Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 14
ಡಿ.21ರಿಂದ 23 ರವರೆಗೆ ಕಾನಮಡುವಿನ ಜಾತ್ರಾಮಹೋತ್ಸವ:ಸಾಮೂಹಿಕ ವಿವಾಹ ಜರುಗಲಿವೆ.
ವಿಜಯನಗರ ಜಿಲ್ಲೆ,
ಕೂಡ್ಲಿಗಿ ಸುದ್ದಿ ,: :ಡಿ.21ರಿಂದ 23 ರವರೆಗೆ ಶ್ರೀ ಕ್ಷೇತ್ರ ಕಾನಮಡುವಿನ ಶ್ರೀ ಶರಣ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಜರುಗಲಿದ್ದು ಭಕ್ತಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಂದು ಧರ್ಮಾಧಿಕಾರಿ ಶ್ರೀ.ದಾ.ಮ.ಐಮಡಿ ಶರಣಾರ್ಯರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.21 ಗುರುವಾರದಂದು ಸಂಜೆ 6 ಗಂಟೆಗೆ ಕಾರ್ತಿಕ ದೀಪೋತ್ಸವ,ಡಿ.22 ಶುಕ್ರವಾರದಂದು ಸಂಜೆ 4 ಗಂಟೆಗೆ ಸ್ವಾಮಿ ರಥೋತ್ಸವ ಡಿ.23 ಶನಿವಾರ ಸಂಜೆ 6ಕ್ಕೆ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಲಿದ್ದು.ಮುಸ್ಟೂರು ಓಂಕಾರೇಶ್ವರ ಮಠದ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು,ಕೊಟ್ಟೂರು ಹಿರೇಮಠದ ಶ್ರೀ ಷ.ಬ್ರ.ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮಿ,ಚನ್ನಗಿರಿ ಹಿರೇಮಠದ ಶ್ರೀ.ಷ.ಬ್ರ.ಕೇದಾರ ಲಿಂಗ ಶಿವಾಚಾರ್ಯ ಸ್ವಾಮಿ,ಕೂಡ್ಲಿಗಿ ಶ್ರೀ. ಷ.ಬ್ರ.ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ ನೆರೆಹೊರೆಯ ತಾಲೂಕಿನ ಸಕಲ ಭಕ್ತಾದಿಗಳು ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಆಹ್ವಾನಿಸಿದ್ದಾರೆ.
ಡಿ.21 ಗುರುವಾರದಂದು ಚಿತ್ರದುರ್ಗದ ಗಂಜಿಗಟ್ಟೆ ಕೃಷ್ಣ ಮೂರ್ತಿ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ,ಹಾಗೂ ಧಾತ್ರಿ ರಂಗ ಸಂಸ್ಥೆ ಸಿರಿಗೆರೆ ಅವರಿಂದ ಅಕ್ಕನಾಗಲಾಂಬಿಕೆ ನಾಟಕ ಅಭಿನಯ,ನಂತರ ಭಜನಾ ಕಾರ್ಯಕ್ರಮವಿರುತ್ತದೆ.ಡಿ.22 ಶುಕ್ರವಾರದಂದು ರಕ್ತದಾನ ಶಿಬಿರ,ಸಾಮೂಹಿಕ ವಿವಾಹ,ಭರತನಾಟ್ಯ,ಜಾನಪದ,ವಚನನೃತ್ಯಗಳು,ರಾತ್ರಿ ಮರಿಯಮ್ಮನಹಳ್ಳಿ ರಂಗಚೇತನ ಕಲಾ ಟ್ರಸ್ಟ್ ವತಿಯಿಂದ ಕರ್ಣಭಾರ ನಾಟಕ ಅಭಿನಯ ವಿರುತ್ತದೆ ವಿವಾಹವಾಗಲು ಇಚ್ಛಿಸುವವರು ಅಗತ್ಯ ದಾಖಲೆಗಳೊಂದಿಗೆ ಮೊ.ಸಂಖ್ಯೆ:9986622241,7829154147,9620106505 ಸಂಪರ್ಕಿಸಿ ಎಂದು ಮಾಹಿತಿ ನೀಡಿದ್ದಾರೆ.