Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 20
ಜಗಳೂರು ಸುದ್ದಿ
ದಾವಣಗೆರೆ: ಆರ್ ಟಿ ಐ ಕಾರ್ಯಕರ್ತ ಹಾಗೂ ಕನ್ನಡಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ರಾಮಕೃಷ್ಣ ಅವರ ಹತ್ಯೆ ಪ್ರಕರಣ ಸಂಬಂಧ ಜಾಮೀನು ಕೊಡಿಸಿದ್ದವರ ಮೇಲೆ ದಾಳಿ ನಡೆಸಿದ ಘಟನೆ ಜಗಳೂರು ತಾಲೂಕಿನ ಗೌರಿಪುರದಲ್ಲಿ ನಡೆದಿದೆ.
ಆರೋಪಿ ಹೇಮಂತ್ ಹಾಗೂ ಆತನ ತಾಯಿ ಬೊಮ್ಮಕ್ಕ ವಿರುದ್ಧ ಕೊಲೆ ಯತ್ನ ದೂರು ದಾಖಲಿಸಲಾಗಿದೆ. ಜಗಳೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ನಾಲ್ವರ ಮೇಲೆ ದಾಳಿ ನಡೆಸಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿಗಿದೆ..
ಕಳೆದ ಕೆಲವು ತಿಂಗಳ ಹಿಂದೆ ರಾಮಕೃಷ್ಣನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮೃತನ ಕುಟುಂಬದವರು ಗ್ರಾಪಂ ಪಿಡಿಓ ನಾಗರಾಜ್. ಮತ್ತು ಇತರರ ಮೇಲೆ ಆರೋಪ ಮಾಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು. ಆಗ ಶಾಸಕರಾಗಿದ್ದ ಎಸ್. ವಿ. ರಾಮಚಂದ್ರಪ್ಪರ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು.
ಆದ್ರೆ, ಈಗ ಕೊಲೆ ಆರೋಪಿಗಳು ಜಾಮೀನಿನ ಹೊರಗೆ ಬರಲು ಸಹಕರಿಸಿದ್ದಾರೆ ಎಂದು ಹೇಮಂತ್ ಹಾಗೂ ಆತನ ತಾಯಿ ಬೊಮ್ಮಕ್ಕ ಅವರು ಬಸನಗೌಡ, ಕುಟುಂಬದ ಸದಸ್ಯರ ನಡುವೆ ವೈಷಮ್ಯ ಇತ್ತು. ಆದ್ರೆ, ಮಂಗಳವಾರ ಚಾಕು ಹಿಡಿದು ಬಂದ ಹೇಮಂತ್ ಎಂಬಾತನು ಬಸನಗೌಡ ಹಾಗೂ ಆತನ ಕುಟುಂಬದ ಸದಸ್ಯರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ನಡೆದ ಹಿನ್ನೆಲೆಯಲ್ಲಿ ಗೌರಿಪುರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಾಡುಹಗಲೆ ಕೊಲೆ ಯತ್ನ ವಿಡಿಯೋ ವೈರಲ್ ಆಗಿದ್ದು, ಚಾಕು ಹಿಡಿದು ಅಟ್ಯಾಕ್ ಮಾಡುತ್ತಿರುವ ವಿಡಿಯೋ ದೃಶ್ಯ ಸೆರೆಯಾಗಿದ್ದು ಬೆಚ್ಚಿಬಿಳಿಸುವುದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.