ಜಗಳೂರಿನಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

ಜಗಳೂರು ಸುದ್ದಿ: ರೈತರು ಕಡಲೆ ಖರೀದಿ ಕೇಂದ್ರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಸಹಕಾರ ಮರಾಟ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಾಲ ಶೇಖರ್ ತಿಳಿಸಿದರು. .

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕಡಲೆ‌ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ನಂತರ ಮಾತನಾಡಿದರು.

ಕಡಲೆ ಬೆಳೆಗೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ  ₹4000 ಬೆಲೆಯಿದ್ದು.ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ ₹5335 ಬೆಂಬಲ ಬೆಲೆಗೆ ಪ್ರತಿ ರೈತರಿಂದ ಎಕರೆಗೆ 4 ಕ್ವಿಂಟಾಲ್ ನಂತೆ 15 ಕ್ವಿಂಟಾಲ್ ವರೆಗೆ  ಖರೀದಿಸಲಾಗುತ್ತದೆ.ತಾಲೂಕಿನ 4000 ಹೆಕ್ಟರ್ ಪ್ರದೇಶದಲ್ಲಿ ಕಡಲೆ ಬೆಳೆದಿದ್ದಾರೆ ಎಂದು ಹೇಳಿದರು.

ರೈತರು ಆಧಾರ್ ಕಾರ್ಡ್,ಪಾಸ್ ಬುಕ್,ಪಹಣಿ ದಾಖಲೆ ರಿಜಿಸ್ಟ್ರೇಷನ್ ಮಾಡಿಸಿ ನಂತರ ಮಾರಾಟ ಮಾಡಬೇಕು.ಅಮಾಲರಿಗೆ ಸರಕಾರದಿಂದ ಹಣ ಭರಿಸಲಾಗುವುದು.ಸ್ಯಾಂಪಲ್ ರೂಪದಲ್ಲಿ ಕಡಲೆ ಸಂಗ್ರಹಣೆ ಮಾಡುವಂತಿಲ್ಲ ಅಂತಹ ಪ್ರಕರಣ ಕಂಡುಬಂದಲ್ಲಿ ನಿರ್ದಾಕ್ಷೀಣ್ಯ ವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂರಕ್ಷಣಾ ಎಫ್‌ಪಿಓ ಅಧ್ಯಕ್ಷ ರಮೇಶ್ ಮಾತನಾಡಿ,ಕಡಲೆ ಬೆಳೆಗಾರರಿಗೆ ಸಂರಕ್ಷಣಾ ರೈತ ಉತ್ಪಾದಕ ಕೇಂದ್ರ ಸೇತುವೆಯಾಗಿದೆ.ಸರಕಾರದ ಕಡಲೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬೇಕು ಎಂದು ಹೇಳಿದರು.

ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಜಿಲ್ಲಾ ಮ್ಯಾನೇಜರ್ ಶ್ರೀಕಾಂತ್,ಸಂರಕ್ಷಣಾ ಸಿಇಓ ಮನೋಜ್,ಬಳಿಗಾರ್ ಮಂಜಣ್ಣ,ನಾಗಭೂಷಣ್,ಮುಸ್ಟೂರು ಎಫ್ ಪಿಓ ಅಧ್ಯಕ್ಷ ಮಂಜುನಾಥ್,ನಿರ್ದೇಶಕರಾದ ಶಿವಶಂಕರ್,ಪುಟ್ಟಣ್ಣ ಗೌಡ,ಶಂಕರ್,ಪ್ರದೀಪ್

ತಿಪ್ಪೇಸ್ವಾಮಿ ಗೌಡ,ಸೇರಿದಂತೆ ಭಾಗವಹಿಸಿದ್ದರು. 

Leave a Reply

Your email address will not be published. Required fields are marked *

You missed

error: Content is protected !!