Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಪ್ರೇಬ್ರವರಿ 11

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ:ಫಾದರ್ ಸಿಲ್ವೆಸ್ಟರ್ ಫೆರೆರಾ

ಜಗಳೂರು ಸುದ್ದಿ:ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಫಾದರ್ ಸಿಲ್ವೆಸ್ಟರ್ ಫೆರೆರಾ ಕಿವಿಮಾತು ಹೇಳಿದರು.

ಪಟ್ಟಣದ ಪ್ರೇರಣಾ ಚರ್ಚ್ ಆವರಣದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆವತಿಯಿಂದ ಸಂಭ್ರಮ ಹಬ್ಬ ದಿನಾಚರಣೆ ಯಲ್ಲಿ ಅವರು ಮಾತನಾಡಿದರು.

ವೈವಿದ್ಯತೆಯಲ್ಲಿ ಏಕತೆ ಸಾರುವ ದೇಶದಲ್ಲಿ ಪವಿತ್ರವಾದ ಸಂವಿಧಾನವನ್ನು ಪಾಲಿಸೋಣ.ಸಂವಿಧಾನ ಎಲ್ಲಾ ವರ್ಗಕ್ಕೂ ಮೀಸಲಾತಿ ಮೂಲಭೂತ ಹಕ್ಕುಗಳನ್ನು ಒದಗಿಸಿದೆ.ಭವ್ಯ ಭಾರತದ ನಿರ್ಮಾಣದ ಸಂಕಲ್ಪ ವಿದ್ಯಾರ್ಥಿ ದಿಸೆಯಿಂದಲೇ ಮೈಗೂಡಿಸಿಕೊಳ್ಳಬೇಕು.ಶಾಲೆಗಳಲ್ಲಿ ಜ್ಞಾನಾರ್ಜನೆ,ಜೊತೆಗೆ ಸಮಾಜಕ್ಕೆ ಉತ್ತಮ ಪ್ರಜೆಗಳಾಗಲು,ಪೂರಕ ಪಠ್ಯಭೋದನೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಸ್ ಸಿ ಎಸ್ ಟಿ ಪತ್ರಿಕಾ ವರದಿಗಾರರ‌ ಕ್ಷೇಮಾಭಿವೃದ್ದಿ ಸಂಘದ ಗೌರವ ಅಧ್ಯಕ್ಷ ಸಿ. ಬಸವರಾಜ್ ಮಾತನಾಡಿ,ಪಟ್ಟಣದಲ್ಲಿ 6ವರ್ಷಗಳ ಹಿಂದೆ ಪ್ರಾರಂಭವಾಗಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯನ್ನು ಬೇರೆಡೆಗೆ ವರ್ಗಾಯಿಸಲು ಕುತಂತ್ರ ನಡೆದಿತ್ತು.ಆದರೆ ಅಲ್ಪಸಂಖ್ಯಾತ ಕೆಲ‌ಮುಖಂಡರುಗಳಿಂದ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿಯಿಂದ‌ ಉಳಿದು. ಸುಸಜ್ಜಿತ ಕಟ್ಟಡದಲ್ಲಿ ಗುಣಮಟ್ಟದ ಆಹಾರ,ಉತ್ತಮ ಶೈಕ್ಷಣಿಕ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿದ್ದು.ಬಡವಿದ್ಯಾರ್ಥಿಗಳಿಗೆ ವರದಾನವಾಗಿದೆ.ಖಾಸಗಿ ಶಾಲೆಯಲ್ಲಿ ದುಬಾರಿ ವೆಚ್ಚ ಭರಿಸಿ ಶಿಕ್ಷಣ ಕೊಡಿಸಲು ಸಾಧ್ಯವಾಗದೆ ಬಡವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು.ಈ ವರ್ಷದ ಶಿಕ್ಷಕರ ಪರಿಶ್ರಮದಿಂದ ಎಸ್ ಎಸ್ ಅಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿ ತಾಲೂಕಿಗೆ ಕೀರ್ತಿ ತರಬೇಕು.ಅಲ್ಲದೆ ವಸತಿ ಶಾಲೆಗಳತ್ತ ಪೋಷಕರ ಚಿತ್ತಕ್ಕೆ ಸಾಕ್ಷಿ ಯಾಗಬೇಕು ಎಂದು ಸಲಹೆ ನೀಡಿದರು.

ಸಂದರ್ಭದಲ್ಲಿ ಪ್ರಾಂಶುಪಾಲೆ ಅಸ್ಮಾ ಫರ್ವೀನ್ ಬಾನು,ವಾರ್ಡನ್ ತಿಪ್ಪೇಸ್ವಾಮಿ,ದಾವಣಗೆರೆ ಬಿಇಓ ಕಚೇರಿ ತಿಪ್ಪೇಸ್ವಾಮಿ,ಶಿಕ್ಷಕ ರಂಗಸ್ವಾಮಿ,ನಳಿನಾ,ಸೇರಿದಂತೆ ಪೋಷಕರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!