Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜನವರಿ 27

ಜೀವನದಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ :ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು

ಜಗಳೂರು ಸುದ್ದಿ:ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದು ಶಾಸಕರು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಶಾರದಾ ಪೂಜಾ ಹಾಗೂ ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯಗದಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಿಕೊಂಡು ಉತ್ತಮ ಅಭ್ಯಾಸನಿರತರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು.ಪೋಷಕರು ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೊತ್ಸಾಹಿಸಬೇಕು.ನಾನು ಬಡಕುಟುಂಬದಲ್ಲಿ ಜನಿಸಿ ಬಡತನ ಅನುಭವಿಸುತ್ತಾ ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣಕೊಡಿಸುವ ಕನಸ್ಸು ಸಾಕಾರಗೊಂಡಿದ್ದರ ಫಲವಾಗಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿರುವೆ.1977 ನೇ ಸಾಲಿನಲ್ಲಿ ಇದೇ ಕಾಲೇಜಿನಲ್ಲಿ ಅಭ್ಯಾಸಮಾಡಿದ್ದೇನೆ ಎಂದು ಸ್ಮರಿಸಿದರು.

ವಸತಿನಿಲಯ,ಪ್ರೊತ್ಸಾಹಧನ,ಶಿಷ್ಯವೇತನ,ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡೆದುಕೊಂಡು.ಮೊಬೈಲ್ ಗೀಳು ಕಡಿಮೆಮಾಡಿಕೊಂಡು ಉತ್ತಮ ಅಭ್ಯಾಸದಿಂದ ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ದೇಶಕ್ಕೆ ಆಸ್ತಿಯಾಗಬೇಕು ಎಂದು ಸಲಹೆ ನೀಡಿದರು

.

ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು.

ಸಂದರ್ಭದಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,ಗೌಸ್ ಪೀರ್, ಷಂಷುದ್ದೀನ್,ಬಿಆರ್ ಸಿ ಡಿಡಿ ಹಾಲಪ್ಪ, ಪ್ರಾಂಶುಪಾಲ ಜಗದೀಶ್,
ಶಿವರಾಜ್ ಜಿ.ಮಹಮ್ಮದ್ ಸಲೀಂ‌,ಮಲ್ಲಿಕಾರ್ಜುನ ಸ್ವಾಮಿ,ಮೈಲಾರಿ ರಾವ್,ನಾಗರಾಜ್ ಕೆ.ಎಚ್.ಟಿ.ಹೊನ್ನೂರು ಭಾಷಾ,ಮಂಜುನಾಥ್ ರೆಡ್ಡಿ,ಶಿವಕುಮಾರ್,ಸ್ವಪ್ನ,ಸೇರಿದಂತೆ ಇದ್ದರು.

Leave a Reply

Your email address will not be published. Required fields are marked *

You missed

error: Content is protected !!