ಸುದ್ದಿ ಜಗಳೂರು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 9
ಆರೋಗ್ಯ ಇಲಾಖೆಯಿಂದ ಗರ್ಭಿಣಿಯರಿಗೆ ಸೀಮಂತ ಹಾಗೂ ಗರ್ಭಸಂಸ್ಕಾರ ಕಾರ್ಯಕ್ರಮ.
ಜಗಳೂರು ಸುದ್ದಿ:ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಫಲಪುಷ್ಪ ಸಿಹಿ ವಿತರಿಸಿ ಸೀಮಂತ ಕಾರ್ಯಕ್ರಮ ಹಾಗೂ ಪ್ರೇರಣಾ ಸೇವಾ ಸಂಸ್ಥೆ,ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೇಂದ್ರದಿಂದ ಗರ್ಭಸಂಸ್ಕಾರ ಕಾರ್ಯಕ್ರಮ ನಡೆಸಲಾಯಿತು.
ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ.ವಿಶ್ವನಾಥ್ ಮಾತನಾಡಿ,ಗರ್ಭಿಣಿಯರು ಸಕಾಲದಲ್ಲಿ ಮುನ್ನೆಚ್ವರಿಕೆ ಚುಚ್ಚುಮದ್ದುಗಳನ್ನು ಆಶಾ ಕಾರ್ಯಕರ್ತೆಯರ ಮುಖಾಂತರ ಪಡೆಯಬೇಕು.ಅಲ್ಲದೆ ಗುಣಮಟ್ಟದ ಪೌಷ್ಠಿಕ ಆಹಾರ ಸೇವನೆಯೊಂದಿಗೆ ಗರ್ಭಾವಸ್ಥೆಯಲ್ಲಿನ ಮಗುವಿನ ಬಗ್ಗೆ ಕಾಳಜಿವಹಿಸಿ.ಹೆರಿಗೆ ನಂತರ ಮಕ್ಕಳು ಆರೋಗ್ಯಕರವಾಗಿರುತ್ತಾರೆ ಎಂದು ಸಲಹೆ ನೀಡಿದರು.
ಡಾ.ಶ್ವೇತಾ ಮಾತನಾಡಿ,ಗರ್ಭಿಣಿಯರು ಕೇವಲ ಆಹಾರಪದ್ದತಿಗೆ ಸೀಮಿತವಾಗದೆ ಯೋಗ ಪ್ರಾಣಯಾಮ,ಧ್ಯಾನ,ಮಂತ್ರಪಠಣ ಅನುಸರಿಸುವುದರ ಜೊತೆಗೆ ಸಂಗೀತದಲ್ಲಿ ಕಲ್ಯಾಣ ರಾಗ ಕೇಳಿದರೆ ಸದೃಢ ಆರೋಗ್ಯ ಗಳಿಸಲು ಸಹಕಾರಿ,ಮಗುವಿಗೆ ಗರ್ಭ ಸಂಸ್ಕಾರ ಬೆಳೆಸಿದಂತೆ ಎಂದು ಹೇಳಿದರು.
ಬಾಕ್ಸ್:ಕಾರ್ಯಕ್ರಮವನ್ನು ಕಿಷ್ಕಿಂದೆ ಕೊಠಡಿಯಲ್ಲಿ ಆಯೋಜಿಸಲಾಗಿತ್ತು.ಕೋವಿಡ್ ಮುನ್ನೆಚ್ಚರಿಕೆ ವಹಿಸಬೇಕಾದ ಆರೋಗ್ಯ ಇಲಾಖೆ ಕನಿಷ್ಠ ಪಕ್ಷ ಮಾಸ್ಕ್ ಗಳನ್ನು ಧರಿಸದೆ.ಕೋವಿಡ್ ಮಹಾಮಾರಿಗೆ ರಹದಾರಿ ಮಾಡಿದಂತಿತ್ತು ನಿರ್ಲಕ್ಷ್ಯವಹಿಸಿರುವುದು ಸಾರ್ವಜನಿಕರ ಆರೋಪಕ್ಕೆ ಸಾಕ್ಷಿಯಾಯಿತು.
ಸಂದರ್ಭದಲ್ಲಿ ತಾಲೂಕು ಆರೋಗ್ಯ ಇಲಾಖೆ ಆಡಳಿತಾಧಿಕಾರಿ ಷಣ್ಮುಖಪ್ಪ,ಸೇರಿದಂತೆ ಆಶಾ ಕಾರ್ಯಕರ್ತೆಯರು,ಸುಶ್ರೂಷಕಿಯರು ಭಾಗವಹಿಸಿದ್ದರು.