Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಫೆಬ್ರವರಿ 2
>
ಜಗಳೂರು :
ದುಡಿಯುವ ಕೈಗೆ ಆಸರೆಯಾದ ಮನರೇಗಾಯೋಜನೆ : ಗ್ರಾ.ಪಂ.ಅಧ್ಯಕ್ಷ ಕೆ.ತಿಪ್ಪೇಸ್ವಾಮಿ.
ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಬದುಕಿಗೆ ನರೇಗಾ ಯೋಜನೆ ಆಸರೆಯಾಗಿದ್ದು ನಿತ್ಯದ ಜೀವನಕ್ಕೆ ಸಹಕಾರಿಯಾಗಲಿದೆ ಅಧಿಕಾರಿಗಳು ಸಮರ್ಪಕ ಉದ್ಯೋಗ ನೀಡಿ ನಿಗದಿತ ಅವದಿಯಲ್ಲಿಯೇ ಕೂಲಿ ಹಣ ಪಾವತಿಮಾಡಬೇಕು ಎಂದು ದೊಣ್ಣೆಹಳ್ಳಿ ಗ್ರಾ.ಪಂ.ಅಧ್ಯಕ್ಷ ಮರೇನಹಳ್ಳಿ ತಿಪ್ಪೇಸ್ವಾಮಿ ಹೇಳಿದರು
ತಾಲೂಕಿನ ದೊಣ್ಣೆಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಿದ್ಧಮ್ಮನಹಳ್ಳಿ ಗ್ರಾಮದ ಕೆರೆಯಲ್ಲಿ ಮನರೇಗಾ ಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗಳೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿಗಳಲ್ಲಿ ದೊಣ್ಣೆಹಳ್ಳಿ ಗ್ರಾಮ ಪಂಚಾಯಿತಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಯಾಗಿದ್ದು ಮನರೇಗಾ ಯೋಜನೆಯ 2700 ಖಾತೆದಾರರು ಇದ್ದು ಇದರಲ್ಲಿ ಸಕ್ರೀಯವಾಗಿ ಇರುವ ಜಬಾ ಕಾರ್ಡ್‌ಗಳ ಸಂಖ್ಯೆ 2300 ಜನ ನರೇಗಾ ಖಾತೆಯನ್ನು ಹೊಂದಿದ್ದು ಪ್ರತಿಯೊಬ್ಬರು ಕೂಡ ಈ ಯೋಜನೆಯ ಸದುಪಯೋಗ ವನ್ನು ಪಡೆದು ಕೊಳ್ಳಬೇಕೆಂದರು.
ಸಿದ್ಧಮ್ಮನಹಳ್ಳಿ ಕೆರೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ ಕೀರ್ತಿ ಕೂಲಿಕಾರರಿಗೆ ಸಲ್ಲುತ್ತದೆ ಇದರಿಂದ ಬರೀ ಕೂಲಿ ಸಿಗುವುದಲ್ಲದೆ ಭವಿಷ್ಯದಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗಿ ಅಂತರ್ ಜಲ ಮಟ್ಟ ಹೆಚ್ಚಿಲಿದೆ ಎಂದು ತಿಳಿಸಿದರು
ಮನರೇಗಾ ಯೋಜನೆಯ ತಾಲ್ಲೂಕು ಅಧಿಕಾರಿ ಚಂದ್ರಶೇಖರ್ ಮಾತನಾಡಿ ಯಾವ ಖಾತೆದಾರರು 100 ದಿನಗಳನ್ನು ಪೂರೈಸುತ್ತೀರಾ ಅಂತಹವರಿಗೆ ಹೆಚ್ಚಿನದಾಗಿ 50 ದಿನಗಳ ಮಾನವ ದಿನಗಳನ್ನು ನೀಡುವಂತೆ ಸರಕಾರ ಈಗಾಗಲೇ ನಿರ್ದೇಶನ ನೀಡಿದೆ
ಬರ ಪೀಡಿತ ತಾಲ್ಲೂಕು ಮತ್ತು ಹೆಚ್ಚಿನ ಬಿಸಿಲಿನ ತಾಪ ವಾಗಿರುವುದರಿಂದ ಸರಕಾರವೇ ಕಾಮಗಾರಿಯಲ್ಲಿ ಶೇ 15% ರಿಯಾತಿಯಲ್ಲಿ ಮನರೇಗಾ ಕೂಲಿಕಾರರಿಗೆ ರಿಯಾಯಿತಿ ನೀಡಿ ದುಡಿಯುವ ಜನರಿಗೆ ಪ್ರೋತ್ಸಾಹ ನೀಡಿರುವುದು ಸಂತಸದ ವಿಷಯವಾಗಿದೆ
ನರೇಗಾ ಯೋಜನೆಗೆ ಬರುವ ಕೂಲಿಕಾರಾರು ಶ್ರಮದಿಂದ ದುಡಿಯಬೇಕು ಕಾಯಕದಲ್ಲಿ ಕಳ್ಳಾಟ ಆಡುವುದು ಸರಿಯಲ್ಲ ಸರ್ಕಾರದ ನೀತಿ ನಿಯಮದಂತೆ ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲದಂತಾಗಿದೆ ನಿಯಮನುಸಾರ ಕಾಮಗಾರಿ ನಿರ್ವಹಿಸಬೇಕು ಎಂದರು.
ಪಿಡಿಓ ಜಯ್ಯಪ್ಪ ಮಾತನಾಡಿ ನರೇಗಾ ಯೋಜನೆಗೆ ಬರುವ ಜನರಿಗೆ ಶುದ್ದ ನೀರು ಮತ್ತು ಪ್ರಥಮ ಚಿಕಿತ್ಸೆಯ ಕಿಟ್ಟುಗಳನ್ನು ಸಹ ನಮ್ಮಮೇಟಿಗಳು ದಿನಾಲು ಜೊತೆಯಲ್ಲಿ ತರುವುದರ ಜೊತೆಗೆ ಮುಂಜಾಗ್ರತಾ ಕ್ರಮವಹಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಮುಂದಿನ ದಿನಗಳಲ್ಲಿ ನಾವೇ ಪಂಚಾಯಿತಿಯಿಂದ ಪ್ರತಿ ಕೂಲಿಕಾರರ ಗುಂಪಿಗೆ ಶುದ್ಧನೀರಿಗಾಗಿ ಕ್ಯಾನ್ ಗಳನ್ನು ಕೊಡಿಸಲಾಗುವುದು ಗ್ರಾಮ ಪಂಚಾಯತಿ ವತಿಯಿಂದ ನಿರ್ವಹಿಸಬಹುದಾದ ಎಲ್ಲಾ ಕಾಮಗಾರಿಗಳನ್ನ ಮುಕ್ತವಾಗಿ ನಿರ್ವಹಿಸಲು ನೇರವಾಗಿ ಮಾಹಿತಿ ತಿಳಿಸುತ್ತೇವೆ ಎಂದು ಹೇಳಿದರು
ಮಲ್ಲಾಪುರ ಪಿ ಹೆಚ್ ಸಿ ಯ ಆರೋಗ್ಯ ಸಲಹೆಗಾರರಾದ ಉಮೇಶ್ ಮಾತನಾಡಿ ಇಂದಿನ ಜೀವನದಲ್ಲಿ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಬೇಕು ಪ್ರತಿ 15 ದಿನಗಳಿಗೊಮ್ಮೆ ಯಾದರೂ ಬಿಪಿ,ಶುಗರ್ ನ್ನು ಪರೀಕ್ಷಿಸುವಂತಹ ರೂಢಿ ಮಾಡಿಸಿಕೊಳ್ಳುವಂತಾಗಬೇಕು
ಮಹಿಳೆಯರು ಇತ್ತೀಚಿನ ದಿನಗಳಲ್ಲಿ ವಿವಿಧ ಬಗೆಯ ದುಚ್ಚಟಗಳಿಗೆ ಕೈ ಹಾಕುವಂತಹ ಕೆಲಸ ಮಾಡುತ್ತಿದ್ದಾರೆ ಅಂತಹ ಚಟಗಳಿಗೆ ದಾಸರಾಗದೆ ಉತ್ತಮ ಗುಣಮಟ್ಟದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ,ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಸಿಬ್ಬಂದ್ದಿ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಐಇಸಿ ಸಿದ್ದೀಕ್, ಟೆಕ್ಲೀಕಲ್ ಇಂಜಿನಿಯರ್, ಗ್ರಾಮ ಪಂಚಾಯಿತಿ ನರೇಗಾ ಇಂಜಿಯರ್ ಕಾಂತರಾಜ್, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ನೀರುಗಂಟಿಗಳು ಸೇರಿದಂತೆ ಕೂಲಿಕಾರರು ಈ ಮನರೇಗಾ ಹಬ್ಬದಲ್ಲಿ ಭಾಗವಹಿಸಿದ್ದರು.