Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜನವರಿ 25

ತಾಲ್ಲೂಕಿನ ದೇವಿಕೆರೆ ಸರ್ಕಾರಿ ಪ್ರೌಡ ಶಾಲಾ ಮುಖ್ಯಶಿಕ್ಷಕಿ ವಿರುದ್ದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿದೆ.

ಜಗಳೂರು ಸುದ್ದಿ:ತಾಲೂಕಿನ ದೇವಿಕೆರೆ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಿರುದ್ದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹಾಗೂ ಪೋಷಕರು,ಗ್ರಾಮಸ್ಥರು ರಸ್ತೆ ತಡೆದು ಮುಖ್ಯಶಿಕ್ಷಕಿ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.

ಮುಖ್ಯಶಿಕ್ಷಕಿ ಅರ್ಜುನಮನ್ ಬಾನು ಅವರು ವಿದ್ಯಾರ್ಥಿಗಳಿಗೆ ಸರ್ಕಾರಿ ಸೌಲಭ್ಯಗಳಾದ ಶೂ,ಸಮವಸ್ತ್ರ,ಗಳನ್ನು ಸಮರ್ಪಕವಾಗಿ ವಿತರಿಸುವುದಿಲ್ಲ.ಕಳೆದ ವರ್ಷದಲ್ಲಿನ ಶೂಗಳನ್ನೇ ವಿತರಿಸಿದ್ದಾರೆ.ಅಲ್ಲದೆ ಕುಡಿಯುವ ನೀರಿಲ್ಲ,ಮೂಲಸೌಕರ್ಯಗಳು ಮರೀಚಿಕೆಯಾಗಿವೆ.ಅನಧಿಕೃತ ವಾಗಿ ₹500 ವರೆಗೆ ವಸೂಲಿ ಮಾಡುತ್ತಿದ್ದಾರೆ.ಪ್ರಶ್ನಿಸಿದರೆ ಭಯಪಡಿಸುತ್ತಾರೆ ಎಂದು ವಿದ್ಯಾರ್ಥಿಗಳು ಗಂಭೀರವಾಗಿ ಆರೋಪಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಎಂ.ಎಲ್.ನಾಗರಾಜ್ ಮಾತನಾಡಿ,ನಾನು ಎಸ್ ಡಿ ಎಂಸಿ ಅಧ್ಯಕ್ಷರಾಗಿ ಎರಡು ವರ್ಷ ಕಳೆದರೂ ಅಭಿವೃದ್ದಿ ಬಗ್ಗೆ ಮಾಹಿತಿಯಿಲ್ಲ.ಸಭೆಗಳಲ್ಲಿ ಸಹಿಯನ್ನೂ ಮಾಡಿಸಿಲ್ಲ.ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆ ಅಲ್ಲದೆ ಅನಧಿಕೃತವಾಗಿ ನಿರಂತರ ಗೈರಾಗುತ್ತಾರೆ.ಈ ಬಗ್ಗೆ ಹಲವು ಬಾರಿ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಇಂದು ಸ್ವಯಂ ಪ್ರೇರಿತವಾಗಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೊರಾಟಕ್ಕೆ ರಸ್ತೆಗಿಳಿದಿದ್ದಾರೆ.ಶಾಸಕರು ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಲು ಸೂಚಿಸಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಿಆರ್ ಸಿ ಭೇಟಿ:ಪ್ರತಿಭಟನಾ ಸ್ಥಳಕ್ಕೆ ಬಿಆರ್ ಸಿ ಡಿಡಿ ಹಾಲಪ್ಪ ಬೇಟಿ ನೀಡಿ ಪ್ರತಿಭಟನೆ ತಿಳಿಗೊಳಿಸಿ ಶಾಲಾ ಆವರಣದಲ್ಲಿ ಸಭೆ ನಡೆಸಿ.ಕಳೆದ 6 ತಿಂಗಳ ಹಿಂದೆ ಮುಖ್ಯಶಿಕ್ಷಕಿ ವರ್ಗಾವಣೆಗೆ ಶಿಫಾರಸ್ಸು ವರದಿ ಸಲ್ಲಿಸಲಾಗಿದೆ.ಆಯುಕ್ತರ ಹಂತದಲ್ಲಿದೆ.ಶಿಕ್ಷಣ ಇಲಾಖೆ ಅನ್ವಯ ತನಿಖೆ ನಡೆಯುತ್ತದೆ.ಇದೀಗ ಡಿಡಿಪಿಐ ಅವರ ನಿರ್ದೇಶನದಂತೆ ಸಿಪಿಸಿ ಫಾರಂನಲ್ಲಿ ಸಹಿಮಾಡಿಸಿ ಶಾಲೆಯ ಹಿರಿಯ ಶಿಕ್ಷಕರಿಗೆ ಮುಖ್ಯಶಿಕ್ಷಕರ ಜವಾಬ್ದಾರಿ ಕಾರ್ಯಭಾರ ವಹಿಸಿಲಾಗಿದೆ.ಮುಖ್ಯಶಿಕ್ಷಕಿ ಅರ್ಜುಮಂದ್ ಬಾನು ಅವರಿಗೆ ಕಡ್ಡಾಯ ರಜೆ ನೀಡಲಾಗಿದೆ .ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಒಟ್ಟು 142 ವಿದ್ಯಾರ್ಥಿಗಳು ದಾಖಲಾತಿ‌ ಹೊಂದಿದ್ದು. 6ಜನ ಒಬ್ಬ ಮುಖ್ಯಶಿಕ್ಷಕಿ ಇದ್ದಾರೆ.

ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಸುರೇಶ್ ರೆಡ್ಡಿ. ಮುಖಂಡ ಬಸವಾಪುರ ರವಿಚಂದ್ರ, ಗ್ರಾ.ಪಂ ಅಧ್ಯಕ್ಷೆ ರಣದಮ್ಮ,ಪತಿ ಚಂದ್ರಪ್ಪ,ಗ್ರಾ.ಪಂ.ಸದಸ್ಯರಾದ ಗುರುಸ್ವಾಮಿ,ನಾಗರಾಜ್ ,ಮುಖಂಡರಾದ ಶೃಂಗೇಶ್. ಸಿ ಆರ್ ಪಿ ಆಂಜನೇಯ,ಸ್ವಾಮಿ,ಸೇರಿದಂತೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!