ಇಂದು ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ

ಜಗಳೂರು ಸುದ್ದಿ: ಇಂದು ಭದ್ರಾಮೇಲ್ದಂಡೆ ಯೋಜನೆ ಸೇರಿದಂತೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸಂಸದ ಜಿಎಂ ಸಿದ್ದೇಶ್ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಬಹು ದಿನಗಳ ಕನಸಿನ ಯೋಜನೆ ಅಪ್ಪರ್ ಭದ್ರಾ ನೀರಾವರಿ ಯೋಜನೆ ಕೇಂದ್ರ ಜಲನೀತಿ ಯೋಜನೆಡಿಯಲ್ಲಿ 1200 ಕೋಟಿ ರೂಗಳಲ್ಲಿ ಅನುದಾನ ಮಂಜೂರಾಗಿ ಇದೀಗ ಕಾಮಗಾರಿ ಪ್ರಾರಂಭಿಸಲು ಭೂಮಿ ಪೂಜೆ‌ನೇರವೇರಿಸಲಾಗುವುದು.ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ಕಾರಣಂತರಗಳಿಂದ ಆಗಮಿಸದೆಯಿರುವುದರಿಂದ ಜಿಲ್ಲಾ ಸಂಸದರಾದ ಜಿ ಎಂ ಸಿದ್ದೇಶ್ವರ ರವರಿಂದ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ₹482 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲೂಕಿನ ಸಂತೆಮುದ್ದಾಪುರ ಸೇರಿದಂತೆ 164 ಗ್ರಾಮಗಳಿಗೆ ತುಂಗಾಭದ್ರಾ ನೀರು ಪೂರೈಕೆ ಯೋಜನೆ, ಲೊಕೋಪಯೋಗಿ ಇಲಾಖೆಯ ರಸ್ತೆ ಅಗಲೀಕರಣ ಇತರೆ ಕಾಮಗಾರಿಗಳಿಗೆ ವಿವಿಧ ₹ 15.75 ಕೋಟಿ ವೆಚ್ಚದ,ನಿರ್ಮಿತಿ‌ಕೇಂದ್ರದಿಂದ ವಿಧಾನಸಭಾ ಕ್ಷೇತ್ರವ್ಯಾಪಿ
ವಿವಿಧ ಹಳ್ಳಿಗಳಲ್ಲಿ ₹ 4.50 ಕೋಟಿ ವೆಚ್ಚದಲ್ಲಿ ಸಮುದಾಯಭವನಗಳ ನಿರ್ಮಾಣ ಕಾಮಗಾರಿಗಳ,ಹಾಗೂ ಆರ್ ಡಿ ಪಿಆರ್ ಇಲಾಖೆಯ ₹ 11.25 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪಟ್ಟಣದಲ್ಲಿ ₹2.60 ಕೋಟಿ ವೆಚ್ಚದ ವಾಲ್ಮೀಕಿ ಭವನ ಕಟ್ಟಡ ಹಾಗೂ ಆರ್ ಡಿ ಪಿ ಆರ್ ಇಲಾಖೆಯಡಿ ಪೂರ್ಣಗೊಂಡ ವಿವಿಧ ಕಾಮಗಾರಿಗಳ ₹ 14.88 ಕೋಟಿ ವೆಚ್ಚದ ಮುಕ್ತಾಯ ‌ಹಂತದ ಕಾಮಗಾರಿಗಳನ್ನು ಲೋಕಾರ್ಪಣೆ ಗೊಳಿಸಲಾಗುವುದು ಎಂದರು.

ಕರ್ನಾಟಕ ನೀರಾವರಿ ನಿಗಮದಿಂದ ದಶಕಗಳ ಕನಸಿನ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಗೆ ₹ 1260 ಕೋಟಿ ವೆಚ್ಚದ ಭದ್ರಾಮೇಲ್ದಂಡೆ ಯೋಜನೆಯಡಿ ತಾಲೂಕಿನಲ್ಲಿ ₹45,000 ಎಕರೆ ನೀರಾವರಿಗೊಳ್ಳಲಿದೆ ಎಂದು ತಿಳಿಸಿದರು.
ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ₹3500 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳ ಅನುದಾನ ಸಾಕಾರಕ್ಕೆ ಸಹಕಾರ ನೀಡಿದ ಸಂಸದ ಜಿಎಂ ಸಿದ್ದೇಶ್ವರ್ ,ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್,ವಿಧಾನಪರಿಷತ್ತು ಸದಸ್ಯ ರವಿಕುಮಾರ್ ಅವರಿಗೆ ಅಭಿನಂದನೆಗಳು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್ ಮಾತನಾಡಿ, ಪಟ್ಟಣದ ಬಯಲು ರಂಗಮಂದಿರದಲ್ಲಿ ಸರಕಾರಿ ಶಿಷ್ಟಾಚಾರದಡಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು.ಕ್ಷೇತ್ರದಿಂದ ಅಧಿಕ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಸೊಕ್ಕೆ ನಾಗರಾಜ್,ಬಸವರಾಜ್,ಬಿಸ್ತುವಳ್ಳಿ ಬಾಬು,ಕಟ್ಟಿಗೆಹಳ್ಳಿಮಂಜಣ್ಣ, ಸುರೇಶ್ ಗೌಡ್ರು,ರಾಜೇಶ್,ಸೂರ್ಯಕಿರಣ್,ಧರ್ಮಾನಾಯ್ಕ,ರವಿಕುಮಾರ್,ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!