Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 14
ಕೂಲಿಕಾರ್ಮಿಕರ ಹಣ ಪಾವತಿಗಾಗಿ ಆಗ್ರಹಿಸಿ ಪತ್ರಚಳುವಳಿ.
ಜಗಳೂರು ಸುದ್ದಿ:ಉದ್ಯೋಗ ಖಾತ್ರಿ ಕೂಲಿಕಾರ್ಮಿಕರ ಕೂಲಿ ಹಣ ಪಾವತಿಗಾಗಿ ಆಗ್ರಹಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಪತ್ರಚಳುವಳಿ ನಡೆಸಿದರು.
ಸಂಘಟನೆ ತಾಲೂಕು ಸಂಚಾಲಕಿ ಪಲ್ಲಾಗಟ್ಟೆ ಸುಧಾ ಮಾತನಾಡಿ,ತಾಲೂಕಿನಲ್ಲಿ ಬರ ಆವರಿಸಿದ್ದು ಕೆಲ ಗ್ರಾಮಗಳ ಕೂಲಿ ಕಾರ್ಮಿಕರು ಗುಳೆಯತ್ತ ಮುಖಮಾಡುವ ಅನಿವಾರ್ಯತೆ ಉಂಟಾಗಿದೆ.ಕಳೆದ ಮೂರು ತಿಂಗಳುಗಳಿಂದ ತಾಲೂಕಿನ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ಮನರೇಗಾದಡಿ ಕೂಲಿಕಾರ್ಮಿಕರ ಕೂಲಿಹಣ ಪಾವತಿಯಾಗದೆ ವಿಳಂಬವಾಗಿದ್ದು ಕೂಡಲೇ ಖಾತೆಗೆ ಜಮಾಮಾಡಬೇಕು ಇಲ್ಲವಾದರೆ ಉಗ್ರಸ್ವರೂಪದ ಹೊರಾಟ ನಡೆಸಲಾಗುವುದು ಎಂದು ಪಟ್ಟಣದ ಅಂಚೆ ಕಛೇರಿ ಮುಂಭಾಗದಲ್ಲಿ ಪತ್ರ ಚಳವಳಿ ಮಾಡುವ ಮೂಲಕ ಎಚ್ಚರಿಸಿದರು.
ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತೆ ದೊಣ್ಣೆ ಹಳ್ಳಿ ಜಿ.ಪಿ.ಮಾಲಾಶ್ರೀ,ಮುಖಂಡರಾದ ಬೋರಯ್ಯ, ಜಿ.ಪಿ.ಖಿಲಾ ಕಣ್ಣುಕುಪ್ಪೆ ಶೃತಿ ,ಕೆಚ್ಚೇನಹಳ್ಳಿ ವಸಂತಮ್ಮ, ಹನುಮವ್ವನ ನಾಗತಿಹಳ್ಳಿ ಪ್ರತಿಭಾ,ಗೀತಮ್ಮ, ಚಂದ್ರಪ್ಪ, ಜ್ಯೋತಿಪುರ ಮಹಾಲಕ್ಷ್ಮಿ, ಬಸಮ್ಮ, ದೇವಮ್ಮ, ಮಹಾಲಕ್ಷ್ಮಿ ,ಸೇರಿದಂತೆ ಇದ್ದರು.