ನೂತನ ಎಸ್ಸಿ ಎಸ್ಟಿ  ಪತ್ರಿಕಾ ವರದಿಗಾರರು ಎಲ್ಲಾ ವರ್ಗದ ಜನರ ಜ್ವಲಂತ ಸಮಸ್ಯೆಗಳಿಗೆ ದ್ವನಿಯಾಗಲಿ.ನಿಮ್ಮ ಹಕ್ಕಿಗಾಗಿ ನಿರಂತರ ಹೋರಾಟ ಅನಿವಾರ್ಯ  ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು. 

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ನವೆಂಬರ್ ೨೯ 

ಜಗಳೂರು ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಬುಧವಾರ ನೂತನ ಕರ್ನಾಟಕ ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಗಾಟನೆ  ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ವೇದಿಕೆ ಕಾರ್ಯಕ್ರಮವನ್ನು ಉದ್ಗಾಟಿಸಿ  ಅವರು ಮಾತನಾಡಿದರು ಸಮಾಜದಲ್ಲಿ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ರವರ ವಿಶಿಷ್ಟ ಸಂವಿಧಾನದ ಆಶಯಗಳನ್ನು ನಾವು ತಿಳಿದು ಅನುಸರಿಸದೆ ನಮಗೆ ನಾವೇ ಶೊಷಣೆ ಮಾಡಿಕೊಳ್ಳುತ್ತಿದ್ಧೆವೆ. ನಾವುಗಳು ಶೈಕ್ಷಣಿಕವಾಗಿ .ಆರ್ಥಿಕವಾಗಿ ಸಾಮಾಜಿಕವಾಗಿ ಪರಿವರ್ತನೆಗೊಳ್ಳದೆ ಮೌಡ್ಯ ಕಂದಾಚಾರ ಸಮಾಜದಲ್ಲಿ ಮನೆ ಮಾಡಿದೆ ನೂತನ ಎಸ್ಸಿ ಎಸ್ಟಿ ಕ್ಷೇಮಾಭಿವೃದ್ಧಿ ಸಂಘಟನೆ ಪದಾಧಿಕಾರಿಗಳು ಸಮಾಜ ಪರಿವರ್ತನೆಗೆ ಭದ್ರಾಬುನಾದಿಯಾಗಲಿ

ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರು  ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದ ಜನರ ನೋವಿಗೆ ಮಿಡಿಯುವ ನಾಡಿಮಿಡಿತವಾಗಿ ಸ್ವಾಸ್ಥ್ಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಾದರಿ ಸಂಘಟನೆಯಾಗಿ ಬೆಳವಣಿಗೆಯಾಗಲಿ .ಸಂಘಟನೆ ಹುಟ್ಟು ಹಾಕುವುದು ಮುಖ್ಯವಲ್ಲ ಉತ್ತಮ ದೂರ ದೃಷ್ಟಿ ಚಿಂತನೆಯುಳ್ಳ ಸಂಘಟನೆ ಸಮಾಜಕ್ಕೆ ಉತ್ತಮ ಪ್ರಯೋಜನಕಾರಿಯಾಗಿ ಬೆಳವಣಿಯಾಗುವ ಮೂಲಕ ಸಂಘಟಕರು ಎಚ್ಚರಿಕೆಯಿಂದ ನಿಮ್ಮ ಮೂಲಭೂತವಾದ ಹಕ್ಕಿಗಾಗಿ ನಿರಂತರ ಹೋರಾಟ ಅನಿವಾರ್ಯ.ನಾವು ಕೂಡ ಸರ್ಕಾರದ ಮಾನ್ಯ ಮುಖ್ಯಮಂತ್ರಿ  ಸಿದ್ದರಾಮಯ್ಯನವರ ಬಳಿ  ಚರ್ಚೆ ಮಾಡುವುದರ ಜೊತೆಗೆ  ಸಂಬಂಧಿಸಿದ ವಾರ್ತ ಇಲಾಖೆ ಎಸ್ಸಿ ಎಸ್ಟಿ ಕಲ್ಯಾಣ ಮಂಡಳಿ ಇಲಾಖೆಗಳ ಮೂಲಕ ತಮ್ಮ ಸೌಲಭ್ಯಗಳನ್ನು ಪಡೆಯಲು‌ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸುವೆ . ನೂತನ ಸಂಘಕ್ಕೆ ನಮ್ಮ ಸಂಪೂರ್ಣ ಸಹಕಾರವಿದ್ದು ನಿಮ್ಮ ನಿರಂತರ ಚಟುವಟಿಕೆಯಿಂದ ಸರ್ಕಾರ ನಾಲ್ಕನೆ ಅಂಗದ ಪತ್ರಿಕಾ ಧರ್ಮವನ್ನು ನ್ಯಾಯ ನಿಷ್ಟುರವಾಗಿ ಪಾರದರ್ಶಕವಾಗಿ ತಮ್ಮ ಲೇಖನಿ ಮೂಲಕ ಸಮಾಜವನ್ನ ತಿದ್ದುವಂತ ಕೆಲಸ‌ ಮಾಡಿ ಎಂದು ಸಚಿವರು ಕರೆ ನೀಡಿದರು.

ಗ್ರಾಮೀಣ ಪತ್ರಕರ್ತರ ನೆರವಿಗೆ ನಾವು ಸದಾ ಸಹಕಾರ ನೀಡಲಿದ್ದು ನೂತನ ರಾಜ್ಯ ಮಟ್ಟದ ಸಂಘಟನೆ ಜಗಳೂರು ತಾಲ್ಲೂಕಿನಿಂದ ಪ್ರಾರಂಭವಾಗಿ  ರಾಜ್ಯಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಶ್ಲಾಘನೀಯ ಎಂದು ಶ್ಲಾಘಿಸಿದರು

..ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ಮಾತನಾಡಿ ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಸಂಘಕ್ಕೆ ನಮ್ಮ ಸಂಪೂರ್ಣ ಸಹಕಾರವಿದ್ದು ನಿಮ್ಮ ನೈಜಾ  ನಿರಂತರ ವರದಿಗಾರಿಕೆ ಮೂಲಕ ಸಮಾಜದ ಕಣ್ಣು ತೆರೆಸುವಂತಾಗಲಿ ಇಂತ ಕಾರ್ಯಕ್ರಮ ಜಗಳೂರು ತಾಲ್ಲೂಕಿನಲ್ಲಿ ಒಂದು ಐತಿಹಾಸಿಕವಾಗಿ ನಡೆಯುತ್ತಿರುವುದು ಮೈಲಿಗಲ್ಲು. ಮಾನವ ಬಂಧುತ್ವ ವೇದಿಕೆ ರೂವಾರಿಗಳು ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿರವರ ಅಮೃತ ಹಸ್ತದಿಂದ ಉದ್ಗಾಟನೆಗೊಂಡ ಸಂಘ ಮುಗಿಲೆತ್ತರಕ್ಕೆ ಬೆಳೆಯಿಲಿ ಎಂದು  ನೂತನ ಸಂಘಕ್ಕೆ ಶುಭಾ ಹಾರೈಸಿ ಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಶ್ರಮಿಸಲು ಬದ್ದವಾಗಿದ್ದೆನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಎಸ್ ಬಸವಂತಪ್ಪ ಮಾತನಾಡಿ ಪತ್ರಕರ್ತರು ಸಮಾಜದಲ್ಲಿ ನಿರಂತರ ಅನ್ಯಾಯಗಳ ವಿರುದ್ದ ತಮ್ಮ ಲೇಖನಿ ಮೂಲಕ ದ್ವನಿ ಎತ್ತುವಂತ ಕಾಯಕದಲ್ಲಿ ಸೇವೆ ಅನನ್ಯವಾಗಿದೆ. ಆದರೆ ಅವರಿಗೆ ಮೂಲಭೂತ ಸೌಕರ್ಯಗಳ ಕೊರತೆಯಿದೆ. ನಾನು ಕೂಡ ಬರುವ ಅಧಿವೇಶನದಲ್ಲಿ  ಎಸ್ಸಿ ಎಸ್ಟಿ  ಪತ್ರಕರ್ತರಿಗೆ ಎಸ್ಸಿ ಇ ಪಿ.  ಟಿ ಎಸ್ಸಿ ಪಿ ಯೋಜನೆಯಡಿಯಲ್ಲಿ ಮೂಲಸೌಕರ್ಯಗಳುನ್ನು ಒದಗಿಸಲು ಸದನದಲ್ಲಿ ಚರ್ಚೆ ಮಾಡಿ ದ್ವನಿ ಎತ್ತುವೆ .ಪತ್ರಿಕಾ ರಂಗ ಪವಿತ್ರ ರಂಗವಾಗಿದ್ದು  ನಿಮ್ಮ ಕಾರ್ಯ ಚಟುವಟಿಕೆಗಳು ಮಾದರಿಯಾಗಲಿ ಎಂದು ಶುಭಾ ಹಾರೈಸಿದರು. 

ಮಾಜಿ ಶಾಸಕ ಹೆಚ್ ಪಿ ರಾಜೇಶ್ ಮಾತನಾಡಿ ಪತ್ರಕರ್ತರಿಗೆ ಪ್ರಥಮವಾಗಿ ಜಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಲು  ನಮ್ಮ ಅವಧಿಯಲ್ಲಿ ಪತ್ರಿಕಾ ಭವನ ಸ್ಥಾಪನೆ ಮಾಡಿ  ನೆಲೆ ಕಲ್ಪಿಸಿಕೊಟ್ಟು ಅವರಿಗೆ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಪೂರ್ವತಯಾರಿ ನಡೆಸಲಾಗಿತ್ತು. ಆದರೆ ಕಾರಣಂತರದಿಂದ ಚುನಾವಣೆ ಬಂದ ಹಿನ್ನೆಲೆಯಲ್ಲಿ ಕಾರ್ಯಗತವಾಗಲಿಲ್ಲ ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರು‌ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕ್ಷೇತ್ರಕ್ಕೆ ಅನುದಾನ ನೀಡುವಂತೆ ಮನವಿ ಮಾಡಿಕೊಂಡರು    .

ಕೂಡ್ಲಿಗಿ ಶಾಸಕ ಶ್ರೀನಿವಾಸ ಮಾತನಾಡಿ ಜಗಳೂರು ಪ್ರದೇಶದಿಂದ ಎಸ್ಸಿ ಎಸ್ಟಿ ಪತ್ರಕರ್ತರ ಸಂಘ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವುದು ತುಂಬಾ ಸಂತೋಷದಾಯಕದ ಬೆಳವಣಿಗೆ ಎಂದು ನೂತನ ಸಂಘಕ್ಕೆ ಶುಭಾ ಕೋರಿದರು.

ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿ ನೂತನ ಪತ್ರಕರ್ತರ ಸಂಘ ಸಮಾಜದಲ್ಲಿ ನೊಂದವರ ದೀನದಲಿತರ ಎಲ್ಲಾ ವರ್ಗದ ಜನರ ಸಮಸ್ಯೆಗಳಿಗೆ ಸ್ವಂದಿಸಿ ತಮ್ಮ ಪತ್ರಿಕೆಗಳಲ್ಲಿ ಬಿತ್ತರಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೇವೆ ನಿರಂತರವಾಗಿರಲಿ ಎಂದು ಸಲಹೇ ನೀಡಿದರು.ಬುದ್ದ ಬಸವ ಅಂಬೇಡ್ಕರ್ ತತ್ವಚಿಂತನೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿಯವರು ತಮ್ಮ ಸಂಘಕ್ಕೆ ಸದಾ ಬೆಂಬಲ ವ್ಯಕ್ತಪಡಿಸುವರು ಎಂದು ತಿಳಿಸಿದರು.

 ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ರಾಜ್ಯಾದ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಗ್ಯಾರಂಟಿ ಯೋಜನೆಗಳುನ್ನು ಜಾರಿಗೆ ತರುವ ಮೂಲಕ ಬಡವರ ಮತ್ತು ‌ಜನಪರವಾದ ಆಡಳಿತಕ್ಕೆ ಸಾಕ್ಷಿಯಾಗಿದೆ.ಎಸ್ಸಿ ಎಸ್ಟಿ ಪತ್ರಕರ್ತರು ಮಾದ್ಯಮ ಲೋಕದಲ್ಲಿ ತನ್ನದೆಯಾದ ವೃತ್ತಿ ಬದ್ದತೆಗೆ ಈ ಸಂಘವು ಕೂಡ ಅಡಿಪಾಯವಾಗಲಿದೆ. ಗ್ರಾಮೀಣ ಪತ್ರಕರ್ತರ ಜೀವನ ಸುಖಕರವಾಗಿಲ್ಲ ನಿತ್ಯ ಬದುಕು ಒಂದು ಹೋರಾಟದಂತೆ ಅವರಿಗೆ ಕನಿಷ್ಠ ಸೌಲಭ್ಯಗಳಿಲ್ಲ ಸರ್ಕಾರದ ಮತ್ತು ಪ್ರಜೆಗಳ ನಡುವೆ ಬೆಸುಗೆಯಾಗಿ ಕೆಲಸ ಮಾಡುವಂತ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೇರಿದಂತೆ ಸರ್ಕಾರ ನಿವೇಶನ ರಹಿತರಿಗೆ ನಿವೇಶನ ಒದಗಿಸಬೇಕು  ಎಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಪುಟಾಣಿ ಖ್ಯಾತ ಗಾಯಕಿ ದೀಯಾಹೆಗಡೆ.ಹಾಗೂ ಜಿ ಕನ್ನಡ ಖ್ಯಾತ ಗಾಯಕ ಅಶ್ವಿನ್ ಶರ್ಮ ಮತ್ತು ಮುತ್ತುರಾಜ್ ಕಲಾ ಬಳಗ ತಮ್ಮ ಹಾಡಿನ ಮೂಲಕ ಪ್ರೇಕ್ಷಕರುನ್ನು  ರಂಜಿಸಿದರು.

 ಈ ಸಂದರ್ಭದಲ್ಲಿ ಈ ಮಾಜಿ ಶಾಸಕ ಎಸ್ ವಿ ರಾಮಚಂದ್ರ.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಆಹಮದ್.‌  ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿಗಳಾದ ಇನ್ ಸೈಟ್ ಫೌಂಡೇಷನ್ ಜಿ ಬಿ ವಿನಯ್ ಕುಮಾರ್ .ಆಕಾಂಕ್ಷಿ ಕಲ್ಲೇಶ್ ರಾಜ್ ಪಟೇಲ್.ಮಾನವ ಬಂಧುತ್ವ ವೇದಿಕೆ ರೂವಾರಿಗಳು ಸಚಿವರ ಆಪ್ತರಾದ ವಕೀಲ ಅನಂತನಾಯ್ಕ.ಕಾಂಗ್ರೆಸ್ ಮುಖಂಡರು ಹೊದಿಗೆರೆ ರಮೇಶ್.

ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರು ಎ.ಬಿ ರಾಮಚಂದ್ರಪ್ಪ.ಉದ್ದಿಮೆ ಕೋಡಿಹಳ್ಳಿ ಬೀಮಣ್ಣ.ತಹಶೀಲ್ದಾರ್ ಸೈಯದ್ ಖಲೀಂ ಉಲ್ಲಾ..ಟಿವಿ ೯ ಬಸವರಾಜ್ ದೊಡ್ಡಮನಿ .ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್. ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್.ಹಿರಿಯ ಸಾಹಿತಿ ಎನ್ ಟಿ ಎರ್ರಿಸ್ವಾಮಿ.ಮುಖಂಡ ಪೂಜಾರ್ ಸಿದ್ದಪ್ಪ.ದಲಿತ ಮುಖಂಡ ಜಿ ಹೆಚ್ ಶಂಭುಲಿಂಗಪ್ಪ.ಕಾಂಗ್ರೆಸ್ ‌ಮುಖಂಡರು ತಿಪ್ಪೇಸ್ವಾಮಿ. ಪ್ರಾಂಶುಪಾಲರಾದ ನಾಗಲಿಂಗಪ್ಪ.ಕಾಂಗ್ರೆಸ್ ಮುಖಂಡ ಮಾಳಮ್ಮನಹಳ್ಳಿ ವೆಂಕಟೇಶ್..ಪಪಂ ಸದಸ್ಯರಾದ ಆರ್ ತಿಪ್ಪೇಸ್ವಾಮಿ.. ಮಹಮದ್ ಆಲಿ.ಪಾಪಲಿಂಗಪ್ಪ..ಒಬಣ್ಣ.ವಕೀಲರಾದ ಹನುಮಂತಪ್ಪ.ಪಪಂ ಸದಸ್ಯ ಲುಖ್ಮಾನ್ ಖಾನ್.ಮುಖಂಡ ಕೆ ಎಸ್ ಪ್ರಭು..ನಜೀರ್ ಣ್ಣ.. ಎಸ್ಸಿ ಎಸ್ಟಿ ಪತ್ರಕರ್ತರ ಸಂಘದ  ರಾಜ್ಯಾದ್ಯಕ್ಷ ಹೆಚ್ ಆರ್ ಬಸವರಾಜ್.ಉಪಾಧ್ಯಕ್ಷರಾದ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ.ಧನ್ಯಕುಮಾರ್ ಹೆಚ್ ಎಂ ಹೊಳೆ.ಕಾರ್ಯಧರ್ಶಿ ಮಂಜಪ್ಪ ಸೇರಿದಂತೆ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪದಗ್ರಹಣ ಸ್ವೀಕರಿಸಿದರು.

ನೂತನ ಎಸ್ಸಿ ಎಸ್ಟಿ ಪತ್ರಿಕಾ ವರದಿಗಾರರ ಸಂಘದ ಪದಾಧಿಕಾರಿಗಳು ಸಚಿವರಿಗೆ ಕ್ಷೇತ್ರದ ಶಾಸಕರಿಗೆ ಬಿನ್ನವತ್ತಳಿ ಅರ್ಪಿಸಿ ನಮ್ಮ ನ್ಯಾಯುತ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿಕೊಳ್ಳಲಾಯಿತು.

Leave a Reply

Your email address will not be published. Required fields are marked *

You missed

error: Content is protected !!