ಏಪ್ರಿಲ್ 6 ರಂದು ತಾಲ್ಲೂಕಿನ ಸಂತೆಮುದ್ದಾಪುರ ಬಳಿಯಿರುವ ಐತಿಹಾಸಿಕ ಸಂಜೀವಮೂರ್ತಿ ಬೇಡಿ ಆಂಜನೇಯ ಸ್ವಾಮಿ ಸುಕ್ಷೇತ್ರದಲ್ಲಿ ಹನುಮಮಾಲಾ ಪವಮಾನ ಹೋಮ ಧರ್ಮ ಜನ ಜಾಗೃತಿ ಸಮಾವೇಶ ಜರುಗಲಿದೆ ಎಂದು ಮಾಜಿ ತಾಪಂ ಸದಸ್ಯ ಇ ಎನ್ ಪ್ರಕಾಶ್ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾ ಭವನದಲ್ಲಿ ಹನುಮ ಸೇವಾ ಸಮಿತಿ ಪದಾಧಿಕಾರಿಗಳು ಸುದ್ದಿಗಾರರೊಂದಿಗೆ ಮಾತನಾಡಿದರು ದಿ.ಏಪ್ರಿಲ್ 6 ರಂದು ತಾಲ್ಲೂಕಿನ ಸಂತೆ ಮುದ್ದಾಪುರ ಗ್ರಾಮದ ಬಳಿಯಿರುವ ಸಂಜೀಮೂರ್ತಿ 8 ಅಡಿ ಬೃಹತ್ ವಿಗ್ರಹವಿದೆ. ಅಂದಿನ ರಾಜರ ಆಡಳಿತಾವಧಿಯಲ್ಲಿ ಭಕ್ತಿಯಿಂದ ಸುಂದರ ದೇವಾಲಯ ನಿರ್ಮಿಸಿದ್ದರು ಶ್ರೀ ಆಂಜನೇಯ ಈ ಬಾಗದ ಸುತ್ತಮುತ್ತ ಊರಿನ ಸಧಭಕ್ತರ ಆರಾಧ್ಯದೈವವು ಹೌದು ಇಲ್ಲಿನ ರೈತರು ಜಮಿನಿಗೆ ಹುತ್ತಿ ಬಿತ್ತಿ ಬೆಳೆ ಬೆಳೆಯಲು ಜಮೀನುಗಳಿಗೆ ತೆರಳುವಾಗ ಒಂದು ಹಿಡಿ ಕಾಳು ಈ ದೇವರಿಗೆ ಹಾಕಿ ಉತ್ತಮ ಬೆಳೆ ಬೆಳೆಯಲಿ ಎಂದು ಪೂಜಿಸಿ ಬೇಡಿಕೊಳ್ಳುವರು ತಮ್ಮ ಇಷ್ಟಾರ್ಥ ಗಳುನ್ನು ಹಿಡೇರಿಸುವಂತೆ ದೈವ ಶಕ್ತಿ ಕೇಂದ್ರವು ಇದಾಗಿದೆ. ಇಂತ ಐತಿಹಾಸಿಕ ದೇವಾಲಯವು ಇತ್ತೀಚಿನ ದಿನಮಾನಗಳಲ್ಲಿ ಗುಡಿಯು ಶಿತ್ಥಿಲಗೊಂಡಿತ್ತು .ಇದನ್ನು ಕಂಡ ಅಕ್ಕಪಕ್ಕದ ಗ್ರಾಮದವರಾದ ನಾವು ಈ ದೇವಾಲಯವನ್ನು ಪುನರ್ ಸ್ಥಾಪಿಸಿ ಭಕ್ತಿಭಾವದಿಂದ ಪೂಜಿಸಿ ಈ ದೇವಾಲಯದ ವೈಶಿಷ್ಟ್ಯವನ್ನು ಎತ್ತಿಹಿಡಿದು ಭಾರತೀಯ ಪರಂಪರೆ ಸಂಸ್ಕ್ರತಿ ಸಾರವನ್ನ ಜನತೆಗೆ ತಿಳಿಸಲು ಈ ಬಾಗದಲ್ಲಿ ಜಾತ್ಯಾತೀತವಾಗಿ ಧಾರ್ಮಿಕತೆ ಭಕ್ತಿಭಾವದೊಂದಿಗೆ ಪ್ರಥಮ ಬಾರಿಗೆ ಹನುಮ ಜಯಂತಿ ಮಾಡಲು ಮುಂದಾಗಿದ್ದೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. .ಮುಖಂಡ ಮರುಳಾರಾಧ್ಯ ಮಾತನಾಡಿ ದೇಶದಲ್ಲಿಯೇ ಬೇಡಿ ಆಂಜೇನೇಯ ವಿಗ್ರಹವಿರುವ ಮೂರ್ತಿಯುಳ್ಳ ವಿಗ್ರಹ ಅಪರೂಪ ಇಂತ ಶಕ್ತಿ ಕೇಂದ್ರವಾಗಿರುವ ಸ್ಥಳದಲ್ಲಿ ನಮ್ಮ ಸೇವಾ ಸಮಿತಿಯವರು ಬರುವ ಏಪ್ರಿಲ್ 6 ರಂದು ಅತ್ಯಧಿಕ ಸಂಖ್ಯೆಯ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಪವಮಾನ ಹೋಮ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .ಈ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಗವಿಮಠದ ಶ್ರೀ ಷ.ಬ.ನಾಲ್ವಡಿ ಶಾಂತಲಿಂಗಶಿವಾಚಾರ್ಯ ಸ್ವಾಮಿಜಿ.ವಾಲ್ಮೀಕಿ ಮಹರ್ಷಿ ಪ್ರಸನ್ನನಂದ ಸ್ಬಾಮಿಜಿ.ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿ.ಸೇರಿದಂತೆ ಸರ್ದಾರ್ ಸೇವಾಲಾಲ್ ಸ್ವಾಮಿಜಿ ಇನ್ನು ಮುಂತಾದ ಸ್ವಾಮಿ ಜಿಗಳು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ________________ ತಾಲ್ಲೂಕಿನ ಸಂತೆ ಮುದ್ದಾಪುರ ಗ್ರಾಮಕ್ಕೆ ಸಂತೆಮುದ್ದಾಪುರವೆಂದು ಹೆಸರು ಬರಲು ಕಾರಣವೇನು ಇಲ್ಲಿನ ಪಕ್ಕದಲ್ಲಿರುವ ಈಗಿನ ಕೊಣಚಗಲ್ ಸಂತೆ ಮುದ್ದಾಪುರ ಗ್ರಾಮದ ಬಳಿ ದಳವಾಯಿ ಮುದ್ದಣ್ಣ ಇಲ್ಲಿ ಸುಂದರ ಪುಷ್ಕರಣಿ ನಿರ್ಮಿಸಿರುತ್ತಾರೆ ಅದಲ್ಲದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಇಲ್ಲಿ ಮುತ್ತು ರತ್ನ ಬೆಳ್ಳಿ ಬಂಗಾರ ವಜ್ರವೈಡ್ಯೂರಿಯಗಳು ಇನ್ನಿತರೆ ವ್ಯಾಪಾರ ವಹಿವಾಟಿನ ಸಂತೆ ಕೇಂದ್ರವಾಗಿದ್ದರಿಂದ ಸಂತೆಮುದ್ದಾಪುರ ಎಂದು ಸಂತೆಮುದ್ದಾಪುರ ಗ್ರಾಮಕ್ಕೆ ಹೆಸರು ಬರಲು ಕಾರಣವಾಯಿತು ಎಂದು ಐತಿಹ್ಯವಿದೆ ಎಂದು ಸಂಶೋಧಕರಿಂದ ತಿಳುದು ಬರಲಿದೆ. ,_ _ _ ,___ ಹನುಮ ಸೇವಾ ಸಮಿತಿಯ ಮುಖಂಡ ಕರಿಬಸಪ್ಪರವರು ಮಾತನಾಡಿ ದಿನಾಂಕ 5 ರಂದು ಹನುಮ ಮಾಲಾಧಾರಿಗಳಿಂದ ಜಗಳೂರು ಪಟ್ಟಣದ ಹೊರಕೆರೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಡಾ.ಬಿ ಆರ್ ಅಂಬೇಡ್ಕರ್ ವೃತ್ತ ದವರೆಗೆ ವೈಭವಯುತ ಕುಂಭೋತ್ಸವ ಜರುಗಲಿದೆ .ಈ ಕಾರ್ಯಕ್ರಮದಲ್ಲಿ ರಾಜಕೀಯ ಪ್ರಮುಖರು.ಧಾರ್ಮಿಕ ಸಾಧು ಸಂತರು ಸಾಮಾಜಿಕ ಮುಖಂಡರು ಭಕ್ತಮಂಡಳಿಯವರು ಭಾಗವಹಿಸುವರು ಇಂತ ವಿಶೇಷ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ಸಂಸ್ಕಾರ ಪರಂಪರೆ ಉಳಿವಿಗಾಗಿ ಈ ಜಾತ್ಯಾತೀತವಾದ ಧಾರ್ಮಿಕ ಕಾರ್ಯಕ್ರಮ ಸಾಕ್ಷಿಯಾಗಲಿದೆ ಸುಮಾರು 300 ಕ್ಕಿಂತ ಹೆಚ್ಚು ಹನುಮ ಮಾಲಧಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಕ್ತಮಂಡಳಿ ಸದಸ್ಯರಾದ ಹೆಚ್ ಸಿ ಕೃಷ್ಣ ಮೂರ್ತಿ.ಪ್ರಕಾಶ್.ಪ್ರಜ್ವಲ್ .ಬಾಣೇಶಿ.ವಕೀಲರಾದ ಕೊಟ್ರೇಶ್ ಸೇರಿದಂತೆ ಹಾಜರಿದ್ದರು.