Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 26
ಭಾರತ ದೇಶಕ್ಕೆ ಡಾ.ಬಿ ಆರ್ ಅಂಬೇಡ್ಕರ್ ರವರ ಕೊಡುಗೆ ಆಪಾರ ಸರ್ವಶ್ರೇಷ್ಠ ಸಂವಿಧಾನದಿಂದ ಸರ್ವರು ಸ್ವಾತಂತ್ರ್ಯವಾಗಿ ಜೀವಿಸಲು ಅತ್ಯಂತ ಸಹಕಾರಿ ಶಾಸಕ ಬಿ ದೇವೇಂದ್ರಪ್ಪ
ಜಗಳೂರು ಪಟ್ಟಣದ ಮುಖ್ಯ ರಸ್ತೆ ಆಗಲಿಕರಣ ಸೇರಿದಂತೆ ತಾಲ್ಲೂಕಿನಲ್ಲಿ ದುಸ್ಥಿತಿಯಲ್ಲಿರುವಂತ ಶಾಲಾ ಕಟ್ಟಡಗಳಿಗೆ ಅನುದಾನ ಕಲ್ಪಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಬಿ ದೇವೇಂದ್ರಪ್ಪ ಭರವಸೆ ನೀಡಿದರು
ಜಗಳೂರು ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ 75 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಭವ್ಯ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು ಧ್ವಜವಂದನೆ ಸ್ವಿಕರಿಸಿ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು ಸಂವಿಧಾನ ಕೇವಲ ಮಂತ್ರ ಜಪದಿಂದ ಬಂದಿಲ್ಲ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.. ಬಿ. ಆರ್ ಅಂಬೇಡ್ಕರ್ ರವರು ಕರುಡು ಸಮಿತಿಯ ಶ್ರಮದ ಫಲ ಬೃಹತ್ ರಾಷ್ಟ್ರಕ್ಕೆ ಸಮಾನತೆ .ಬ್ರಾತೃತ್ವ. ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಪಡೆದು ಸರ್ವರು ಸಮಪಾಲು ಸಮಬಾಳು ಎಂಬಂತೆ ಎಲ್ಲಾ ಆವಕಾಶ ಸಿಕ್ಕಿರುವುದು ಶ್ರೇಷ್ಠ ಸಂವಿಧಾನದಿಂದ ಹೊರೆತು ಮತ್ತೊಂದಿಲ್ಲ .ಪ್ರಸ್ತುತದಲ್ಲಿ ದೇಶದ ಕೆಲವೆಡೆಗಳಲ್ಲಿ ಕೆಲವರಿಂದ ಸಂವಿಧಾನ ತಿರುಚುವ ಹುನ್ನಾರವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತ ಸ್ವರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಸಂಸ್ಕಾರವಂತರಾಗಿ ತಮ್ಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ವರ್ಷ ನಮ್ಮ ತಾಲ್ಲೂಕಿನಲ್ಲಿ ಬರದಛಾಯೆ ಆವರಿಸಿದ್ದು ರೈತರ ಜನರ ಸಂಕಷ್ಟಗಳಿಗೆ ಸ್ವಂದಿಸಿ ಕೆಲಸ ಮಾಡುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಿ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ನೀಡಲು ಬದ್ದವಾಗಿದ್ದೆವೆ .ಹಳೆ ತಾಲ್ಲೂಕು ಕಛೇರಿ ಆವರಣದಲ್ಲಿ ಉತ್ತಮ ಕಟ್ಟಡ ಮಳಿಗೆ ಸಂಕೀರ್ಣ. .ತಾಲ್ಲೂಕಿನ ಉದ್ಗಟದ ಕಾನಾಮಡುಗು ರಸ್ತೆ ಅಭಿವೃದ್ಧಿಗೆ 5 ಕೋಟಿ.ಜಿನಿಗೆ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಿಸಲು 5 ಕೋಟಿ ತಾಲ್ಲೂಕಿನಲ್ಲಿ ದುಸ್ಥಿತಿಯಲ್ಲಿರುವ ವಿವಿಧ ಶಾಲೆಗಳ ದುರಸ್ತೆಗೆ 5 ಕೊಟಿ ರೂಗಳು ಮಂಜೂರು ಮಾಡಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು..
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅದ್ಯಕ್ಷರು ಹಾಗೂ ತಹಶೀಲ್ದಾರ್ ಸೈಯದ್ ಖಲೀಂ ಉಲ್ 75 ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೇರವೆರಿಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಶುಬಾ ಸಂದೇಶ ನೀಡಿದರು ಜನವರಿ 26 .1950 ರಂದು ಭಾರತದಂತ ಬೃಹತ್ ರಾಷ್ಟ್ರಕ್ಕೆ
ಅಂಬೇಡ್ಕರ್ ರವರ ಸಂವಿಧಾನವನ್ನ ಸಮರ್ಪಿಸಿಕೊಂಡ ಸಡಗರ ಸಂಭ್ರಮ ದಿನದಂದು ನಾವೆಲ್ಲರೂ ಗಣ ರಾಜ್ಯೋತ್ಸವ ಅಚರಣೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸಿಕೊಂಡು ಪ್ರತಿಯೊಬ್ಬ ನಾಗರೀಕ ಹಕ್ಕಿನ ಶಕ್ತಿಯ ಸಂಕೇತ ತ್ಯಾಗ ಬಲಿದಾನದ ಸ್ವಾತಂತ್ರ್ಯ ಮತ್ತು ಸಂವಿಧಾನ ಸರ್ವಕಾಲಕ್ಕೂ ಸರ್ವಶ್ರೇಷ್ಠ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೆಪಿಸಿಸಿ ಎಸ್ ಟಿ.ಘಟಕದ ರಾಜ್ಯಾದ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ ಪ್ರಜಾಸತ್ತಾತ್ಮಕ ದೇಶದಲ್ಲಿ ಆಡಳಿತ ಯಂತ್ರದಿಂದ ಸರ್ಕಾರಗಳು ಸಂವಿಧಾನ ಆಳವಡಿಕೆ ಮಾಡುವ ಮೂಲಕ ಸಮಾಜದಲ್ಲಿ ಅತಿ ಹಿಂದೂಳಿದ ಬಡ ದಲಿತ ಶೋಷಿತರ ಏಳ್ಗಿಗೆಗೆ ಶ್ರಮಿಸಬೇಕಾಗಿದೆ..ನಾವೆಲ್ಲರೂ ಸ್ವಾತಂತ್ರ್ಯವಾಗಿ ವೆದಿಕೆಯಲ್ಲಿ ಮಾತನಾಡಲು ಸರ್ವಶ್ರೇಷ್ಠ ಸಂವಿಧಾನ ಅಸ್ತ್ರದಿಂದ ದೇಶದ ಪ್ರಗತಿ ಅಡಗಿದೆ ಆದರೆ ಮಹಾನಾಯಕ ಅಂಬೇಡ್ಕರ್ ರವರುನ್ನು ಆರಾಧಿಸುವ ಬದಲು ದೇಶದ ಕೆಲ ವರ್ಗದಲ್ಲಿ ಮಬ್ಬು ಕವಿದ ಧರ್ಮಾಂಧತೆ ಭಕ್ತಿ ಶೋಬೇಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೇಶ ಭಕ್ತಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಕಿರು ಚಿತ್ರ ಮಕ್ಕಳಿಂದ ಪ್ರೇಕ್ಷಕರಿಗೆ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಪಿ ಐ ಶ್ರೀನಿವಾಸ್ ರಾವ್. ಬಿ.ಇ.ಓ ಹಾಲಮೂರ್ತಿ. . ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಸಾಧಿಕ್ ಉಲ್.. ಬಿಳಿಚೋಡು ಆರ್ ಐ ಧನುಂಜಯ್.
ಪಪಂ ಮಾಜಿ ಅದ್ಯಕ್ಷ ಹಾಲಿ ಸದಸ್ಯರಾದ ಅರ್ ತಿಪ್ಪೇಸ್ವಾಮಿ. ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಸಿ ಬಿ.ನಾಗರಾಜ್.ಕಾಂಗ್ರೆಸ್ ಮುಖಂಡ ಬಿ ಮಹೇಶ್..ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್. ಪಪಂ ಸದಸ್ಯರಾದ ರಮೇಶ್ ರೆಡ್ಡಿ ರವಿಕುಮಾರ್..ಲುಖ್ಮಾನ್ ಖಾನ್.ದೇವರಾಜ್.ಷಕೀಲ್ ಅಹಮದ್.ಜೆ ಪಾಪಲಿಂಗಪ್ಪ.ಪಪಂ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ನಿರ್ಮಲಕುಮಾರಿ. ಲಲಿತಾಮ್ಮ ಶಿವಣ್ಣ.ದಲಿತ ಮುಖಂಡ ಜಿ ಹೆಚ್ ಶಂಭಲಿಂಗಪ್ಪ.ಮುಖಂಡರಾದ ಪಲ್ಲಾಗಟ್ಟೆ ಶೇಕರಪ್ಪ.ಮಹಮದ್ ಗೌಸ್.ನಿರೂಪಕರಾದ ರಜಾಕ್. ವಿವಿಧ ಶಾಲಾ ಸಿಬ್ಬಂದಿ .ಮತ್ತು ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಹಾಜರಿದ್ದರು.