Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 25
ಗುರಿ ಮತ್ತು ಗುರುವಿದ್ದರೆ ಸಾಧನೆ ಸುಲಭ:ಶ್ರೀನಿವಾಸ್ ರಾವ್ ಕಿವಿಮಾತು ಹೇಳಿದರು.
ಜಗಳೂರು ಸುದ್ದಿ:ವಿದ್ಯಾರ್ಥಿಗಳಿಗೆ ಗುರಿ ಮತ್ತು ಗುರುವಿದ್ದರೆ ಸಾಧನೆ ಸುಲಭ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರಾವ್ ಕಿವಿಮಾತು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳಿಗೆ ತೆರದಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿನಿಮಾ ನಟರ ಅಭಿಮಾನಿಗಳಾದರೆ ಸಾಲದು ದೇಶದ ಸೈನಿಕರು,ಪೋಷಕರ,ಹಾಗೂ ಅಂಬೇಡ್ಕರ್,ಬಸವಣ್ಣ,ಸ್ವಾಮಿವಿವೇಕಾನಂದರವರಂತಹ ಮಹಾನ್ ನಾಯಕರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕ.ಸಮಾಜದಲ್ಲಿ ಮಾನವೀಯ ಮೌಲ್ಯಗಳೊಂದಿಗೆ, ಸನ್ಮಾರ್ಗದಲ್ಲಿ ನಡೆಯಬೇಕು.ಗುರುಹಿರಿಯರಿಗೆ ಗೌರವ ಸಲ್ಲಿಸಬೇಕು ವಿದ್ಯೆಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು.ಭವಿಷ್ಯದಲ್ಲಿ ನಿಮ್ಮನ್ನು ಸಮಾಜ ಗುರುತಿಸುವಂತಾಗಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆ ಕುರಿತು ಪಾಠ ಹೇಳಿದ ಪಿಐ:ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ಅಧಿಕಾರಿಗಳ ಬಗ್ಗೆ ಭಯ ಆತಂಕ ಸಲ್ಲದು.ಇಲಾಖೆಯಲ್ಲಿ ಬಂಧಿಖಾನೆ,ಆಯುಧ ಕೊಠಡಿ,ಠಾಣಾಧಿಕಾರಿ,ಪೊಲೀಸ್ ಸಿಬ್ಬಂದಿಗಳ ಜವಾಬ್ದಾರಿ ಕುರಿತು ಮಾಹಿತಿಯ ಪಾಠ ಹೇಳಿದರು.ಹಾಗೂ ಉನ್ನತ ಹುದ್ದೆ ಅವಲಂಬಿಸಿ ವಯೋಮಾನ ಕಳೆಯುವುದಕ್ಕಿಂತ ದೈಹಿಕ ಸದೃಢತೆ ಉಳ್ಳವರು ಪೊಲೀಸ್ ವೃತ್ತಿ ಆಯ್ಕೆ ಮಾಡಿಕೊಂಡರೆ ಉತ್ತಮ ಜೀವನ ಸಾಗಿಸಬಹುದು ಎಂದು ಸಲಹೆ ನೀಡಿದರು.
ಸಂದರ್ಭದಲ್ಲಿ ಪಿಎಸ್ ಐ ಮಂಜುನಾಥ್ ಸ್ವಾಮಿ,ಪೊಲೀಸ್ ಸಿಬ್ಬಂದಿಗಳಾದ ಉಮಾಪತಿ,ಮಾರುತಿ,ವಸಂತರೆಡ್ಡಿ,ಶಶಿಧರ್,ಸೇರಿದಂತೆ ಇದ್ದರು.