬಾಬಾ ಸಾಹೇಬ್ ಡಾ .ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂವಿಧಾನ ಗೀತೆ ಹಾಡುವುದರ ಜೊತೆಗೆ ದೇಶದ ಸಂವಿಧಾನದ ಪೀಠಿಕೆ ಓದಲಾಯಿತು.
ದೇಶಕ್ಕೆ ವಿಶಿಷ್ಟ ಸಂವಿಧಾನದ ಕೊಡುಗೆಯಿಂದ ಭಾರತ ದೇಶದ ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗಿದೆ .ಬಹುಜನರ ಭಾರತ ವಿವಿದತೆಯಲ್ಲಿ ಏಕತೆ ದೇಶಕ್ಕೆ ಅಂಬೇಡ್ಕರ್ ರಂತ ನಾಯಕರು ಹುಟ್ಟಿರುವುದು ನಮ್ಮ ನಿಮ್ಮೆಲ್ಲ ಪುಣ್ಯ ಎಂದರು.
ವಕೀಲರಾದ ಹೆಚ್ ಹನುಮಂತಪ್ಪ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್
ಅಂಬೇಡ್ಕರ್ ರವರ ರಚಿಸಿರುವ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದೆ ಎಂದರು.
.ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ ಭಾರತೀಯ ಸಂವಿಧಾನದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸಂವಿಧಾನದಲ್ಲಿ ಅನೇಕ ಕಾನೂನು ಕ್ರಮಗಳನ್ನು ಜಾರಿಗೆ ತಂದರು ಸಹ ಜಾತಿ ವ್ಯವಸ್ಥೆಯು ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ ಸಂಪೂರ್ಣ ನಿರ್ಮೂಲನೆಯು ಕಾನೂನು ವಿಧಾನಗಳಿಂದ ಮಾತ್ರ ಸಾಧ್ಯವಾಗಲಿಲ್ಲ ಈ ತಂತ್ರಜ್ಞಾನ ಜಾಗತಿಕ ಜಗತ್ತಿನಲ್ಲಿ ಜಾತಿಯತೆ ಹೆಚ್ಚಾಗಿ ಮಾನವೀಯತೆ ಮರೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಸಂಸ ಸಂಚಾಲಕ ಕುಬೇರಪ್ಪ.ದಸಂಸ ಮುಖಂಡ ಪಲ್ಲಾಗಟ್ಟೆ ರಂಗಪ್ಪ.
ಕಾಂಗ್ರೆಸ್ ಕಾರ್ಮಿಕ ಘಟಕದ ಜಂಟಿ ಕಾರ್ಯಧರ್ಶಿ ರುದ್ರೇಶ್. ಕಾಂಗೈ ಕಿಸಾನ್ ಮುಖಂಡ ಕುಮಾರ್.ರಂಗಣ್ಣ.ಮಲ್ಲೇಶಿ. ದೋಣಿಹಳ್ಳಿ ಗ್ರಾಪಂ ಅಧ್ಯಕ್ಷ ತಿಪ್ಪೇಸ್ವಾಮಿ. ಅಂಬೇಡ್ಕರ್ ಪುತ್ಥಳಿ ಸಮಿತಿ ಗೌರವಧ್ಯಕ್ಷ ಶಿವಣ್ಣ.ಮುಖಂಡರಾದ ರೇವಣ್ಣ.ಎಸ್ಸಿ ಎಸ್ಟಿ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಧ್ಯಕ್ಷ ಸಿ ಬಸವರಾಜ್.ಕಾರ್ಯಧರ್ಶಿ ಮಂಜುನಾಥ. ಸಂಘಟನೆ ಕಾರ್ಯಧರ್ಶಿ ಬಸವರಾಜ್.ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಧನ್ಯಕುಮಾರ್ .ಮಾರಪ್ಪ.ಬಾಬು ಮಾದಿಹಳ್ಳಿಮಂಜುನಾಥ.ಸೇರಿದಂತೆ ಹಾಜರಿದ್ದರು.