Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ. 24
ಅಸ್ಪೃಶ್ಯತೆ ನಿವಾರಣೆಗೆ ಕೈಜೋಡಿಸಿ:ಬೀರೇಂದ್ರಕುಮಾರ್ ಕರೆ
ಜಗಳೂರು ಸುದ್ದಿ:ಅಸ್ಪೃಶ್ಯತೆ ನಿವಾರಣೆಗೆ ಕೈಜೋಡಿಸಿ ಎಂದು ಸಮಾಜಕಲ್ಯಾಣ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಬೀರೇಂದ್ರಕುಮಾರ್ ಕರೆ ನೀಡಿದರು.
ತಾಲೂಕಿನ ಕ್ಯಾಸೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿ ಕ್ಯಾಸೇನಹಳ್ಳಿ,ಗೌರಿಪುರ,ಚಿಕ್ಕ ಉಜ್ಜಿನಿ ಗ್ರಾಮಗಳಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ
ಸಾಧನ ಕಲಾತಂಡದಿಂದ ಅಸ್ಪೃಶ್ಯತೆ ಕುರಿತು ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಆಶಯದಂತೆ ಗ್ರಾಮೀಣ ಭಾಗದಲ್ಲಿ ಜಾತ್ಯಾತೀತವಾಗಿ ಸರ್ವ ಜನಾಂಗದವರು ಶಾಂತಿ ಸಾಮರಸ್ಯತೆಯಿಂದ ಜೀವನ ಸಾಗಿಸಬೇಕು.ಅಸ್ಪೃಶ್ಯತೆ ಆಚರಣೆ ಮಾಡಿದರೆ ಕಾನೂನಾತ್ಮಕ ಶಿಕ್ಷೆಗೆ ಗುರಿಪಡಿಸಲಾಗುವುದು.ಆದ್ದರಿಂದ ಕಲಾತಂಡಗಳ ಮೂಲಕ ಜನಜಾಗೃತಿಮೂಡಿಸಲಾಗುತ್ತಿದೆ ಎಂದು
ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಮೇಲ್ವಿಚಾರಕ ಅಶೋಕ,ಸಾಧನ ಕಲಾತಂಡದ ಗ್ಯಾಸ್ ಏಜೆನ್ಸಿಯ ಮಾಲಿಕ ಓಬಣ್ಣ, . ಪತ್ರಕರ್ತರಾದ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ,ಮಾದಿಹಳ್ಳಿ ಮಂಜುನಾಥ.ಕಲಾವಿದರಾದ ರಾಜಣ್ಣ,ರೇಣುಕಾ,ಹಂಪಣ್ಣ,ದುರುಗೇಶ್,ಕೋನಸಾಗರ.ಶಂಕರ್,ಕಿರಣ್,ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.