ಶುಕ್ರದೆಸೆ ನ್ಯೂಸ್: ಲ್ಲಾಡಳಿತ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೀರಾವರಿ ಇಲಾಖೆ ವತಿಯಿಂದ ಇಂದು ನಡೆದ ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ 482 ಕೋಟಿ ರೂಗಳ ಸಂತೆ ಮುದ್ದಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆ ಮತ್ತು ಸೇರಿದಂತೆ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಗಾಟನೆ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ರವರು ಕಾರ್ಯಕ್ರಮವನ್ನು ಉದ್ಗಾಟಿಸಿ ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 482 ಕೋಟಿ ರೂ ಗಳ ವೆಚ್ಚದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 164 ಗ್ರಾಮಗಳಿಗೆ ಭದ್ರಾ ನದಿಯಿಂದ ಕುಡಿಯುವ ನೀರು ಒದಗಿಸಿ ಎಲ್ಲಾ ವರ್ಗದ ಜನರ ಮನೆ ಬಾಗಿಲಿಗೆ ನಳಾ ಆಳವಡಿಸುವ ಮೂಲಕ ನೀರು ಒದಗಿಸುವುದು ಶ್ಲಾಘನೀಯ ಕಾರ್ಯವಾಗಿದೆ. ತಾಲ್ಲೂಕಿನ ಬಹು ದಿನಗಳ ಕನಸಿನ ಯೋಜನೆ ಅಪ್ಪರ್ ಭದ್ರಾ ನೀರಾವರಿ ಯೋಜನೆ ಕೇಂದ್ರ ಜಲನೀತಿ ಯೋಜನೆಡಿಯಲ್ಲಿ 1200 ಕೋಟಿ ರೂಗಳ ಯೋಜನೆ ತಾಲ್ಲೂಕಿನ ಬಹು ಬಾಗದಲ್ಲಿ ನೀರಾವರಿ ವಿಸ್ತಾರಣೆಯಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರರವರು ಸುಮಾರು 2500 ಸಾವಿರ ಕೋಟಿ ಅನುದಾನ ತಂದು ರಸ್ತೆ .ಚರಂಡಿ .ಸಮುದಾಯ ಭವನಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತಾಲ್ಲೂಕು ಅಭಿವೃದ್ಧಿಗೆ ಶ್ರಮಿಸಿರುವಂತ ನಾಯಕ ಎಸ್ ವಿ ರಾಮಚಂದ್ರರವರಿಗೆ ಬರುವ ಚುನಾವಣೆಯಲ್ಲಿ ಬೆಂಬಲಿಸಿ ಪುನ ಮತ್ತೂಷ್ಟು ನಿಮ್ಮಗಳ ಅಗತ್ಯ ಸೇವೆ ಮಾಡಲು ಆವಕಾಶ ಕಲ್ಪಿಸಿ ಎಂದು ಹೇಳಿದರು. ಕೆಲ ವಿರೋಧ ಪಕ್ಷದ ನಾಯಕರು ಬಾಯಿಚಪಲಕ್ಕೊಸ್ಕರ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಹೇಳಬಹುದು ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳೆ ಸಾಕ್ಷಿಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ದೇಶವನ್ನ ಸಹ ಸಮರ್ಥವಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ನಮ್ಮ ಪ್ರಧಾನಿ ಮೋದಿಜಿಯವರ ಆಡಳಿತ ಅನ್ಯರಾಷ್ಟ್ರಗಳಿಗೆ ಮಾದರಿಯಾಗಿದೆ .ಶಾಸಕ ಎಸ್ ವಿ ರಾಮಚಂದ್ರ ಮಾತನಾಡಿ ವಿರೋಧ ಪಕ್ಷದ ಕೆಲವರು ನನಗೆ ಆರೋಗ್ಯ ಸ್ಥಿತಿ ಸರಿಯಿಲ್ಲ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸುಳ್ಳು ವದಂತಿಗೆ ಹಬ್ಬಿಸುವವರಿಗೆ ಕಿವಿಗೊಡಬೇಡಿ ನಾನು ಇನ್ನು ಎರಡು ಬಾರಿ ಚುನಾವಣೆ ಮಾಡುವಷ್ಟು ಆರೋಗ್ಯದ ಉತ್ಸಾಹವಿದೆ ಎಂದು ತಿಳಿಸಿದರು. ಸಿರಿಗೆರೆ ಶ್ರೀಗಳ ಮಾರ್ಗದರ್ಶನದಲ್ಲಿ 57 ಕೆರೆ ತುಂಬಿಸುವ ಯೋಜನೆ ಅಪ್ಪರ್ ಭದ್ರಾ ನೀರಾವರಿ ಪಟ್ಟಣದಲ್ಲಿ ₹2.60 ಕೋಟಿ ವೆಚ್ಚದ ವಾಲ್ಮೀಕಿ ಭವನ .ವಿವಿಧ ಸಮುದಾಯ ಭವನಗಳು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಪುತ್ಥಳಿ ಸೇರಿದಂತೆ ರಸ್ತೆ ಚರಂಡಿ ಕೆ ಎಸ್ ಟಿ ಸಿ ಬಸ್ ಸ್ಟಾಪ್ .ಅನೇಕ ಕ್ಷೇತ್ರ ಅಭಿವೃದ್ಧಿ ಕಾಮಗಾರಿಗಳುನ್ನು ಮಾಡಲು ನಮ್ಮ ಸರ್ಕಾರ ಅನುದಾನ ಕಲ್ಪಿಸಿ ನಮಗೆ ಅಗತ್ಯ ಸೇವೆ ನೀಡಲು ಸಹಕರಿಸಿ ಈ ಮಣ್ಣಿನ ಋಣ ತೀರಿಸಲು ಸಾಕ್ಷಿಯಾಗಿದ್ದೆನೆ. ಇದೀಗ ₹ 14.88 ಕೋಟಿ ವೆಚ್ಚದ ಮುಕ್ತಾಯ ಹಂತದ ಕಾಮಗಾರಿಗಳನ್ನು ಸಹ ಲೋಕಾರ್ಪಣೆಗೊಳಿಸಲಾಗಿದೆ ಎಂದರು.ಕರ್ನಾಟಕ ನೀರಾವರಿ ನಿಗಮದಿಂದ ದಶಕಗಳ ಕನಸಿನ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಗೆ ₹ 1260 ಕೋಟಿ ವೆಚ್ಚದ ಭದ್ರಾಮೇಲ್ದಂಡೆ ಯೋಜನೆಯಡಿ ತಾಲೂಕಿನಲ್ಲಿ ₹45,000 ಎಕರೆ ನೀರಾವರಿಯಾಗುತ್ತಿರುವುದು ವರವಾಗಿದೆ. ಎಂದು ಭರವಸೆ ಮೂಡಿಸಿದರು . . ಈ ಸಂದರ್ಭದಲ್ಲಿ ಬಿ ಜೆ ಪಿ ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್ ಸಿ ಮಹೇಶ್.ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ವೇಣುಗೋಪಾಲ್ ರೆಡ್ಡಿ ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಗಡಿಮಾಕುಂಟೆ ಸಿದ್ದೇಶ್ .ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ. ಅರಸಿಕೆರೆ ಬಾಗದ ಮಾಜಿ ಜಿಪಂ ಅದ್ಯಕ್ಷರು ಸಿದ್ದಣ್ಣ.ಪಪಂ ಉಪಾದ್ಯಕ್ಷೆ ನಿರ್ಮಲಕುಮಾರಿ.ಬಿಜೆಪಿ ಮುಖಂಡ ಮಂಜುನಾಥಯ್ಯ.ಮಾಜಿ ಜಿಪಂ ಸದಸ್ಯ ಸೊಕ್ಕೆ ನಾಗರಾಜ್.ಮಾಜಿ ಜಿಪಂ ಸದಸ್ಯ ಎಸ್ ಕೆ ಮಂಜಣ್ಣ.ಸೇರಿದಂತೆ ಮುಂತಾದವರು ಹಾಜರಿದ್ದರು.