ಬಹುದಿನಗಳ ಹೋರಾಟ ಒಳಮೀಸಲಾತಿ ಜಾರಿಗೋಳಿಸಲು ದಾವಣಗೆರೆ ನಗರದಲ್ಲಿ ಸಮಾವೇಶ ನಡೆಸಲಾಗುವುದು ನಮ್ಮ ಹಕ್ಕಿಗಾಗಿ ಹೋರಾಟ ಅನಿವಾರ್ಯ ಮಾದಿಗ ಸಮಾಜದ ಹಿರಿಯ ದಲಿತ ಹೋರಾಟಗಾರ ಆಲೂರು ನಿಂಗರಾಜ್ ಕರೆ ನೀಡಿದರು .
ದಾವಣಗೆರೆ ಸುದ್ದಿ ಜಗಳೂರು ತಾಲ್ಲೂಕು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 16
ಮಾದಿಗರ ಮತ ಬ್ಯಾಂಕ್ ಪಡೆದು ಅಧಿಕಾರ ಗದ್ದುಗೆ ಹಿಡಿದ ಸರ್ಕಾರಗಳು ಒಳ ಮೀಸಲಾತಿ ನೀಡದೆ ಮೀನಾ ಮೇಷ ಮಾಡಿ ನಿರ್ಲಕ್ಷ್ಯತನ ಧೋರಣೆ ಅನುಸರಿಸಿವೆ. ನಮ್ಮ ಹಕ್ಕಿಗಾಗಿ ಹೋರಾಟ ಅನಿವಾರ್ಯ ಜಗಳೂರು ಪಟ್ಟಣದಲ್ಲಿ ಶನಿವಾರ ಮಾದಿಗರ ಮುನ್ನಡೆ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾದಿಗ ಸಮಾಜದ ಹಿರಿಯ ದಲಿತ ಹೋರಾಟಗಾರ ಆಲೂರು ನಿಂಗರಾಜ್ ಕರೆ ನೀಡಿದರು .
ಜಗಳೂರು ಪಟ್ಟಣದ ಆದಿಜಾಂಬವ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಮಾದಿಗರ ಮುನ್ನಡೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 2002 ರಲ್ಲಿ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಸರ್ಕಾರದಲ್ಲಿ ಸದಾಶಿವ ಆಯೋಗ ರಚನೆಯಾಯಿತು ಆದರೆ ಅದ್ಯಯನ ಮಾಡಲಿಲ್ಲ ಏಕೆಂದರೆ ನಂತರ ಬಂದ ಸರ್ಕಾರಗಳು ವರದಿ ತಯಾರಿಸಲು ಯಾವುದೇ ಅನುದಾನ ಪೂರಕ ಸೌಲಭ್ಯಗಳನ್ನು ನೀಡಲಿಲ್ಲ
ಕಳೆದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಸದಾನಂದಗೌಡ್ರು ಸರ್ಕಾರದ ಅವಧಿಯಲ್ಲಿ 11 ಕೋಟಿ ಅನುದಾನ ಕಲ್ಪಿಸಿ ನ್ಯಾಯಮೂರ್ತಿ ಸದಾಶಿವ ವರದಿ ಅನುಷ್ಠಾನಕ್ಕಾಗಿ ಮಾದಿಗ ಸಂಬಂಧಿತ ಜಾತಿಗಳ ಸ್ಥಿತಿಗತಿ ವರದಿ ಅಧ್ಯಯನ ಮಾಡಲಾಯಿತು., ನಂತರ ಬಂದ ಸರ್ಕಾರಗಳು ವರದಿಯನ್ನು ಪಡೆದರೂ ಜಾರಿಗೊಳಿಸಲೇ ಇಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ನಾನೇ ಜಾರಿಗೊಳಿಸುವುದಾಗಿ ಹೇಳುತ್ತಲೇ ಬಂಜಾರ ಸಮಾವೇಶದಲ್ಲಿ ಸದಾಶಿವ ಆಯೋಗ ವರದಿಯೇ ಅವೈಜ್ಞಾನಿಕವಾಗಿದೆ ಎಂದು ಹೇಳಿಕೊಂಡಿದ್ದರು. ಆದರೆ ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿಯವರು ವರದಿಯೊಂದನ್ನು ಕೇಂದ್ರಕ್ಕೆ ಕಳುಹಿಸಿ ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಿದ್ದರು” ಎಂದು ಹೇಳಿದರು.
ಆದರೆ“ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಳ್ಳಲಿಲ್ಲ. ಇತ್ತೀಚಿಗೆ ಹೈದರಾಬಾದನಲ್ಲಿ ನಡೆದ ವಿಶ್ವರೂಪ ಸಮಾವೇಶದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿರುವುದು ತಮಗೆಲ್ಲ ಗೊತ್ತಿದೆ. ಈಗಾಗಲೇ ಸಮಿತಿ ರಚಿಸಿ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಶೇ.10ರಷ್ಟು ಮೀಸಲಾತಿ ನೀಡಲು ಹೇಗೆ ನಿರ್ಧರಿಸಿದರೋ ಅದೇ ರೀತಿ ಕಾನೂನಾತ್ಮಕ ಸಮಸ್ಯೆಗಳನ್ನು ನೀಗಿಸಿ ಒಳಮೀಸಲಾತಿ ಜಾರಿಗೆ ಸಂವಿಧಾನ ತಿದ್ದುಪಡಿಯೊಂದಿಗೆ ಜಾರಿಗೊಳಿಸುವ ವಿಶ್ವಾಸವಿದ್ದು, ಮಾದಿಗ ಸಮಾಜ ಮನ್ನಲೆಗೆ ಬರುವ ಆಶಾಭಾವನೆ ವ್ಯಕ್ತಪಡಿಸಿದರು..
“ನಮಗೆ ಸರ್ಕಾರ ಯಾವುದಾದರು ಆಗಿರಲಿ“ನಮಗೆ ಮೀಸಲಾತಿ ಹೆಚ್ಚಿಸಿ ಒಳಮೀಸಲಾತಿ ಜಾರಿಗೊಳಿಸುವುದು ಬಹುಮುಖ್ಯವಾಗಿದೆ.ಈ ಸಮಾವೇಶ ಸಮುದಾಯ ಜನರಲ್ಲಿ ಜಾಗೃತಿ ಸಭೆಯಾಗಲಿದೆ” ಎಂದರು.
ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಜಯಪ್ರಕಾಶ್ ಮಾತನಾಡಿ ಕಳೆದ ನಲವತ್ತು ವರ್ಷಗಳಿಂದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ನಡೆಯುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವ ವಿಶ್ವಾಸವಿದ್ದು,ಅತಿ ಶೀಘ್ರವಾಗಿ ದಾವಣಗೆರೆ ನಗರದಲ್ಲಿ ಮಾದಿಗ ಮುನ್ನಡೆ, ಮಾದಿಗರ ಆತ್ಮಗೌರವ ಜಿಲ್ಲಾ ಸಮಾವೇಶ ಆಯೋಜಿಸಲಾಗುವುದು ಎಂದರು.
ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ ಪಕ್ಷಾತೀತವಾಗಿ ನಡೆಯಲಿರುವ ಮಾದಿಗ ಸಮಾಜದ ಜಾಗೃತಿ ಸಮಾವೇಶದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಗಳ ಮುಖಂಡರುಗಳು, ಸಮಾಜದ ಚಿಂತಕರು ಬುದ್ದಿ ಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ. ಮುಖಂಡರಾದ ದುರುಗೇಶ್ .ದಂಸಸ ಸಂಚಾಲಕ ಕುಬೇರಪ್ಪ. ಅಂಬೇಡ್ಕರ್ ಪುತ್ಥಳಿ ಅಮಿತಿ ಗೌರವಧ್ಯಕ್ಷ ಶಿವಣ್ಣ.ಮಾದಿಗ ಸಮಾಜದ ಮುಖಂಡರುಗಳಾದ ಗೊಡೆ ದುರುಗಣ್ಣ.ಚಿಕ್ಕಮಲ್ಲನಹೊಳೆ ಮಾರುತಿ.ನಿಬಗೂರು ಮುನಿಯಪ್ಪ.ಪಲ್ಲಾಗಟ್ಟೆ ರಂಗಪ್ಪ.ತಿಪ್ಪೇಸ್ವಾಮಿ. ವಕೀಲರಾದ ಮಹಾಂತೇಶ್.ಹೊನ್ನುರಣ್ಣ.. ರಾಜನಹಟ್ಟಿ ಚಂದ್ರಪ್ಪ.ನಾಗರಾಜ್.ಸೇರಿದಂತೆ ಮುಂತಾದವರು ಹಾಜರಿದ್ದರು.