ತಾಲ್ಲೂಕಿನ ಕೊಣಚಗಲ್ ಗುಡ್ಡದ ಐತಿಹಾಸಿಕ ಪುಷ್ಕರಣಿಗೆ ಪಿ.ಯು.ಸಿ ವಿಧ್ಯಾರ್ಥಿ ಪಾರುಕ್ ಬಿದ್ದು ಈಜು ಬರದೆ ಸಾವನ್ನಪ್ಪಿದ ಶವವನ್ನು ಈಜುಗಾರರು ಹೊರ ತೆಗೆಯಲು ಯಶ್ ಸ್ವಿಯಾಗಿದ್ದಾರೆ. ಜಗಳೂರು ತಾಲ್ಲೂಕಿನ ಕೊಣಚಗಲ್ ಗುಡ್ಡದ ಬಳಿಯಿರುವ ಐತಿಹಾಸಿಕ ನಕ್ಷತ್ರಕಾರದ ಪುಷ್ಕರಣಿಗೆ ದಾವಣಗೆರೆ ಮೂಲದ ಯುವಕ ಸ್ನೇಹಿತರ ಜೊತೆ ಈಜಲು ಹೋಗಿ ಈಜು ಬರದೆ ನಾಪತ್ತೆಯಾಗಿ ಸಾವನ್ನಪ್ಪಿದ್ದ ನಂತರ ನುರಿತ ಹರಿಹರದ ಈಜುಗಾರರು ನಿನ್ನೆಯಿಂದ ಇಂದು ಬೆಳ್ಳಿಗ್ಗೆಯ ತನಕ ಹೊಂಡದಲ್ಲಿ ಹುಡಕಾಟ ನಡೆಸಿ ಯುವಕನ ಮೃತ ದೇಹವನನ್ನು ಹೊರತೆಗೆಯಲು ಯಶ್ ಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ . ಈ ವಿಧ್ಯಾರ್ಥಿ ಪಾರುಕ್ ದಾವಣಗೆರೆ ನಿವಾಸಿಯಾಗಿದ್ದು ತನ್ನ ಸಂಬಂಧಿಕರ ಅಜ್ಜಿ ಮನೆಯಾದ ಸಂತೆಮುದ್ದಾಪುರ ಗ್ರಾಮಕ್ಕೆ ಬಂದಿದ್ದ ನಿನ್ನೆ ಮಧ್ಯಾಹ್ನ ಗ್ರಾಮದ ಕೆಲ ಸ್ನೇಹಿತರ ಜೊತೆ ಸೇರಿ ಕೊಣಚಗಲ್ ಗುಡ್ಡದ ಬೃಹತ್ತಾದ ಹೊಂಡದ ಪುಷ್ಕರಣಿಗೆ ಈಜಲು ನೀರಿಗೆ ಇಳಿದಿದ್ದರು ಆದರೆ ಸ್ನೇಹಿತರು ಈಜಿ ದಡ ಸೇರಿದರೆ 18 ವರ್ಷದ ಪಾರುಕ್ ಮಾತ್ರ ನೀರಿನಿಂದ ಈಜು ಬರದೆ ದಡಕೆ ಸೇರಲಿಲ್ಲ ಸ್ನೇಹಿತರು ಗಾಬರಿಗೊಂಡು ಸಂಬಂಧಿಕರಿಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಈಜು ತಜ್ಘರೊಂದಿಗೆ ಮಧ್ಯಾಹ್ನದಿಂದ ಸಂಜೆತನಕ ಪಾರುಕ್ ನ ಶವಕ್ಕಾಗಿ ಹುಡುಕಾಟದ ಕಾರ್ಯಚರಣೆ ನಡೆಸಿದ್ದರು ಇಂದು ಬೆಳಗಿನಜಾವ ಈಜುಗಾರರು ಶವವನ್ನು ಹೊರ ತೆಗೆಯಲು ಯಶ್ ಸ್ವಿಯಾಗಿದ್ದಾರೆ ಎನ್ನಲಾಗಿದೆ .ಮೃತ ಬಾಲಕನ ಸಂಬಂಧಿಕರು ಹಾಗೂ ಅವರ ತಂದೆ ತಾಯಿಗಳ ಗೋಳಿನ ಆಕ್ರಂದನ ಮುಗಿಲು ಮುಟ್ಟುವಂತಿತ್ತು . ಸ್ಥಳಕ್ಕೆ ಪೊಲೀಸ್ ಇಲಾಖೆ ಸೇರಿದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜಯ್ಯ ಸಿಬ್ಬಂಧಿ ಇನ್ನು ವಿವಿಧ ಅಧಿಕಾರಿ ವರ್ಗ ಹಾಜರಿದ್ದರು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ