Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಡಿಸೆಂಬರ್ 25

ಯೇಸು ಕ್ರಿಸ್ತನ ಸಂದೇಶ ಹಾಗೂ ಮೌಲ್ಯಗಳನ್ನು ಮೈಗೂಡಿಸಿಕೊಳ್ಳೋಣ:ಶಾಸಕ.ಬಿ.ದೇವೇಂದ್ರಪ್ಪ ಕರೆ.

ಜಗಳೂರು ಸುದ್ದಿ:ವಿಧೆಯತೆ,ಪ್ರೀತಿ,ಕಾರುಣ್ಯದ ಮೂಲಕ ವಿಶ್ವಕ್ಕೆ ಮಾನವ ಧರ್ಮ ಸಾರಿದ ಯೇಸು ಕ್ರಿಸ್ತನ ಸಂದೇಶ ಹಾಗೂ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳೋಣ ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.

ಪಟ್ಟಣದ ಪ್ರೇರಣಾ ಚರ್ಚ್ ಆವರಣದಲ್ಲಿ ಪ್ರೇರಣಾ ಸಮಾಜ ಸೇವಾ ಟ್ರಸ್ಟ್ (ರಿ) ವತಿಯಿಂದ ಕ್ರಿಸ್ತ ಜಯಂತಿ-2023 ರ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧುನಿಕ ಸಮಾಜದಲ್ಲಿ ಸಾಮರಸ್ಯತೆ ಕಣ್ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಟ್ಟಣದಲ್ಲಿ ಪ್ರೇರಣಾ ಟ್ರಸ್ಟ್ ತಾಲೂಕಿನಲ್ಲಿ ಸಮಾಜ‌ಮುಖಿ ಕಾರ್ಯಕ್ರಮಗಳ ಜೊತೆಗೆ ಪ್ರತಿವರ್ಷ
ಕ್ರಿಸ್ ಮಸ್ ಹಬ್ಬದಂದು ಸರ್ವಧರ್ಮ ಸಮ್ಮೇಳನ ಆಯೋಜಿಸಿ ಸಾಮರಸ್ಯತೆಯ ದೃಷ್ಠಿಕೋನದ ಪ್ರಚಾರಪಡಿಸುತ್ತಿರುವುದು ಶ್ಲಾಘನೀಯ ಎಂದರು.

ಪ್ರತಿಯೊಂದು ಧರ್ಮದಲ್ಲಿ ಜನಿಸಿದ ವ್ಯಕ್ತಿಯಲ್ಲಿಯೂ ರಕ್ತದ ಬಣ್ಣ ಒಂದೇ ಆಗಿದ್ದು.ಟಿ.ವಿ.ಮೊಬೈಲ್,ದುಶ್ಚಟಗಳ ದಾಸರಾಗದೆ.ಪ್ರತಿಯೊಬ್ಬರೂ ಆಯಾ ಧರ್ಮಗಳ ದೇವರುಗಳ ದಾಸನಾಗಿ ಉಪಾಸನೆ ನಡೆಸಿದರೆ ಮಾತ್ರ ಹರಿಷಡ್ವರ್ಗಗಳಿಗೆ,ಹುಟ್ಟುಸಾವಿಗೆ ಮುಕ್ತಿ ಲಭಿಸುವುದು ಎಂದು ಆಧ್ಯಾತ್ಮೀಕತೆಯ ಸಾರವನ್ನು ವಚನಗಳೊಂದಿಗೆ ಗಮನಸೆಳೆದರು.

ಆಧ್ಯಾತ್ಮಿಕ‌ತೆ,ಶಾಂತಿ,ನೆಮ್ಮದಿ,ಕೇಂದ್ರವಾಗಿರುವ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸುಸಜ್ಜಿತ ಕಟ್ಟಡವನ್ನು ಪಟ್ಟಣದಲ್ಲಿ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಆವರಗೊಳ್ಳದ ಪುರವರ್ಗ ಹಿರೇಮಠದ ಶ್ರೀ.ಷ.ಬ್ರ.ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಧಿವ್ಯಸಾನಿಧ್ಯವಹಿಸಿ ಆಶೀರ್ವಾಚನ ನೀಡಿ,ಮತಾಂಧತರಿಂದ ದೈಹಿಕ, ಮಾನಸಿಕ, ಹಿಂಸೆಗಳನ್ನು ಸಹಿಸಿಕೊಂಡು ಜಗಜ್ಯೋತಿಯಾಗಿರುವ ಯೇಸು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದರು.ಪ್ರತಿಯೊಂದು ಧರ್ಮ ಜಾತ್ಯಾತೀತ,ಧರ್ಮಾತೀತವಾಗಿದ್ದು. ಧಾರ್ಮಿಕ ನೆಲೆಗಟ್ಟಿನ ಮೇಲೆ ಅವುಗಳನ್ನು ಆರಾಧಿಸುವ ಉದಾರತೆ, ವೈಶಾಲ್ಯತೆಯ ಮನೋಭಾವ ಬೆಳೆಸಿಕೊಳ್ಳಬೇಕಿದೆ.ಅಂತರಾತ್ಮದಲ್ಲಿ ಪರಮಾತ್ಮ ಅಡಗಿದ್ದಾನೆ.ಸ್ವಧರ್ಮ ನಿಷ್ಠೆ,ಪರಧರ್ಮ ಸಹಿಷ್ಣತೆಯಿಂದ ಐಕ್ಯತೆಭಾವನೆ ಸಾರಬೇಕಿದೆ ಎಂದರು.

ಪ್ರವಾದಿ ಸಾಧು ಸಂತರು ಅಜ್ಞಾನದ ಕತ್ತಲನ್ನು ತೊಲಗಿಸಿ ಜ್ಞಾನದ ಬೆಳಕನ್ನು ಸಮಾಜದಲ್ಲಿ ಉಳಿಸಿ ಹೋಗಿದ್ದಾರೆ.ಆಚಾರ ವಿಚಾರದಲ್ಲಿ ಸನ್ಮಾರ್ಗದಿಂದ ನಡೆಯಬೇಕು.ಮನುಷ್ಯ ಅಸೂಯೆ,ಸ್ವಾರ್ಥ ತೊರೆದು ಲೋಕಕಲ್ಯಾಣಕ್ಕಾಗಿ ಪರೋಪಕಾರಿಯಾಗಿ ಪುಣ್ಯಗಳಿಸಬೇಕು ಎಂದು ಸಲಹೆ ನೀಡಿದರು.

ಕುಂದಾಪುರ ಹಳವಳ್ಳಿಯ ಜೀರ್ಫ್ ಇಮಾಂ ಖಿಲ್ ರಿಯಾ ಮಸ್ಜೀದ್ ನ ಮೌಲನಾ ಅಬೂಬ್ಕರ್ ಸಿದ್ದಿಕ್ ಪಾಳೀಲಿ ಅಲ್ ಹಿಕಮಿ ಮಾತನಾಡಿ,ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಭಾರತೀಯರಾದ ನಾವು ವೈವಿದ್ಯತೆಯಲ್ಲಿ ಏಕತೆ ಉಳಿಸಬೇಕಿದೆ.ಕೆಲವರು ದೇಶದಲ್ಲಿ ರಾಜಕೀಯ ಹಿತಾಸಕ್ತಿಗಾಗಿ ವಿನಾಕಾರಣ ಧರ್ಮಾಂದತೆ,ಕೋಮುಗಲಬೆ ಸೃಷ್ಠಿಸುತ್ತಿದ್ದಾರೆ.ಇದರಿಂದ
ಪ್ರತಿಯೊಬ್ಬರೂ ತನ್ನ ದಿನನಿತ್ಯದ ಅಗತ್ಯತೆಗೆ ಇತರೆ ಧರ್ಮ,ಜಾತಿಯವರನ್ನು ಪರಸ್ಪರವಾಗಿ ಅವಲಂಬಿಸಿ ಸೌಹಾರ್ದತೆ ಭಾವೈಕ್ಯತೆಯಿಂದ ನಡೆಸುತ್ತಿರುವ ನೆಮ್ಮದಿಯ ಜೀವನಕ್ಕೆ ದಕ್ಕೆ ಉಂಟಾಗುತ್ತಿದೆ ಎಂದು ಕಳವಳ‌ವ್ಯಕ್ತಪಡಿಸಿದರು.

ಭವಿಷ್ಯದಲ್ಲಿ ದೇಶದ ನಿರ್ಮಾತೃಗಳಾಗಿರುವ ಶಾಲಾ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು,ಅನ್ಯಧರ್ಮೀಯರನ್ನು ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಶಿಕ್ಷಣ ಸಂಸ್ಥೆಗಳು ಬಿತ್ತಬೇಕಿದೆ.ಅಲ್ಲದೆ ಪೋಷಕರು ಅಂಕಗಳಿಕೆ ದೃಷ್ಠಿಯಿಂದ
ಮಕ್ಕಳಿಗೆ ಮಾನಸಿಕ,ದೈಹಿಕ‌‌ ನಿಂದನೆ ಮಾಡದೆ.ಆಸಕ್ತಿದಾಯಕ ಕ್ಷೇತ್ರದಲ್ಲಿ ಪ್ರತಿಭೆಯನ್ನು ಪ್ರೊತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.

ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಅಕ್ಕಭಾರತಿ ಮಾತನಾಡಿ,ಜಗತ್ತಿಗೆ ಚಂದ್ರಯಾನ ಪರಿಚಯಿಸಿದ ಕೀರ್ತಿ ಭಾರತದ ಇಸ್ರೋ ಸಂಸ್ಥೆಗೆ ಸಲ್ಲುತ್ತದೆ.ನಾವೆಲ್ಲರೂ ಭಾರತೀಯರಾಗಿದ್ದು.ಭಾವೈಕ್ಯತೆಯಿಂದ ಭಾವ ಬೆಸೆಯಬೇಕಿದೆ.ಪಾಪವನ್ನು ದ್ವೇಷಿಸಿ ಪಾಪಿಯನ್ನು ಪ್ರೀತಿಸಬೇಕು.ಧಾರ್ಮಿಕ ಕೇಂದ್ರಗಳು ದಿವ್ಯಶಕ್ತಿಯ ಕೇಂದ್ರಗಳಿದ್ದಂತೆ ಎಂದು ಹೇಳಿದರು.

ಸಂದರ್ಭದಲ್ಲಿ ಶಿವಮೊಗ್ಗದ ಅಂತರ್ ಧರ್ಮೀಯ ಸೌಹಾರ್ದ ಆಯೋಗದ ನಿರ್ದೇಶಕ ವಂ.ಫಾದರ್ ನೆಲ್ಸನ್ ಪಿಂಟೊ,ಪ್ರೇರಣಾ ಟ್ರಸ್ಟ್ ನ ಫಾದರ್ ಸಿಲ್ವೆಸ್ಟರ್ ಫಿರೆರಾ,ದಾವಣಗೆರೆ ಡಾನ್ ಬಾಸ್ಕೋ ನ ಫಾದರ್ ರೆಜಿ ಜೇಕಬ್,ಡಾ.ಶ್ವೇತಾ,ಜ್ಞಾನತರಂಗಿಣಿ ವಿದ್ಯಾ ಸಂಸ್ಥೆಯ ಪಿ.ಎಸ್.ಅರವಿಂದನ್,ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಜನಾರ್ಧನ್,ಸಿ.ತಿಪ್ಪೇಸ್ವಾಮಿ,ಕರವೇ ಮಹಾಂತೇಶ್,ಇಂದಿರಾ ಗುರುಸ್ವಾಮಿ,ಶಾಹಿನಾ ಬೇಗಂ ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!