ಜಗಳೂರು ಸುದ್ದಿ
ನೂತನ ತಹಶೀಲ್ದಾರ್ ರಾಗಿ .ಚಂದ್ರಶೇಖರ್ ನಾಯ್ಕ್.ಅಧಿಕಾರ ಸ್ವೀಕಾರ.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಪ್ರೇಬ್ರವರಿ 16
ಜಗಳೂರು ತಾಲೂಕು ಕಛೇರಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್ ಸೈಯದ್ ಕಲೀಂ ಉಲಾ ವರ್ಗಾವಣೆ .
ನೂತನ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಅಧಿಕಾರ ಸ್ವೀಕಾರ ಈ ಹಿಂದೆ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡ ಸೈಯದ್ ಕಲೀಂ ಉಲಾರವರು ಜಗಳೂರು ಕ್ಷೇತ್ರದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಜನ ಮೆಚ್ಚುಗೆ ತಹಶೀಲ್ದಾರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ಸರ್ಕಾರಿ ನೌಕರರಿಗೆ ವರ್ಗಾವಣೆ ಎಂಬುದು ಸರ್ವೇಸಾಮಾನ್ಯ ನಾವು ಇರುವಷ್ಟು ದಿನಗಳಲ್ಲಿ ಕ್ಷೇತ್ರದ ಶಾಸಕ ಬಿ .ದೇವೇಂದ್ರಪ್ಪ ಹಾಗೂ ಕ್ಷೇತ್ರದ ಜನರು ಉತ್ತಮ ಆಡಳಿತ ನಡೆಸಲು ಸಹಕಾರ ನೀಡಿರುತ್ತಾರೆ ಇದೀಗ ನೂತನ ತಹಶೀಲ್ದಾರ್ ರವರಿಗೂ ಕೂಡ ಸಹಕಾರ ನೀಡಲಿ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲಾರವರು ಸ್ಮರಿಸಿಕೊಂಡು
ನೂತನ ತಹಶೀಲ್ದಾರ್ ರವರಿಗೆ ಅಧಿಕಾರ ಅಸ್ತಂತರಿಸಿದರು.
ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ರವರು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿ ಲೋಕಸಭಾ ಚುನಾವಣೆ ನಿಮಿತ್ತ ಸರ್ಕಾರಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಇಲ್ಲಿ ಈ ಹಿಂದೆ ಕರ್ತವ್ಯದಲ್ಲಿದ್ದ ತಹಶೀಲ್ದಾರ್ ಸೈಯದ್ ಕಲೀಂ ಉಲಾ ರವರುನ್ನು ಸಾಗರ ತಾಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶದ ಹಿನ್ನೆಲೆಯಲ್ಲಿ ಜಗಳೂರು ತಾಲ್ಲೂಕಿಗೆ ನೂತನವಾಗಿ ಚಂದ್ರಶೇಖರ್ ನಾಯ್ಕ್ ರವರು ಜಗಳೂರು ತಹಶೀಲ್ದಾರ್ ರಾಗಿ ತಹಶೀಲ್ದಾರ್ ಕಛೇರಿಯಲ್ಲಿ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡರು
ನೂತನ ತಹಶೀಲ್ದಾರ್ ಶುಕ್ರದೆಸೆನ್ಯೂಸ್ ನೊಂದಿಗೆ ಮಾತನಾಡಿದರು ನಾನು ರಾಜ್ಯದ ನಾನಾ ಜಿಲ್ಲೆಗಳಾದ ಚಿಕ್ಕಮಗಳೂರು. ಶಿವಮೊಗ್ಗ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ಜಗಳೂರು ತಹಶೀಲ್ದಾರ್ ರಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿದ್ದೆನೆ .ತಾಲ್ಲೂಕಿನಲ್ಲಿ ಉತ್ತಮ ಅಗತ್ಯವಾದ ಸೇವೆ ನೀಡುವ ಮೂಲಕ ಉತ್ತಮ ಆಡಳಿತ ನಡೆಸಲು ಬದ್ದವಾಗಿದ್ದು ಸಾರ್ವಜನಿಕರ ಸಹಕಾರ ಬಹುಮುಖ್ಯ ಎಂದರು