Editor m rajappa vyasagondanahalli
By shukradeshenews Kannada | online news portal |Kannada news online 8
By shukradeshenews | published on ಜನವರಿ ಜೆ ಎಲ್ ಆರ್ ನ್ಯೂಸ್.
ಈಗಿನ ವಿದ್ಯಾರ್ಥಿಗಳೆ ಭಾರತ ದೇಶ ಭವಿಷ್ಯದ ಆಸ್ತಿ: ಕ್ಷೇತ್ರ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಇಓ ಹಾಲಮೂರ್ತಿ ಅಭಿಮತ.
ಜಗಳೂರು ಸುದ್ದಿ:ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೇಶಕ್ಕೆ ಆಸ್ತಿಯಾಗಿದ್ದು.ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಕೊಡಿಸಿ ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಬಿಇಓ ಹಾಲಮೂರ್ತಿ ಕಿವಿಮಾತು ಹೇಳಿದರು.
ತಾಲೂಕಿನ ವ್ಯಾಸಗೊಂಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ತಾಲೂಕಿನ ಇತರೆ ಕನ್ನಡ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.
ಇದರಿಂದ ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ.ಶಿಕ್ಷಕರು ಮಕ್ಕಳ ಉತ್ತಮ ಕಲಿಕೆಗೆ ಪರಿಶ್ರಮ ವಹಿಸಬೇಕು.ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಸರ್ವರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ದಾವಣಗೆರೆ ಡಯಟ್ ಉಪನ್ಯಾಸಕ ಗೋವಿಂದ ರಾಜ್ ಶೆಟ್ಟಿ ಮಾತನಾಡಿ,’ಮಕ್ಕಳ ಪ್ರತಿಭೆ ಪ್ರೊತ್ಸಾಹಿಸುವ ಜೊತೆಗೆ ಶಿಕ್ಷಕರ ಸೃಜನಶೀಲ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ.ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಅವಶ್ಯಕ,ಶಿಕ್ಷಣ ಉದ್ಯೋಗಕ್ಕೆ ಸೀಮಿತ ಎಂಬ ಭಾವನೆ ಬದಲಾಗಿ,ಜೀವನಕ್ಕೆ ಅನ್ವಯ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿ ಆರ್ ಸಿ. ಡಿ ಡಿ ಹಾಲಪ್ಪ ಮಾತನಾಡಿ,ಶಿಕ್ಷಕರ ಕರ್ತವ್ಯ ನಿಷ್ಠೆ,ಪರಿಶ್ರಮ,ಸೇವಾ ಮನೊಭಾವದಿಂದ ಸರ್ಕಾರಿ ಶಾಲೆಯಲ್ಲಿ ಭೌತಿಕ ಹಾಗೂ ಶೈಕ್ಷಣಿಕ ಪರಿಸರ ಸುಂದರವಾಗಿ ನಿರ್ಮಾಣಗೊಳ್ಳಲು ಕಾರಣೀಭೂತರಾಗಿರುವ ಕಳೆದ ವರ್ಷದಲ್ಲಿ ಜಿಲ್ಲಾ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಅವರನ್ನು ಗುರುತಿಸಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಶುಕ್ರದೆಸೆ ಪತ್ರಿಕೆ ಸಂಪಾದಕ ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ,’ಗ್ರಾಮೀಣ ಭಾಗದಲ್ಲಿ ಕೇವಲ ನಾಡಹಬ್ಬ,ದೇವತೆಗಳ ಜಾತ್ರೆಗಳಲ್ಲದೆ ಶೈಕ್ಷಣಿಕ ಹಬ್ಬಗಳನ್ನು ಆಚರಿಸಬೇಕು.ವಿದ್ಯಾರ್ಥಿ ಜೀವನದಿಂದಲೇ ವೈಚಾರಿಕ ದೃಷ್ಠಿಕೋನ ಮೈಗೂಡಿಸಿಕೊಳ್ಳಬೇಕು.ದೇಶದ ಎಲ್ಲಾ ವರ್ಗದವರಿಗೂ ಮೀಸಲಾತಿ ಕಲ್ಪಿಸಿರುವ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು ಗ್ರಾಮಸ್ಥರ ಸಹಕಾರ ಹಾಗೂ ಲೋಕಸಭಾ ಚುನಾವಣೆ ಕಾಂಗ್ರೆಸ್ ಆಕಾಂಕ್ಷಿ ಜಿ ಬಿ ವಿನಯಕುಮರ್ ಕಾರ್ಯಕ್ರಮಕ್ಕೆ ನೆನಪಿನ ಕಾಣಿಕೆ ಕೊಡುಗೆ ನೀಡಿದ್ದಾರೆ ಇನ್ನು ಇತರೆ ಮುಖಂಡರ ಸಹಕಾರ ಪ್ರತ್ಯೇಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾರಿಗೂ ನಮ್ಮ ಹೃದಯಪೂರ್ವಕ ಕೃತಜ್ಞತೆಯನ್ನ ಶಾಲಾ ಎಸ್ ಡಿ ಎಂ ಸಿ ಅದ್ಯಕ್ಷ ಚೌಡೇಶಿ ಸ್ಮರಿಸಿಕೊಂಡರು.
ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ,ಇಸಿಓ ಬಸವರಾಜ್,ಸಿ ಆರ್ ಪಿ ಮಂಜಣ್ಣ,ಬಿಆರ್ ಪಿ ಈರಪ್ಪ,ಎಸ್ ಡಿಎಂಸಿ ಅಧ್ಯಕ್ಷ ಚೌಡೇಶ್,ಮುಖ್ಯಶಿಕ್ಷಕಿ ಶಶಿಕಲಾ,
ಮೂಟೇಗೌಡ್ರು,ಕೃಷ್ಣಪ್ಪ,ಶಶಿಕಿರಣ್ ಗ್ರಾ.ಪಂ ಸದಸ್ಯೆ ಶ್ಯಾಮಲಮ್ಮ,ಮುಖಂಡರಾದ ನಾಗರಾಜ್,.ದಳಪತಿ ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಆನಂದಪ್ಪ,ಶಕುಂತಲಾ,ಪ್ಯಾರಿಮಾ ಬೇಗಂ,
ಸಿಆರ್ ಪಿ ಗಳಾದ ವಿರೇಶ್,ಲೊಕೇಶ್,ರಾಜಶೇಖರ್, ನಾಗಲಿಂಗಸ್ವಾಮಿ,ರವಿಪ್ರಸಾದ್,ಶ್ರಿದೇವಿ,ಪೊಲೀಸ್ ಇಲಾಖೆ ಮಾರುತಿ,ಶಿಕ್ಷಕರಾದ ರವಿಕುಮಾರ್,ವಿಜಯಲಕ್ಷ್ಮಿ .ಗ್ರಾಮದ ಮುಖಂಡರಾದ ರಾಮಣ್ಣ. ಗ್ರಾಪಂ ಸದಸ್ಯ ಕೃಷ್ಣಪ್ಪ.ಮುಖಂಡರಾದ ಕಂಪಳೇಶ್..ಬಾಬಣ್ಣ. ರಾಜಶೇಖರ್,ಸುಧಾ,ಇಂದಿರಾ,ತಿಪ್ಪೇಸ್ವಾಮಿ,ಗಂಗಾಧರ್,.ಅತಿಥಿ ಶಿಕ್ಷಕಿ ನಾಗಮ್ಮ. ಪತ್ರಕರ್ತ ಮಾದಿಹಳ್ಳಿ ಮಂಜುನಾಥ್,ಸೇರಿದಂತೆ ಮುಂತಾದವರು ಹಾಜರಿದ್ದರು ಇದ್ದರು.