Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 3
ಕೊಲಾರ ಜಿಲ್ಲೆಯ ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಮನವಿ
ಜಗಳೂರು ಸುದ್ದಿ:ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ದಲಿತರ ಗುಡಿಸಲಿಗೆ ಬೆಂಕಿಹಚ್ಚಿದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಹಾಗೂ ಮನೆ ನಿರ್ಮಿಸಿಕೊಡಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿಸಲ್ಲಿಸಿದರು
ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿದ ಕಾರ್ಯಕರ್ತಕರು ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲಿಖಿತ ಮನವಿಸಲ್ಲಿಸಿದರು.
ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ,ದಲಿತ ಕುಟುಂಬದ ಹನುಮಂತಪ್ಪನವರ ಮೂಕಪ್ರಾಣಿಗಳಾದ ಹಸುಗಳು ರಾಮೇಗೌಡನ ಜಮೀನಿನಲ್ಲಿ ಮೇಯಿಸಿದ ಕಾರಣಕ್ಕೆ ಹನುಮಂತಪ್ಪ ಅವರಿಗೆ ಚಾಕು ಇರಿದಿದ್ದಲ್ಲದೆ.ಸಹೋದರನಾದ ರೆಡ್ಡೆಪ್ಪ ಅವರಮೇಲೆ ಹಲ್ಲೆಮಾಡಿ ವಾಸವಾಗಿದ್ದ ಗುಡಿಸಲಿಗೆ ಬೆಂಕಿ ಹಚ್ಚಿರುವುದು ಖಂಡನೀಯ.ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ದಲಿತ ವಿರೋಧಿ ನೀತಿ ಕಾಣುತ್ತಿದೆ.ಕೂಡಲೇ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಇಲ್ಲವಾದರೆ ಉಗ್ರಸ್ವರೂಪದ ಹೊರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಕೀಲಹನುಮಂತಪ್ಪ ಮಾತನಾಡಿ,ದೇಶದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದು.ಮನುವಾದಿಗಳು ಕೋಲಾರ ಜಿಲ್ಲೆಯ ದಲಿತ ಸಮುದಾಯದ ಹನುಮಂತಪ್ಪ ಅವರ ಗುಡಿಸಲಿಗೆ ಬೆಂಕಿ ಹಚ್ಚುವುದು ದೌರ್ಜನ್ಯದ ಪರಮಾವಧಿ,ಘಟನಾ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಪೋಲಿಸರು ಆಗಮಿಸದಿದ್ದರೆ.ಕಂಬಾಪಲ್ಲಿ ಪ್ರಕರಣ ಮರುಕಳಿಸುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕುಬೇಂದ್ರಪ್ಪ,ಮುಖಂಡರಾದ ವಕೀಲ ಆರ್.ಓಬಳೇಶ್, ಮಾದಿಹಳ್ಳಿ ಮಂಜುನಾಥ್,ಶಿವಣ್ಣ,ರವಿ,ಮೆದಗಿನಕೆರೆ ಹನುಮಂತಪ್ಪ,ಮುನಿಸ್ವಾಮಿ,ಪಲ್ಲಾಗಟ್ಟೆ ರಂಗಪ್ಪ,,ಸೇರಿದಂತೆ ಭಾಗವಹಿಸಿದ್ದರು.