ಬದುಕಿನ ಸಾರವೆಲ್ಲವೂ ಶರಣರ ವಚನಗಳಲ್ಲಿದೆ:
ಜಗಳೂರು :ಜನರ ಬದುಕು ಹಸನಾಗಲು ಬೇಕಾದ ಎಲ್ಲಾ ವಿಚಾರಗಳು ಶರಣರ ವಚನಗಳಲ್ಲಿ ಅಡಕವಾಗಿವೆ .ಆ ಕಾರಣಕ್ಕಾಗಿಯೇ ಶರಣ ಸಾಹಿತ್ಯ ಎಂಬುದು ಜಗತ್ತಿಗೆ ಕರ್ನಾಟಕ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ ಎಂದು ಜಗಳೂರಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಡಿ.ಸಿ. ಮಲ್ಲಿಕಾರ್ಜುನ್ ರವರು ನುಡಿದರು. ಅವರು ಜಗಳೂರು ತಾಲೂಕು ಶರಣ ಸಾಹಿತ್ಯ ಸಾಹಿತ್ಯ ಪರಿಷತ್ತು ವತಿಯಿಂದ ಜಗಳೂರಿನ ಜೆಎಂ ಇಮಾಮ್ ಶಾಲೆಯಲ್ಲಿ ಏರ್ಪಡಿಸಿದ್ದ ಉಪನ್ಯಾಸದಲ್ಲಿ ಅನುಭಾವದ ನುಡಿಗಳನ್ನು ಆಡುತ್ತಿದ್ದರು. ಶತ ಶತಮಾನಗಳಿಂದ ಜನರಲ್ಲಿ ತುಂಬಿದ್ದ ಮೌ ಡ್ಯ, ಜಾತೀಯತೆ, ವರ್ಗ, ವರ್ಣ ಲಿಂಗಭೇದ, ಅಸಮಾನತೆಗಳ ವಿರುದ್ಧ ಬಸವಾದಿ ಶರಣರು ವೈಚಾರಿಕತೆಯ ಭದ್ರಬುನಾದಿಯನ್ನು ಅನುಭವ ಮಂಟಪದ ಮೂಲಕ ನಿಮಿ೯ಸಿದರು ಎಂದು ಅವರು ತಿಳಿಸಿದರು.
ತಾಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎನ್.ಟಿ.ಎರ್ರಿಸ್ವಾಮಿಯವರು ಮಾತನಾಡಿ ಮಕ್ಕಳು, ವಿದ್ಯಾರ್ಥಿಗಳು,ಯುವ ಜನರಲ್ಲಿ ವಚನಪ್ರೀತಿಯನ್ನು ತುಂಬುವ ಸಲುವಾಗಿ ಪರಿಷತ್ತು ದತ್ತಿ ಉಪನ್ಯಾಸಗಳ ಮೂಲಕ ಸರಳ ,ಅರ್ಥಪೂರ್ಣ ಚಟುವಟಿಕೆಗಳನ್ನು ನಡೆಸಲು ಮುಂದಾಗಿದೆ. ಇಂದಿನ ದತ್ತಿ ಕಾರ್ಯಕ್ರಮವನ್ನು ಮಾಜಿ ಶಾಸಕರಾದಹೆಚ್. ಪಿ ರಾಜೇಶ್ ರವರು ತಮ್ಮ ತಾಯಿ ತಂದೆ ಪಾಪಮ್ಮ ಹನುಮಂತಪ್ಪ ಇವರ ಸ್ಮರಣಾರ್ಥ ಪ್ರತಿ ವರ್ಷ ನಡೆಸಲು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು. ಅದೇ ರೀತಿ ಬೇರೆ ಆಸಕ್ತರು ಕೂಡ ದತ್ತಿ ಉಪನ್ಯಾಸಗಳಿಗೆ ನೆರವಾಗಬಹುದು ಎಂದರು.
ಶೈಕ್ಷಣಿಕ ಸಲಹೆಗಾರರಾದ ಶ್ರೀ ಹಾಲಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಕಡೆಗೀಲು ಬಂಡಿಗೆ ಆಧಾರವಾದಂತೆ ವಚನಗಳು ಬದುಕಿಗೆ ಆಧಾರವಾಗಿವೆ. ಎಳವೆಯಲ್ಲಿಯೇ ಮಕ್ಕಳ ಮನಃಪಟಲದ ಮೇಲೆ ಶರಣರ ನುಡಿಗ ಡಣದ ಪ್ರಭಾವ ಬೀರಬೇಕಾದ ಅನಿವಾರ್ಯತೆ ಈಗ ಬಹಳವಿದೆ ಎಂದು ತಿಳಿಸಿದರು.
ಇಮಾಮ್ ಶಾಲೆಯ ಶ್ರೀ ನಾಗರಾಜ್ ರವರು ರವರು ಸ್ವಾಗತಿಸಿ ಮುಖ್ಯೋಪಾಧ್ಯಾಯರಾದ ಶ್ರೀ ಶಂಕರ್ ಅವರು ವಂದಿಸಿದರು ಶಾಲೆಯ ಶಿಕ್ಷಕರಾದ ಶ್ರೀಮತಿ ಜಯಲಕ್ಷ್ಮಿ ,ಗುರುಮೂರ್ತಿ, ಪ್ರದೀಪ್ ಮುಂತಾದವರು ಪಾಲ್ಗೊಂಡಿದ್ದರು. ನೂರಾರು ಜನ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ
ಪಡೆದರು.