ಕೊಣಚಗಲ್ ಗುಡ್ಡದ ಐತಿಹಾಸಿಕ ಪುಷ್ಕರಣಿಗೆ ಈಜಲು ಹೋದ ಪಿ.ಯು.ಸಿ ವಿಧ್ಯಾರ್ಥಿ ಪಾರುಕ್ ಎಂಬ ಯುವಕ ನಾಪತ್ತೆ ಈಜು ತಜ್ಘರಿಂದ ಹುಡುಕಾಟ . ಜಗಳೂರು ತಾಲ್ಲೂಕಿನ ಕೊಣಚಗಲ್ ಗುಡ್ಡದ ಬಳಿಯಿರುವ ಐತಿಹಾಸಿಕ ನಕ್ಷತ್ರಕಾರದ ಪುಷ್ಕರಣಿಗೆ ದಾವಣಗೆರೆ ಮೂಲದ ಯುವಕ ಸ್ನೇಹಿತರ ಜೊತೆ ಈಜಲು ಹೋಗಿ ಈಜು ಬರದೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.ಈ ವಿಧ್ಯಾರ್ಥಿ ಪಾರುಕ್ ದಾವಣಗೆರೆ ನಿವಾಸಿಯಾಗಿದ್ದು ತನ್ನ ಸಂಬಂಧಿಕರ ಅಜ್ಜಿ ಮನೆಯಾದ ಸಂತೆಮುದ್ದಾಪುರ ಗ್ರಾಮಕ್ಕೆ ಬಂದಿದ್ದ ಮಧ್ಯಾಹ್ನ ಗ್ರಾಮದ ಕೆಲ ಸ್ನೇಹಿತರ ಜೊತೆ ಸೇರಿ ಕೊಣಚಗಲ್ ಗುಡ್ಡದ ಬೃಹತ್ತಾದ ಪುಷ್ಕರಣಿಗೆ ಈಜಲು ನೀರಿಗೆ ಇಳಿದಿದ್ದರು ಆದರೆ ಸ್ನೇಹಿತರು ಈಜಿ ದಡ ಸೇರಿದರೆ 18 ವರ್ಷದ ಪಾರುಕ್ ಮಾತ್ರ ನೀರಿನಿಂದ ದಡಕೆ ಬರಲಿಲ್ಲ ಸ್ನೇಹಿತರು ಗಾಬರಿಗೊಂಡು ಸಂಬಂಧಿಕರಿಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಈಜು ತಜ್ಘರೊಂದಿಗೆ ಮಧ್ಯಾಹ್ನದಿಂದ ಸಂಜೆತನಕ ಪಾರುಕ್ ನ ಶವಗಾಗಿ ಹುಡುಕಾಟ ನಡೆಸಿದರು ಸುಳಿವು ಇಲ್ಲ ಕಾರ್ಯಚರಣೆ ಮುಂದುವರೆದಿದೆ ಎನ್ನಲಾಗಿದೆ ಸ್ಥಳಕ್ಕೆ ಪೊಲೀಸ್ ಇಲಾಖೆ ಸೇರಿದಂತೆ ಗ್ರಾಪಂ ಸಿಬ್ಬಂಧಿ ಇನ್ನು ವಿವಿಧ ತಾಲ್ಲೂಕು ಆಡಳಿತ ಹರಿಹರದ ಈಜುತಜ್ಘರೊಂದಿಗೆ ಹುಡುಕಾಟದ ಕಾರ್ಯಚರಣೆ ನಡೆಸಿದ್ದಾರೆ ಎನ್ನಲಾಗಿದೆ.