ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್.ತಿಳಿಸಿದರು 

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜನವರಿ 12

ಜ.12 

ಸುದ್ದಿ ಜಗಳೂರು:-

ಜಗಳೂರು: ತಾಲ್ಲುಕು ಆಡಳಿತದಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಜ.15 ರಂದು ಸೋಮವಾರ ತಾಲ್ಲೂಕು ಕಛೇರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು  ತಹಶೀಲ್ದಾರ್ ಸೈಯದ್ ಕಲೀಂ ಉಲ್  ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ್ ಜಯಂತಿ ಆಚರಣೆ ಸಂಬಂಧವಾಗಿ ಕರೆಯಲಾಗಿದ್ದ   ಪೂರ್ವಭಾವಿ ಸಭೆಯಲ್ಲಿ ಅವರು  ಮಾತನಾಡಿದರು.

ಸರ್ಕಾರ ನಿಗದಿಪಡಿಸಿದಂತೆ  ಜ.15 ರಂದು   ತಾಲೂಕು ಕಛೇರಿಯಲ್ಲಿ ಸಮಾಜದ ಬಂಧುಗಳೊಂದಿಗೆ  ಸರಳವಾಗಿ ಅರ್ಥಪೂರ್ಣವಾಗಿ  ಆಚರಿಸಲಾಗುತ್ತದೆ .ತಾಲೂಕು ಎಲ್ಲಾ ಇಲಾಖೆಗಳು ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಜಯಂತಿ ಆಚರಿಸಲಾಗುವುದು ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ಬೋವಿ ಸಮಾಜದ ತಾಲ್ಲೂಕು ಅದ್ಯಕ್ಷ ಅರ್ಜುನ್ ಮಾತನಾಡಿದರು ತಹಶೀಲ್ದಾರ್ ಕಛೇರಿಯಲ್ಲಿ ನಡೆಯುವ ಸಿದ್ದರಾಮೇಶ್ವರ ಜಯಂತಿಯಲ್ಲಿ ಪಾಲ್ಗೋಳ್ಳುವ ಮೂಲಕ ಶರಣ ವಿಚಾರಧಾರೆಗಳನ್ನು ತಿಳಿಯಬೇಕಾಗಿದೆ. ದಿನಾಂಕ 15 ರಂದು  ಅಂದು ಬೆಳಿಗ್ಗೆ ಬೋವಿ ಸಮಾಜದ ವತಿಯಿಂದ ಸಿದ್ದರಾಮೇಶ್ವರ ಭಾವಚಿತ್ರದೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಛೇರಿವರೆಗೆ ಮುಖ್ಯರಸ್ತೆಯಲ್ಲಿ  ಮೆರವಣಿಗೆ ಮಾಡುವ ಮೂಲಕ ಪಟ್ಟಣದ ತಾಲ್ಲೂಕು  ಕಛೇರಿಯಲ್ಲಿ ಸರಳವಾಗಿ ಆಚರಿಸುವ ಜಯಂತಿಯಲ್ಲಿ ಭಾಗವಹಿಸಲಾಗುವುದು. ಸಮಾಜದ ಬಾಂದವರು  ಮತ್ತು ಸಹೋದರ ಸಮಾಜದವರು ಶಿವಯೋಗಿ ಸ್ವಾಮಿ ಜಯಂತಿ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು. ವಕೀಲರಾದ ಡಿ ಶ್ರೀನಿವಾಸ ಮಾತನಾಡಿದರು ಶಿವಯೋಗಿ ಸಿದರಾಮೇಶ್ವರ್ ಜಯಂತಿ ಆಚರಣೆ ಮೂಲಕ ಶರಣರ ಸಂದೇಶಗಳು ನಾವುಗಳು ಅರಿತುಕೊಳ್ಳಬೇಕಿದೆ. ಎಂದರು

ಈ ಸಂದರ್ಭದಲ್ಲಿ ಪಿ ಎಸ್ ಐ ಸಾಗರ್. ಗ್ರೇಡ್ ಟು ತಹಶೀಲ್ದಾರ್ ಮಂಜಾನಂದ.  ಭೋವಿ ಸಮಾಜದ  ಕಾರ್ಯದರ್ಶಿ ವಕೀಲ ಶ್ರೀನಿವಾಸ್  ಗೌರವ ಅಧ್ಯಕ್ಷರು ಮಾಳಮನಹಳ್ಳಿ ವೆಂಕಟೇಶ್. ಸಮಾಜದ ಮುಖಂಡರು ವಕೀಲ ಶ್ರೀನಿವಾಸ್  .ಸಮಾಜದ ಯುವ ಮುಖಂಡ ಬಿದರಕೆರೆ ವೀರೇಶ್.ಗಂಗಣ್ಣ. ಪಲ್ಲಾಗಟ್ಟೆ ಕೆ ವಿ ಬಸವರಾಜ್.ವೀರೇಶ. ಗ್ರಾಮ ಪಂ ಅಧ್ಯಕ್ಷರು ಪಿ ಈ ಶೇಖರಪ್ಪ. & ಬಿ ವಿ ಸುರೇಶ. ರಾಜಪ್ಪ .ಗಂಗಾಧರ್ ದ್ಯಾಮೇಶ್   .ವೀರಾಂಜೆನೇಯ. ಪರಶುರಾಮ್.   ಹಾಗೂ ವೀರಭದ್ರಪ್ಪ. ಈರಣ್ಣ. ಇನ್ನು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!