ಸುದ್ದಿ ಜಗಳೂರು

ದಲಿತ ಯುವಕನಮೇಲಿನ ಖಂಡಿಸಿ ಡಿಎಸ್ ಎಸ್ ಮನವಿ

ಜಗಳೂರು ಸುದ್ದಿ:ದಲಿತ ಯುವಕನ‌ಮೇಲಿನ ಹಲ್ಲೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಛೇರಿ ಮುಂಬಾಗ ಜಮಾಯಿಸಿ ಸರಕಾರದ ವಿರುದ್ದ ಘೋಷಣೆ ಕೂಗಿ ನಂತರ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.

ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ ಮಾತನಾಡಿ,ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಕೆರಮರಡಿ ಗ್ರಾಮದ ಗೊಲ್ಲರಹಟ್ಟಿ ಒಳಗಡೆ ಹಳೇಯ ಮನೆಯ ಕಟ್ಟಡ ತೆರವುಗೊಳಿಸಲು ಪ್ರವೇಶಿಸಿದ ಜೆಸಿಬಿ ಯಂತ್ರದ ಆಪರೇಟರ್ ಮಾರುತಿಯನ್ನು ಅಲ್ಲಿನ ಗ್ರಾಮದ ಮುಖಂಡರುಗಳು ಯುವಕ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂದು ತಿಳಿದ ತಕ್ಷಣ.ಗೊಲ್ಲರ ಹಟ್ಟಿಗೆ ದಲಿತರ ಪ್ರವೇಶವಿಲ್ಲ.ನೀನು ಬರಲು ಎಷ್ಟು ಧೈರ್ಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ.₹20000 ದಂಡ ವಿಧಿಸುವ ಮೂಲಕ ಅಸ್ಪೃಶ್ಯ ಆಚರಣೆ ಮಾಡಿದ್ದಾರೆ.ಇದು ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ಹನುಮಂತಪ್ಪ ಮಾತನಾಡಿ,ದಲಿತ ಯುವಕ‌ಮಾರುತಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು.ದಲಿತ ಪರವಾಗಿ ಆಡಳಿತ ನಡೆಸುತ್ತೇವೆ ಎಂಬುವವರು ಸ್ಥಳೀಯ ಶಾಸಕರಾಗಲಿ,ಸಚಿವರಾಗಲಿ ಸ್ಥಳಕ್ಕೆ ಧಾವಿಸದೆ.ದಲಿತ ವಿರೋಧಿ ನೀತಿ ಅನುಸರಿಸಿದ್ದಾರೆ.ಹಲ್ಲೆಗೊಳಗಾದ ಯುವಕನಿಗೆ ಸರಕಾರ ಪರಿಹಾರ ಒದಗಿಸಿ.ರಾಜ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಸ್ಪಷ್ಟ ಸಂದೇಶವನ್ನು ರಾಜ್ಯದ ಜನತೆಗೆ ರವಾನಿಸಬೇಕು.ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಉಗ್ರಸ್ವರೂಪದ ಹೊರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಪಾಂಡು,ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ರಂಗಪ್ಪ,ಮಲ್ಲೇಶ್,ನಿಂಗಪ್ಪ,ನಾಗರಾಜ್,ತಿಪ್ಪಣ್ಣ,ಮೆದಗಿನಕೆರೆ ಹನುಮಂತಪ್ಪ,ವೆಂಕಟೇಶ್,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!