ರಾಜಕೀಯ ಸೇವೆಗೆ ಪಾದರ್ಪಣೆ ಮಾಡಿದ ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ ಮಹೇಶ್.  

ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ  ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ  ಬಿ .ಮಹೇಶಣ್ಣ.

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 12

ಬಿ ಮಹೇಶ್ ರವರು ಜಗಳೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಸುಮಾರು 36 ವರ್ಷಗಳ ಕಾಲ ಉತ್ತಮ ಅಧಿಕಾರಿಯಾಗಿ ಸುದೀರ್ಘ ಸೇವೆ ನೀಡುವ ಮೂಲಕ ನಿವೃತ್ತಿಯಾಗಿರುವ ಇವರು ತಮ್ಮ   ವಿಶ್ರಾಂತ ಜೀವನ ತ್ಯಜಿಸಿ ಪುನ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ.ನಿತ್ಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಳ್ಳುವ ಮೂಲಕ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪ ರವರ ಆಪ್ತರಾಗಿ ಅವರ ಬೆಂಬಲಿಗರಾಗಿ ಎಲ್ಲಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಬಿ ಮಹೇಶಣ್ಣರವರು ಇತ್ತೀಚೆಗೆ ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ಸೇರ್ಪಡೆಯಾಗಿರುತ್ತಾರೆ. ಇವರು ಮುಂಬರುವ ಜಿಪಂ ಚುನಾವಣೆ ಆಕಾಂಕ್ಷಿಯಾಗುವ  ನಿರೀಕ್ಷೆಯಿದೆ.

.ಒಟ್ಟಾರೆ ಇವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿ  ಜನರ ಸಮಸ್ಯೆಗಳಿಗೆ ದ್ವನಿಯಾಗಿ  ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂಬ  ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

ಇದೀಗ ಇವರ ಪ್ರಸ್ತುತ ನಿವೃತ್ತಿ ಜೀವನದ ಅವಧಿಯಲ್ಲೂ  ಸಹ ನಿತ್ಯ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿ ಜನರೊಂದಿಗೆ ಸದಾ ಅಸನ್ಮಖಿಯಂತೆ ಸದಾ ಸಾರ್ವಜನಿಕ ವಲಯದಲ್ಲಿ ಒಂದಲ್ಲ ಒಂದು ಕಾರ್ಯಗಳಿಗೆ ಬೆಂಬಲಿಸುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿ ನಾಯಕರಂತೆ ಕಾಂಗ್ರೆಸ್ ಪಕ್ಷ ನಿಷ್ಠೆಗೆ ಬದ್ದರಾಗಿ  ನಿತ್ಯ ರಾಜಕೀಯ ವಲಯದಲ್ಲಿ ಕಾಣಿಕೊಳ್ಳುವರು. ಇವರ ಸೇವಾ ಕಾರ್ಯ ಮತ್ತಷ್ಟು ಜನರ ಗಮನ ಸೆಳೆಯುವಂತೆ ಉತ್ಸಹಕರಾಗಿರುವ ಇವರಿಗೆ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾಂಗ್ರೆಸ್ ವರೀಷ್ಠರು ಬರುವ ಜಿಪಂ ಚುನಾವಣೆ  ಕ್ಷೇತ್ರದ ಆಕಾಂಕ್ಷಿ ಬಿ ಮಹೇಶ್ ರವರಿಗೆ ಟಿಕೆಟ್ ನೀಡುತ್ತಾರೆ ಎಂಬ ಆಶಾಭಾವನೆಯನ್ನು ಅವರ  ಅಭಿಮಾನಿಗಳು ನಿರೀಕ್ಷಿಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!