12 ನೇ ಶತಮಾನದ ಕಾಯಕಯೋಗಿ ಶಿವಯೋಗಿ ಸಿದ್ದರಾಮೇಶ್ವರ ಶರಣರ ಕೊಡುಗೆ ಸಮಾಜಕ್ಕೆ ಆಪಾರ ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯಪಟ್ಟರು
ಸುದ್ದಿ ಜಗಳೂರು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 15
ಪಟ್ಟಣದ ತಾಪಂ ಸಭಾಂಗಣದಲ್ಲಿ ಬೋವಿ ಸಮಾಜದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವೇದಿಕೆಯನ್ನುದ್ದೆಶಿಸಿ ಮಾತನಾಡಿದರು ಶ್ರೀಶೈಲದ ಪರಮಶಿಷ್ಯ ಈಗಿನ ಸೋಲ್ಲಾಪುರ ಸಿದ್ದರಾಮೇಶ್ವರ ಕಾಯಕ ಯೋಗದಿಂದ ಕರ್ಮಯೋಗಿಯಾದ ಸಿದ್ದರಾಮೇಶ್ವರ್ ರವರು ಮುದ್ದಯ್ಯ ಮತ್ತು ಸುಗ್ಗವ್ವ ದಂಪತಿಗೆ ಜನಿಸಿದ ಇವರು ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ಬಹೇತೇಕ ಇತಿಹಾಸಗಳು ಶೊಷಿತ ಸಮುದಾಯದವರಿದಂಲೆ ಸೃಷ್ಠಿಯಾಗಿರುವುದು ಚರಿತ್ರೆಗಳು ಸಾವಿರಾರು ಎಂದು ಶ್ಲಾಘಿಸಿದರು. ಬೋವಿ ಸಮಾಜದವರು ತೋಳಬಲದಿಂದ ಜೀವನ ಕಟ್ಟಿಕೊಂಡಿದ್ದಾರೆ.ನಾನು ತಾಲ್ಲೂಕಿನಲ್ಲಿ ಎಲ್ಲಾ ವರ್ಗದ ಜನರ ಹಿತ ಬಯಿಸುವ ಶಾಸಕ ನಾನು ಸೇವಕನಾಗಿ ಕೆಲಸ ಮಾಡುವೆ.ಕ್ಷೇತ್ರದಲ್ಲಿ ಜನರ ನಾಡಿಮಿಡಿತ ಗೊತ್ತಿರುವಂತ ನಾಯಕನಿಗೆ ಚುನಾವಣೆಗಳಲ್ಲಿ ಒಲೈಕೆ ಮಾಡಿ ರಾಜನಾದವನು ರಾಜ ನೀತಿ ಪಾಲಿಸಬೇಕು ಎಂದರು ತಮ್ಮ ಸಮುದಾಯಕ್ಕೆ ಮೀಸಲಾದ ಒಂದು ಎಕರೆ ಜಾಗದ ಸುತ್ತ ಕಾಂಪೌಂಡ್ ನಿರ್ಮಿಸಿ ಸಮುದಾಯ ಭವನ ನಿರ್ಮಿಸಲು ಅನುದಾನ ಕಲ್ಪಿಸುವೆ ಎಂದು ಕಾರ್ಯಕ್ರಮದಲ್ಲಿ ಸಮುದಾಯಕ್ಕೆ 50 ಸಾವಿರ ನಗದು ನೀಡುವ ಮೂಲಕ ಭರವಸೆ ನೀಡಿದರು.
ಕಾಂಗ್ರೆಸ್ ಎಸ್ಟಿ ಘಟಕದ ರಾಜ್ಯಾದ್ಯಕ್ಷ ಕೆ ಪಿ. ಪಾಲಯ್ಯ ಮಾತನಾಡಿದರು ಶಿವಯೋಗಿ ಸಿದ್ದರಾಮೇಶ್ವರ ಮಹನೀಯರ ಜಯಂತಿಯನ್ನ ಅವರ ವಿಚಾರ ಧಾರೆಗಳು ಮೂಲಕ ಸಮಾಜದ ಏಳ್ಗಿಯಾಗಲು ಅತ್ಯಂತ ಸಹಕಾರಿಯಾಗಿವೆ ಕೇವಲ ಡಿಜೆ ಹಾಕಿಕೊಂಡು ನೃತ್ಯ ಮಾಡುವುದಲ್ಲ ಅವರ ವೈಚಾರಿಕ ವಿಚಾರಗಳುನ್ನು ತಿಳಿದು ಸಮಾಜ ಅಭಿವೃದ್ಧಿಯಾಗಬೇಕಾಗಿದೆ.ನಮ್ಮ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎಲ್ಲಾ ವರ್ಗದ ಬಡವರಿಗಾಗಿ ಜನಪರ ಯೋಜನೆಗಳು ಸಾರ್ಥಕವಾಗಿವೆ ಎಂದರು .
ಬೋವಿ ಸಮಾಜದ ತಾಲೂಕು ಅದ್ಯಕ್ಷ ವೈ ಅರ್ಜುನ್ ಮಾತನಾಡಿ ಸಮಾಜದ ಯುವಕರು ನಮ್ಮ ಪ್ರಾತಸ್ಮರಣೆಯರ ಶರಣರ ತತ್ವದರ್ಶಗಳುನ್ನು ಪಾಲಿಸುವಂತೆ ಕರೆ ನೀಡಿದರು.ಟ್ಟಣದಲ್ಲಿ ಬೋವಿ ಸಮಾಜಕ್ಕೆ ಒಂದು ಎಕರೆ ಜಾಗವಿದ್ದು ಕಾಂಪೌಂಡ್ ನಿರ್ಮಿಸಿ ಕೋಡುವಂತೆ ಮನವಿ ಮಾಡಿಕೊಂಡರು.
ಪಟ್ಟಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಅದ್ದೂರಿಯಾಗಿ ಜರುಗಿತು
ಪ್ರಾಸ್ತಾವಿಕವಾಗಿ ವಕೀಲ ಡಿ ಶ್ರೀನಿವಾಸ ಮಾತನಾಡಿದರು. ಸರ್ಕಾರದ ಕೂಲಿಗಾಗಿ ಉದ್ಯೋಗ ಖಾತ್ರಿಯಂತ ಯೋಜನೆಗಳು ಇದ್ದರು ಸಹ ತಾಲೂಕಿನ ವಿವಿಧ ಗ್ರಾಮದಲ್ಲಿ ಬೋವಿ ಸಮಾಜದ ಬಾಂದವರು ಪ್ರಸ್ತುತ ದಿನಗಳಲ್ಲಿ ತಮ್ಮ ಹೊಟ್ಟೆ ಪಾಡಿಗಾಗಿ ಹೆಚ್ಚು ಜನರು ಚಿಕ್ಕಮಗಳೂರಿನಂತ ಪ್ರದೇಶಗಳಿಗೆ ಗುಳೆಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಯಂತಿ ಮೆರವಣಿಗೆಯಲ್ಲಿ ಶಾಸಕರು ಡಿಜೆ ಸೌಂಡ್ ಗೆ ಹೆಜ್ಜೆ ಹಾಕಿದರು.
ಜಗಳೂರು ಮುಖ್ಯರಸ್ತೆಯಲ್ಲಿ ವಿಜೃಂಭಣೆಯಿಂದ ಬೃಹತ್ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ಸಮಾಜ ವತಿಯಿಂದ ಮೆರವಣಿಗೆ ಜರುಗಿತು .ಬೆಳ್ಳಿ ಸಾರೋಟದಲ್ಲಿ ಸಿದ್ದರಾಮೇಶ್ವರ ಭಾವಚಿತ್ರದೊಂದಿಗೆ ಮೆರವಣಿಗೆ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತದಿಂದ ತಾಪಂ ಸಭಾಂಗಣದವರೆಗೂ ಸಾಗಿತು.ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಕ್ಷೇತ್ರದ ಶಾಸಕ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು ನಂತರ ಮಾಜಿ ಶಾಸಕ ಹೆಚ್ ಪಿ ರಾಜೇಶ್.ಹಾಗೂ ದಾವಣಗೆರೆ ಲೋಕಸಭಾ ಚುನಾವಣೆ ಬಿ ಜೆ.ಪಿ ಆಕಾಂಕ್ಷಿ ಕೆ ಬಿ ಕೋಟ್ರೇಶ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ.ವೀರ ಶೈವ ಸಮಾಜ ಮುಖಂಡ ಶಿವನಗೌಡ್ರು.ಮಾಜಿ ತಾಪಂ ಸದಸ್ಯ ಬೆಂಚ್ಚಿಕಟ್ಟೆ ಅಂಜಿನಪ್ಪ. ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್.ಕುರುಬ ಸಮಾಜದ ಮುಖಂಡ ಓಮಣ್ಣ.ಮುಖಂಡ ತಿಪ್ಪೇಸ್ವಾಮಿ.ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್..
ಮಾಳಮ್ಮನಹಳ್ಳಿ. ವೇಂಕಟೇಶ್.ಬೋವಿ ಸಮಾಜದ ಕಾರ್ಯಧರ್ಶಿ ವಕೀಲ ಶ್ರೀನಿವಾಸ . ಉಪ್ಪಾರ ಸಮಾಜದ ತಾಲೂಕು ಅದ್ಯಕ್ಷ ಬಂಗಾರಪ್ಪ.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ. ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ.ಪಲ್ಲಾಗಟ್ಟೆ ಗ್ರಾಪಂ ಅದ್ಯಕ್ಷ ಶೇಖರಪ್ಪ. ಉಪನ್ಯಾಸಕ ತಿಪ್ಪೇಸ್ವಾಮಿ. ಮುಖಂಡ ಬಾಲರಾಜ್.ಮುಖಂಡ ಗುರಪ್ಪ.ಬಿದರಕೆರೆ ವೀರೇಶ್.ಪಲ್ಲಾಗಟ್ಟೆ ವೇರೇಶ್.ವಕೀಲ ವೀರಣ್ಣ. ಗೋವಿಂದರಾಜ್.ಡಿ ಎಸ್ ಎಸ್ ಸಂಚಾಲಕ ಕುಬೇರಪ್ಪ. ಸೇರಿದಂತೆ ಹಾಜರಿದ್ದರು.