Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 9

ಕಾನಿಪ ಧ್ವನಿಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಯವರು ಮಾಡಿದ ಮನವಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಧ್ವನಿ ಮೊಳಗಿಸಿದ ವಿಧಾನ ಪರಿಷತ್ ನಸದಸ್ಯರಾದ ಸಿರಾ ದ ಏಕೈಕ ವೀರ ಧೀರ ಶ್ರೀಚಿದಾನಂದಗೌಡ :- ದಿನಾಂಕ:-4/12/2023 ರಂದು ಸಿರಾ ದ ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡರಿಗೆ ನಾನು ನಾಡಿನ 16 ಸಾವಿರ ಪತ್ರಕರ್ತರ ಜ್ವಲಂತ ಸಮಸ್ಯಗಳ ಬಗ್ಗೆ ಮನವಿ ಸಲ್ಲಿಸಿ ಅವರ ಸಂಕಷ್ಟಗಳ ಬಗ್ಗೆ ವಿವರಿಸಿ ಕೆಲ ನಾನು ಮನವಿ ಸಲ್ಲಿಸಿರುವ ಇಲ್ಲಿಯವರೆಗಿನ ದಾಖಲೆಗಳು ಹಾಗೂ ಎರೆಡು ದಿನಗಳಿಂದ ನಿರಂತರ ಸಂಪರ್ಕದಿಂದ ಕೂಡಲೇ ಅವರು ನನಗೆ ಪ್ರತಿಕ್ರಯಿಸಿ ಖಂಡಿತ ನಾನು ನಿಮ್ಮ ಪರವಾದ ಧ್ವನಿಯನ್ನು ಸದಸನದಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂಬ ಮಾತಿನಂತೆ ನಿನ್ನೆ ದಿನ ಅಂದರೆ ದಿನಾಂಕ:-7/12/2023 ರಂದು ಸದಸನದಲ್ಲಿ ನಾಡಿನ ನೊಂದಂತ ಪತ್ರಕರ್ತರ ಪರ ಕಲಾಪದ ಶೂನ್ಯ ವೇಳೆಯಲ್ಲಿ ಧ್ವನಿ ಮೊಳಗಿಸಿದ್ದು ಅತೀವ ಸಂತೋಷ ತಂದಿದೆ.

ಕಳೆದ ವರ್ಷದಿಂದ ನೂರಾರು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ನಮ್ಮ ಕಾನಿಪ ಧ್ವನಿ ತಾಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳಿಂದ ಮನವಿ ಸಲ್ಲಿಸಿದ್ದರೂ ಪ್ರಯೋಜನವಿಲ್ಲದಂತೆ ಮನವಿಗಳು ಕಸದ ಬುಟ್ಟಿ ಸೇರಿದ್ದವು. ಆದರೆ ಇಂದು ನಾನು ಮಾಡಿದಂತ ನಿರಂತರ ಪ್ರಯತ್ನ, ಫಲ ನೀಡಿದ್ದು ಅದು ವಿಧಾನ ಪರಿಷತ್ ಸದಸ್ಯರಾದ ಸಿರಾ ದ ಚಿದಾನಂದಗೌಡರ ಮುಖಾಂತರ ಸದನದಲ್ಲಿ ನೊಂದಂತ ಪತ್ರಕರ್ತರ ಪರ ಧ್ವನಿಯಾಗಿದ್ದು ಈಗ ಇತಿಹಾಸ ಎಂಬ ಭಾವನೆಯಲ್ಲಿ. ದಿನಾಂಕ:-23/12/2023 ರಂದು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕಾನಿಪ ಧ್ವನಿ ಸಂಘಟನೆಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪತ್ರಕರ್ತರ ಕಾರ್ಯಾಗಾರ,ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಚಿದಾನಂದಗೌಡರಿಗೆ ಅದ್ದೂರಿ ಹೃದಯ ಪೂರ್ವಕ ಸನ್ಮಾನ ಹಾಗೂ ಮಾಧ್ಯಮದವರಿಂದ ನಮನಗಳನ್ನು ಸಲ್ಲಿಸಲಾಗುವುದು.ಬೆಳಗಾವಿಯ ಸುವರ್ಣ ಸೌಧದ ಸದನದಲ್ಲಿ ಧ್ವನಿ ಮಳಗಿಸಿರುವ ವಿಧಾನ ಪರಿಷತ್ ಸದಸ್ಯರಾದ ಸಿರಾ ದ ಚಿದಾನಂದಗೌಡ ರ ಪ್ರಸ್ತಾಪದ ವೀಡಿಯೋ ಹಾಗೂ ಇಂದಿನ ಪ್ರತಿಷ್ಟಿತ ದಿನ ಪತ್ರಿಕೆಗಳಲ್ಲಿ ಈ ಕುರಿತಂತ ಬಂದಂತ ವರದಿಗಳು ಹಾಗೂ ಚಿದಾನಂದ ಗೌಡರಿಗೆ ನಾನು ನೀಡಿದಂತ ಮನವಿಯ ಪತ್ರ ಪ್ರತಿ. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯಾಧ್ಯಕ್ಷರು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ

Leave a Reply

Your email address will not be published. Required fields are marked *

You missed

error: Content is protected !!