ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕ ಸಿದ್ದರಾಮ ಮಾರಿಹಾಳ್ ಭೇಟಿ :ಮನವೊಲಿಸಿದ ನಂತರ ಹೊರಾಟ ಹಿಂಪಡೆದ ರೈತರು.

ಜಗಳೂರು ಸುದ್ದಿ:ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಗಿ ಹಣಕ್ಕಾಗಿ ಆಗ್ರಹಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಕೈಗೊಂಡ ರೈತರಿಗೆ 9 ನೇ ದಿನದಂದು ನಡೆಯುತ್ತಿರುವ ಹೊರಾಟದ ಸ್ಥಳಕ್ಕೆ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪನಿರ್ದೇಶಕ ಸಿದ್ದರಾಮ ಮಾರಿಹಾಳ್ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಿ ಶೀಘ್ರ ಹಣ ಪಾವತಿಸಲಾಗುವುದು ಎಂದು ತಿಳಿಸಿದ ನಂತರ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

ನಂತರ ಮಾತನಾಡಿದ ಉಪನಿರ್ದೇಶಕ ಸಿದ್ದರಾಮ‌ ಮಾರಿಹಾಳ್,ಶಾಸಕರು ನಿಮ್ಮ ಸಮಸ್ಯೆ ಇತ್ಯರ್ಥಪಡಿಸಲು ಭರವಸೆ ನೀಡಿದ್ದಾರೆ.ಕಳೆದ ಮಂಗಳವಾರದಂದು ತಮ್ಮ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ರವಾನಿಸಿದ್ದು.ಮೊದಲು 108 ಫಲಾನುಭವಿಗಳಿಗೆ ಹಾಗೂ ನಂತರ ಹಂತ ಹಂತವಾಗಿ ಹಣ ಪಾವತಿಸಲಾಗುವುದು ರೈತರು ಸಹಕರಿಸಬೇಕಿದೆ.ಪಡಿತರ ಅಕ್ಕಿ ವಿತರಣಾ ಲಾರಿಗಳಿಗೆ ಅಡ್ಡಲಾಗಿರುವ ಹೊರಾಟವನ್ನು ಹಿಂಪಡೆದು.ಪಿಡಿಎಸ್ ಗೆ ಅವಕಾಶ ಕೊಡಬೇಕು ಎಂದು ಮನವೋಲಿಸಿದರು.

“ನಾವು ಗುರುವಾರದವರೆಗೆ ಸರ್ಕಾರದಿಂದ ರಾಗಿ ಹಣಪಾವತಿ ಸುದ್ದಿಗಾಗಿ ಕಾಯುತ್ತಿದ್ದು.ಇದೀಗ ತಾತ್ಕಾಲಿಕವಾಗಿ ಹೊರಾಟ ಹಿಂಪಡೆಯುತ್ತಿದ್ದೇವೆ. ಎಲ್ಲಾ ಫಲಾನುಭವಿಗಳಿಗೆ ಕಡ್ಡಾಯವಾಗಿ ಹಣಪಾವತಿಯಾಗದಿದ್ದರೆ ಪಿಡಿಎಸ್ ಗೆ ತಡೆಹಿಡಿದರು ಪುನಃ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತಮುಖಂಡ ಹೋರಾಟಗಾರರು. ಆಕನೂರು ನಿಂಗಪ್ಪ,ಮಾರುತಿ, ಎಚ್ಚರಿಸಿದರು.

ಸಂದರ್ಭದಲ್ಲಿ ಎಪಿಎಂಸಿ ಅಧಿಕಾರಿ ಮನು,ಆಹಾರ ಇಲಾಖೆಯ ಶಿವಪ್ರಕಾಶ್,ರೈತರಾದ ಅನಿತಾ,ರೇವಣ್ಣ,ಸ್ವಾಮಿ,ತಿಪ್ಪೇಸ್ವಾಮಿ,ಸಿದ್ದಪ್ಪ ಸೇರಿದಂತೆ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!