Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 22
ರಾಗಿ ಖರೀದಿಕೇಂದ್ರಕ್ಕೆ ಭ್ರಷ್ಟಾಚಾರದ ಕರಿಛಾಯೆ ಮರುಕಳಿಸದಿರಲಿ:ಶಾಸಕ.ಬಿ.ದೇವೇಂದ್ರಪ್ಪ ಎಚ್ಚರಿಕೆ.
ಜಗಳೂರು ಸುದ್ದಿ:ಕಳೆದ ವರ್ಷದಲ್ಲಿನ ರಾಗಿಖರೀದಿ ಕೇಂದ್ರದಲ್ಲಿ ನಡೆದ ಭ್ರಷ್ಟಾಚಾರದ ಕರಿಛಾಯೆ ಮರುಕಳಿಸದಿರಲಿ ಎಂದು ಶಾಸಕ ಬಿ.ದೇವೇಂದ್ರಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ರೈತರ ಆನ್ ಲೈನ್ ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ವರ್ಷದಲ್ಲಿ ಯಾರು ಮಾಡಿದ ಪ್ರಮಾದದಿಂದಲೋ ರಾಗಿಖರೀದಿ ಕೇಂದ್ರದಲ್ಲಿ ನಡೆದ ಅವ್ಯವಹಾರ ಕುರಿತು ಜಗಳೂರು ತಾಲೂಕು ರಾಜ್ಯಕ್ಕೆ ಹೆಸರಾಗಿದೆ.ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ.ನಾನು ಶಾಸಕನಾಗಿ ಆಯ್ಕೆಯಾದ ನಂತರ ರೈತರಿಗೆ ಧ್ವನಿಯಾಗಿರುವೆ ಇದರಿಂದ ಅನ್ಯಾಯವಾಗಿದ್ದ ರಾಗಿ ಬೆಳೆಗಾರರ ಪೈಕಿ ಶೇ.75 ರಷ್ಟು ರೈತರಿಗೆ ಹಣಪಾವತಿಯಾಗಿದೆ.ಉಳಿದ 400 ಜನ ರೈತರಿಗೆ ಶೀಘ್ರ ಹಣಪಾವತಿ ಮಾಡಲಾಗುವುದು.ನನ್ನ ಆಡಳಿತಾವಧಿಯಲ್ಲಿ ಪಾರದರ್ಶಕವಾಗಿ ಖರೀದಿ ಕೇಂದ್ರ ನಡೆಯಬೇಕು ತಪ್ಪು ಕಂಡುಬಂದರೆ ಕ್ಷಮಿಸುವುದಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಗಿ ಖರೀದಿ ಕೇಂದ್ರ ರೈತರಿಗೆ ವರದಾನ:ಪ್ರಸಕ್ತವಾಗಿ ತಾಲೂಕಿನಲ್ಲಿ ಬರ ಆವರಿಸಿ ಯಾವ ಬೆಳೆಯೂ ಫಸಲು ಕೈಗೆಟುಕದೆ ರಾಗಿ ಬೆಳೆಯೂ ಇಳಿಮುಖವಾಗಿ ರೈತರು ಕಂಗಾಲಾಗಿದ್ದಾರೆ.ಈ ಮಧ್ಯೆ ಹಿಂಗಾರು ಮಳೆಗೆ ರಾಗಿ ಬೆಳೆದ ರೈತರಿಗೆ ರಾಗಿ ಖರೀದಿ ಕೇಂದ್ರ ವರದಾನವಾಗಲಿದೆ ಸದುಪಯೋಗಪಡೆದುಕೊಳ್ಳಬೇಕು ಕ್ಷೇತ್ರದ ಅನ್ನದಾತರು ನೆಮ್ಮದಿ ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ರೈತರಿಂದ ಸನ್ಮಾನ ಸ್ವೀಕರಿಸುವೆ:ಅಧಿಕಾರಿಗಳು ಶಾಸಕರಿಗೆ ಸನ್ಮಾನಕ್ಕೆ ಮುಂದಾದರು.ಕಳೆದ ವರ್ಷದಲ್ಲಿನ ರಾಗಿ ಬೆಳೆಗಾರರಿಗೆ ಸಂಪೂರ್ಣ ಹಣ ಪಾವತಿಯಾದನಂತರ ರೈತರಿಂದ ಸನ್ಮಾನ ಸ್ವೀಕರಿಸುವೆ ಎಂದು ಅಧಿಕಾರಿಗಳ ಸನ್ಮಾನ ನಿರಾಕರಿಸಿದ್ದು ಶಾಸಕರಿಗೆ ರೈತರ ಬಗ್ಗೆ ಇರುವ ಕಾಳಜಿ ಹೆಚ್ಚಿಸಿತು.
ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ,
ಎಪಿಎಂಸಿ ಉಪನಿರ್ದೇಶಕ ಸಿದ್ದರಾಮಮಾರಿಹಾಳ್,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ರೈತ ಮುಖಂಡರಾದ ಈಶ್ವರಪ್ಪ,ನಿಂಗಪ್ಪ,ನ್ಯಾಯಬೆಲೆ ಅಂಗಡಿಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಬಿಳಿಚೋಡು ಓಮಣ್ಣ,ಎಪಿಎಂಸಿ ಆಹಾರ ಇಲಾಖೆಯ ಮನು ಸೇರಿದಂತೆ ಇದ್ದರು.