ಸುದ್ದಿ ಜಗಳೂರು:-
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ 1
ಭಯ ತೊಲಗಿಸಲು ‘ತೆರೆದ ಮನೆ’ ಪಾಠ
ಶಾಲಾ ಕಾಲೇಜು ಮಕ್ಕಳೊಂದಿಗೆ ಜಿಲ್ಲಾ ಪೊಲೀಸ್ ವರೀಷ್ಠಧಿಕಾರಿ ಉಮಾ ಪ್ರಶಾಂತ್ ಸಂವಾದ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ವಿಧ್ಯಾರ್ಥಿಗಳುನ್ನು ಕುರಿತು ಅವರು ಮಾತನಾಡಿದರು. ಶಾಲಾ ಕಾಲೇಜುಗಳ ಬಳಿ ಕಿಡಿಗೇಡಿಗಳು ರೇಗಿಸುತ್ತಾರೆ, ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ತಡೆಯಲು ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿ ಸುವುದರ ಜತೆಗೆ ಯಾವುದನ್ನು ಮಾಡಬೇಕು, ಯಾವುದನ್ನ ಮಾಡಬಾರದು ಎಂಬುದರ ತಿಳುವಳಿಕೆ ವಿಧ್ಯಾರ್ಥಿಗಳಿಗೆ ನೀಡುವ ಉದ್ದೇಶವೆ ನಮ್ಮ ಇಲಾಖೆ ತೆರೆದ ಮನೆ ಕಾರ್ಯಕ್ರಮವಾಗಿದೆ.
. ಪರಿಸರದ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ, ಲೈಂಗಿಕ ದೌರ್ಜನ್ಯ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ನಮ್ಮ ಇಲಾಖೆ ಸಹಾಯವಾಣಿ 112 ಕ್ಕೆ ಕರೆ ಮಾಡಿ ಅಥವಾ ಖುದ್ದಾಗಿ ಇಲಾಖೆಗೆ ಮಕ್ಕಳು ತಿಳಿಸಬಹುದು. ಯಾವುದೇ ಕಾರಣಕ್ಕೂ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಅವರು ತಿಳಿಸಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಗುರಿಯಿಟ್ಟು ನಿಮ್ಮ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಪ್ರಥಮ ಶ್ರೇಣಿಯಲ್ಲಿ ತೆರ್ಗಡೆಯಾಗಿ ಉತ್ತಮ ಸ್ಥಾನ ಗಳಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು
ಡಿ ವೈ ಎಸ್ ಪಿ. ಬಸವರಾಜ್ ಮಾತನಾಡಿ ವಿಧ್ಯಾರ್ಥಿಗಳು ಉತ್ತಮ ಸಂಸ್ಕಾರ ಆಳವಡಿಕೊಳ್ಳಬೇಕು .ಮಹನೀಯರಂತೆ ಸಾಧಕರಾಗುವಂತೆ ಕನುಸು ಕಾಣಬೇಕು .ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಕಿವಿ ಮಾತು ಹೇಳಿದರು.
ಸಮಾಜದಲ್ಲಿ ಮಹಿಳೆಯರನ್ನ ನೋಡುವ ದೃಷ್ಠಿಕೋನ ಬದಲಾಗಬೇಕಿದೆ ತಮ್ಮ ನೆರೆ ಹೊರೆಯರಿಂದ ಜಾಗೃತಿಯಾಗಿರುವುದು ಉತ್ತಮ ಮಹಿಳೆಯರು ತಮ್ಮ ಪೊಲೀಸರೆಂದರೆ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಭಯ ಬೇಡ ಈಗ ಜನಸ್ನೇಹಿಯಾಗಿ ನಮ್ಮ ಇಲಾಖೆ ತೆರೆದ ಮನೆ ಕಾರ್ಯಗಾರದ ಮೂಲಕ ಜಾಗೃತಿ ಅಗತ್ಯವಾಗಿ ನಾವು ತಮ್ಮಲ್ಲಿಗೆ ಬಂದಿದ್ದೆವೆ ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆ ಕಡಿವಾಣ ಹಾಕಿ ಸ್ವಾಸ್ಥ್ಯ ಸಮಾಜದತ್ತ ನಮ್ಮ ಇಲಾಖೆ ಶ್ರಮಿಸುತ್ತಿದೆ .ಜನರ ಸಹಕಾರ ಅತಿಮುಖ್ಯ ಎಂದು ಜಿಲ್ಲಾ ವರೀಷ್ಠಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು
ಈ ಸಂದರ್ಭದಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್.ಕಾಲೇಜು ಪ್ರಾಂಶುಪಾಲರಾದ ರಾಜೇಶ್ವರಿ ಪೂಜಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾಲೇಜು ಸಿಬ್ಬಂದಿಗಳು ಹಾಜರಿದ್ದರು.