Editor m rajappa vyasagondanahalli

 

ತಾಲ್ಲೂಕು ತಹಶೀಲ್ದಾರ್ ಹಾಗೂ ಜಿಪಂ ಸಿಇಓ ಆದೇಶವನ್ನೆ ತಿರಸ್ಕರಿಸಿ ನಾನೇ ಸುಪ್ರೀಂ ಎಂದು ಬೀಗುವ ಕಡು ಭ್ರಷ್ಟ  ಪಿಡಿಓ ಶಶಿಧರಪಾಟೀಲ್ ನ ಅವಾಂತರ

 Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಜನವರಿ 7

ಮೇಲಾಧಿಕಾರಿಗಳ  ಆದೇಶ ಉಲ್ಲಂಘನೆ ಮತ್ತು  ಭ್ರಷ್ಟಾಚಾರದ ಸುದ್ದಿ 

ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ಸರ್ವೆ ನಂ 65.64 ರಲ್ಲಿ ಗ್ರಾಮ ಠಾಣಾ ಜಾಗದಿಂದ ನಮ್ಮ ರಸ್ತೆ ನಮ್ಮ ಹೊಲ ದಾರಿ ಬಿಡಲು ಸರ್ಕಾರ ಇತ್ತೀಚೆಗೆ ಆದೇಶ ಮಾಡಿದೆ ಈ ಒಂದು ಆದೇಶ ಬಡವರ್ಗದ ಜನರು ತನ್ನ ಜಮೀನುಗಳಿಗೆ ರೂಡಿಗತ  ದಾರಿ ನಕಾಶೆ ದಾರಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸರ್ಕಾರ ಮಹತ್ವ ನಿರ್ಧಾರದ ಮೂಲಕ ಆದೇಶಿಸಿದೆ ಇದರನ್ವಯ ತಾಲ್ಲೂಕಿನ ಗುತ್ತಿದುರ್ಗ ಗ್ರಾಮ ಪಂಚಾಯತಿ ಗ್ರಾಮ ಠಾಣಾ ಜಾಗದಿಂದ ಸುಮಾರು 20 ಜನ  ಸಣ್ಣ ರೈತರು ತಮ್ಮ ಜಮೀನುಗಳಿಗೆ ನಿತ್ಯ ಓಡಾಡುವ ದಾರಿಯನ್ನ ನಕಾಶೆ ದಾರಿ ಬಿಡಿಸಿಕೋಡಿ ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಮಾನ್ಯ ಜಿಪಂ ಸಿಇಓ .ತಾಲೂಕು ತಹಶೀಲ್ದಾರ್ ರವರಿಗೆ ಗುತ್ತಿದುರ್ಗ ಗ್ರಾಮದ ಶಾಂತಪ್ಪ ಹನುಮಪ್ಪ ಇತರೆ ರೈತರು   ಮನವಿ ಸಲ್ಲಿಸಿದ್ದರ ಫಲವಾಗಿ ಮಾನ್ಯ ಜಿಲ್ಲಾಮಟ್ಟದ ಅಧಿಕಾರಿಗಳ ಆದೇಶದ ಮೇರೆಗೆ ತಹಶೀಲ್ದಾರ್ ಭೂಮಾಪನ ಇಲಾಖೆಯಿಂದ ನಕಾಶೆ ದಾರಿ ಗುರುತಿಸಿ ದಾರಿ ಮಾಡಿಕೋಡಲು ಈಗಾಗಲೇ ಸ್ಥಳವಕಾಶ ಗುರುತಿಸಿ ಅಳತೆ ಮಾಪನ ಮಾಡಿ ಶಿಸ್ತು ಕಲ್ಲುಗಳನ್ನು ಹಾಕಿದ್ದಾರೆ.

 ಆದರೆ ಇಲ್ಲಿನ ಸಂಬಂಧಿಸಿದ ಸ್ಥಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಧರ್ ಪಾಟೀಲ್ ನಿಗೆ ಮೇಲಾಧಿಕಾರಿಗಳು ಗ್ರಾಮ ಠಾಣಾ ಜಾಗದಲ್ಲಿ ಹಾದುಹೋಗುವ ನಕಾಶೆ ದಾರಿಗೆ ಗ್ರಾಮದ ವ್ಯಕ್ತಿಯೊಬ್ಬನು   ಅಡ್ಡಲಾಗಿ ಕಟ್ಟಿರುವ ದನದ ಕೋಟ್ಟಿಗೆ ಹಾಗೂ ಆ ಜಾಗದಲ್ಲಿ ಬೆಳೆದಿರುವ ಮುಳ್ಳು ಕಳ್ಳೆ ಗೀಡ ಗಂಟೆಗಳುನ್ನು ತೆರವುಗೋಳಿಸಿ ಸ್ವಚತೆ ಮಾಡಿಕೋಡಿ ಎಂದು ಸುಮಾರು ಎರಡು ಮೂರು ತಿಂಗಳಿಂದ ಜಿಪಂ ಸಿಇಓ .ಹಾಗೂ ತಾಪಂ ಇಓ  ಗೆ ಅರ್ಜಿ ಸಲ್ಲಿಸಿರುತ್ತಾರೆ.  ಮೇಲಾಧಿಕಾರಿಗಳು ಸಂಬಂಧಿಸಿದ ಜಾಗವನ್ನ ಸ್ವಚಗೋಳಿಸಿ ಕೋಡಿ ಎಂದು ಸೂಚನೆ ನೀಡಿ ಆದೇಶ ಮಾಡಿದ್ದರು ಸಹ  ಕಿಮತ್ತು ನೀಡದ ಗ್ರಾಪಂ ಪಿಡಿಓ ಅಧಿಕಾರಿ ಶಶಿಧರ್ ಪಾಟೀಲ್ ಇದುವರೆಗೂ ಬಡವರ ಪಾಲಿಗೆ ಸಹಾಯಸ್ತ ನೀಡಬೇಕಾದ ಪಿಡಿಓ ಗ್ರಾಮದ ಬಡ ಜನರ ಪಾಲಿಗೆ ಮುಳ್ಳಗಿದ್ದಾನೆ.ಅಕ್ಕಿನ ಸ್ಥಳವನ್ನ ಸ್ವಚತೆ ಮಾಡಿಕೊಡದೇ ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿ  ನಾನೇ ಸುಪ್ರೀಂ ಎಂದು ಬೀಗುವ ದುರಂಕಾರಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವುದು ನಿಜಕ್ಕೂ ಮೇಲ್ಮಟ್ಟದ ಅಧಿಕಾರಿಗಳ ಆದೇಶಗಳಿಗೆ  ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಕನಿಷ್ಠ ಗೌರವ ನೀಡದ ಅಧಿಕಾರಿ ನಡೆ ನಿಜಕ್ಕೂ ಕೂಡ ಸಂವಿಧಾನದ ಆಡಳಿತದ ವಿರೋಧಿತನದ ಪರಮಾವಧಿಯಾಗಿದೆ ಎಂದರೆ ತಪ್ಪಾಗಲಾರದು ‌.

ಪಿಡಿಓ ಪಾಟೀಲ್ ಈತನು ಒಟ್ಟು  ಮೂರು ನಾಲ್ಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಿ ಇದೀಗ ಪ್ರಸ್ತುತದಲ್ಲಿ ಗುತ್ತಿದುರ್ಗ ಹಾಗೂ ಪಲ್ಲಾಗಟ್ಟೆ ಗ್ರಾಪಂ ಗಳಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಪಿಡಿಓ ಇವನೊಬ್ಬ  ದುರಂಕಾರಿ .ಕಡು ಭ್ರಷ್ಟಾಚಾರಿ .ಈ ಹಿಂದೆ ಕರ್ತವ್ಯದಲ್ಲಿದ್ದ ಪಲ್ಲಾಗಟ್ಟೆ ಬಸವನಕೋಟೆ. ಪಂಚಾಯಿತಿಗಳಲ್ಲಿ ವಿವಿಧ ಯೋಜನೆಗಳ ಅನುದಾನವನ್ನ ದುರುಪಯೋಗಪಡಿಸಿಕೊಂಡು ನುಂಗಿ  ನೀರು ಕುಡಿದು  ಭ್ರಷ್ಟಾಚಾರ ಹೊತ್ತು ಸುಮಾರು  ಎರಡು ಬಾರಿ ಅಮಾನುತ್ತು ಆಗಿರುವ  ಪಿಡಿಓ ಶಶಿಧರ್ ಪಾಟೀಲ್ ನಿಗೆ ಪುನ ತಾಪಂ ಇಓ ಕೆ ಟಿ .ಕರಿಬಸಪ್ಪ ರವರು ಪಲ್ಲಾಗಟ್ಟೆ ಪಂಚಾಯಿತಿಗೆ ನಿಯೋಜನೆ ಮಾಡಿ ಗುತ್ತಿದುರ್ಗ ಇವೆರಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ನಿಯೋಜನೆ ಮಾಡಿರುವುದು ಸರ್ಕಾರದ ನೀಯಮ ಉಲ್ಲಂಘನೆಯಾಗಿದೆ. ಇಂತ ಅನ್ಯಾಗಳ ಬಗ್ಗೆ ಪ್ರಶ್ನೆಸಿದರೆ ತಾಪಂ ಇಓ ಅಧಿಕಾರಿ ಸಬೂಬು ಹೇಳಿ ನುಣುಚಿಕೊಳ್ಳುತ್ತಿರುವ ಹಿಂದಿರುವ ರಹಸ್ಯವೇನು? ಪಿಡಿಓ ಗಳು ಮಾಡುವ ಭ್ರಷ್ಟಾಚಾರದಲ್ಲಿ ತಮಗೆ ಪಾಲು ಇರಬಹುದೇ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!