Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಜನವರಿ 31
ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪಗೆ ವಿಶ್ವ ಮಟ್ಟದಲ್ಲಿ ಗೌರವ.
ವಿಶ್ವವಾಣಿ ಅಂತರಾಷ್ಟ್ರೀಯ ಗ್ಲೋಬಲ್ ಅಚೀವರ್ಸ್ ಅವಾರ್ಡ್|| ವಿಯೆಟ್ನಾಂನ ಹನಾಯ್ ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಹ್ವಾನ.
ಜಗಳೂರು:ಹಿರಿಯ ಪತ್ರಿಕೋದ್ಯಮಿ ವಿಶ್ವೇಶ್ವರ ಭಟ್ ಅವರ ವಿಶ್ವವಾಣಿ ಪತ್ರಿಕೆ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ವಿಶ್ವದ ನಾನ ಭಾಗಗಳ ಸಾಧಕರನ್ನು ಗುರುತಿಸಿ ಅಂತರಾಷ್ಟ್ರೀಯ ಗ್ಲೊಬಲ್ ಅಚೀವರ್ಸ್ ಅವಾರ್ಡ್ ಸ್ವಹೃದಯಿ ರಾಜಕಾರಣಿ ಸಮಾಜ ಸೇವಕ ಮಾಜಿ ಶಾಸಕ ಎಸ್ ವಿ ರಾಮಚಂದ್ರಪ್ಪಗೆ ಲಭಿಸಿದೆ.
ಫೆ ೨ ರಿಂದ ೭ ರವರೆಗೆ ವಿಯೆಟ್ನಾಂನ ಹನಾಯ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಕಳೆದ ವರ್ಷ ಕಾಂಬೋಡಿಯ ದೇಶದ ಸೀಮ್ ರೀಪ್ ನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವದ ೧೧ ಸಾಧಕರನ್ನು ಗೌರವಿಸಲಾಗಿತ್ತು ಜಗದ್ಗುರು ಶ್ರಿ ಶ್ರೀ ನಿರ್ಮಾಲನಂದ ನಾಥರು ಪ್ರಶಸ್ತಿ ಪ್ರಧಾನ ಮಾಡಿದ್ದರು. ಈ ವರ್ಷ ವಿಯೆಟ್ನಾಂ ದೇಶದ ಹನಾಯ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಆ ದೇಶದ ಕಾನ್ಸುಲೇಟ್ ಸಹಕಾರದೊಂದಿಗೆ ಜರುಗುತ್ತಿದೆ.
ಜಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಹಟ್ಟಿ ಚಿನ್ನದ ಗಣಿಯ ಮಾಜಿ ಅಧ್ಯಕ್ಷರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್ ವಿ ರಾಮಚಂದ್ರಪ್ಪಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಕಾರ್ಯಕ್ರಮಕ್ಕೆ ವಿಶ್ವವಾಣಿ ಬಳಗ ಕೋರಿದೆ.