Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 29
ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ:ಶಾಸಕ.ಬಿ.ದೇವೇಂದ್ರಪ್ಪ
ಜಗಳೂರು ಸುದ್ದಿ:ಕೆರೆ ಸಂಜೀವಿನಿಯೊಜನೆಯಡಿ ಕರೆ ಅಭಿವೃದ್ದಿ,ಮದ್ಯವರ್ಜನಶಿಬಿರ,ಆರ್ಥಿಕ ಸಾಲಸೌಲಭ್ಯ ಸೇರಿದಂತೆ ಧರ್ಮಸ್ಥಳ ಸಂಘದ ಹಲವು ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಿಂದ ಆಯೋಜಿಸಿದ್ದ ಕೆರೆ ಸಂಜೀವಿನಿ ಯೋಜನೆಯಡಿ ಕೆರೆಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಗ್ರಾಮ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಆರಾಧ್ಯ ದೈವಗಳನ್ನೊಳಗೊಂಡ ಐತಿಹಾಸಿಕ ಧಾರ್ಮಿಕ ಪರಂಪರೆ ಹೊಂದಿದೆ.ಹಿಂದುಳಿದ,ತಳ ಸಮುದಾಯಗಳು ಸಾಮರಸ್ಯತೆ ಜೀವನ ಸಾಗಿಸುತ್ತಿರುವ ಗ್ರಾಮದಲ್ಲಿ ಜನಿಸಿದ ನನ್ನನ್ನು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶಾಸಕನನ್ನಾಗಿ ಕೊಡುಗೆಯಾಗಿಸಿರುವುದು.ನನ್ನ ಪೂರ್ವಜರ ಪುಣ್ಯ ಎಂದು ಶಾಸಕರು ಸ್ಮರಿಸಿದರು.
ಕ್ಷೇತ್ರದಲ್ಲಿ 57 ಕೆರೆ ತುಂಬಿಸುವ ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.ನಮ್ಮದೇ ಆಡಳಿತ ಸರ್ಕಾರದ ಕಾಳಜಿಯಿಂದ ಮುಂಗಾರು ವೇಳೆಗೆ ಕೆರೆಗಳು ಭರ್ತಿಯಾಗಲಿವೆ.ಬರದನಾಡು ಹಸಿರು ನಾಡಾಗಲಿಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ಜಿಲ್ಲಾ ಯೋಜನಾಧಿಕಾರಿ ಜನಾರ್ಧನ್,ಯೋಜನಾಧಿಕಾರಿ ಗಣೇಶ್,ಗ್ರಾ.ಪಂ.ಸದಸ್ಯರಾದ ಓ.ಮಂಜಣ್ಣ,ಕೆಂಗಮ್ಮ, ಮುಖಂಡರಾದ ನಾಗರಾಜ ಟಿ ,ರಂಗಪ್ಪ, ಕಾಟಪ್ಪ, ಕರಿಯಪ್ಪ ,ಎಂ ಬಿ ಹನುಮಂತಪ್ಪ ,ಸೇರಿದಂತೆ ಇದ್ದರು.