Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಪ್ರೇಬ್ರವರಿ 26

ಜಗಳೂರು ಪಟ್ಟಣದ ಗುರುಭವನದಲ್ಲಿ ಶುಕ್ರದೆಸೆನ್ಯೂಸ್ ಪತ್ರಿಕೆ ಹಾಗೂ ಯುಟುಬ್ ಚಾನಲ್ ಸಹಯೋಗದಲ್ಲಿ  ಜಿಲ್ಲಾ ಮಟ್ಟದ ಕರೋಕೆ  ಗಾಯನ ಸ್ವರ್ಧೆ ಏರ್ಪಡಿಸಲಾಗಿತ್ತು.

 ಕಾರ್ಯಕ್ರಮದಲ್ಲಿ ಶಾಸಕರಾದ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ರವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರದೆಸೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿ  ಕಲಾವಿದರಿಗೆ ಅಭಿನಂದಿಸಿ ನಂತರ ಕಾರ್ಯಕ್ರಮವನ್ನುದ್ದೆಶಿಸಿ ಮಾತನಾಡಿದರು 

ಸಂಗೀತ ಪ್ರತಿಯೊಬ್ಬ ಮನುಷ್ಯನ ಮನಸ್ಸಿಗೆ ಸಂತೋಷವನ್ನುಂಟು ಮಾಡಿ ದುಖದುಮ್ಮಾನಗಳುನ್ನು ಮರೆಸಿ ಕಲಾವಿದರಿಗೆ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ 

.ಶುಕ್ರದೆಸೆ ಪತ್ರಿಕೆ ಕೇವಲ ಸಮಾಜದಲ್ಲಿ ನಡೆಯುವಂತ ಸುದ್ದಿ ಸಮಾಚಾರಗಳುನ್ನು  ಬಿತ್ತರ ಮಾಡುವುದರ ಜೊತೆಗೆ  ಗಾಯಕರಿಗೆ ಇಂತ ವೇದಿಕೆ ಕಲ್ಪಿಸಿಕೊಟ್ಟಿರುವುದರಿಂದ ಉತ್ತಮ ಪ್ರತಿಭೆಗಳುನ್ನು ಗುರುತಿಸಲು ಸಹಕಾರಿಯಾಗಿದೆ .ಶುಕ್ರದೆಸೆನ್ಯೂಸ್ ಪತ್ರಿಕೆ ಸುದ್ದಿಸಂಸ್ಥೆ ಇಂತ ಕಾರ್ಯಕ್ರಮ ಆಯೋಜನೆಗೆ ಸಾಕ್ಷಿಯಾಗಿರುವುದು ಶ್ಲಾಘನೀಯ.

ನಾನು ಕೂಡ ನಾಟಕ .ಮತ್ತು ಕಲೆ ಸಾಂಸ್ಕೃತಿಕವಾಗಿ ಮೈಗೂಡಿಸಿಕೊಂಡು ಕ್ರೀಡಾ ಸಾಂಸ್ಕೃತಿಕ ಶೈಕ್ಷಣಿಕವಾಗಿ   ಕ್ಷೇತ್ರದಲ್ಲಿ ಆದ್ಯತೆ ನೀಡುವೆ ಎಂದರು.ಸ್ವರ್ಧೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಇಂತ ವಿನೂತನ ಸ್ವರ್ಧೆಯಲ್ಲಿ  ಭಾಗವಹಿಸಿ ಉತ್ಕೃಷ್ಟ ಗಾಯನ ಮಾಡಲು ಆವಕಾಶ ಸದುಪಯೋಗ ಪಡೆದುಕೊಳ್ಳಿ ಎಂದು ಶಾಸಕರು ಗ್ರಾಮೀಣ ಸೊಗಡಿನ ಹಾಡುನ್ನು  ಹಾಡಿ ಪ್ರಾತ ಜನಪದೀಯರ ಗಾಯಕರುನ್ನು ಸ್ಮರಿಸಿಕೊಂಡರು  .  ಶಾಸಕರು ಜನಪದರ ಹಾಡುನ್ನು ಹಾಡಿ ಪ್ರೇಕ್ಷಕರಿಗೆ ನಗೆ ಚಟಾಕಿ ಹಾಸ್ಯಭರಿತವಾಗಿ ಪ್ರೇರೆಪಿಸಿದರು.

ಹಿರಿಯ ಸಾಹಿತಿ ಎನ್. ಟಿ .ಎರ್ರಿಸ್ವಾಮಿ ಮಾತನಾಡಿ ಮೋಹನ ಮುರಳಿಯ ನಾದಕ್ಕೆ ಗೋವುಗಳೆಲ್ಲ ತಲೆದೂಗುವ ಶ್ರೀಕೃಷ್ಣನ ಕೊಳಲು ನಾದ ಅನೇಕ ಜನಪದರ ಸೋಬಾನೆ ಕೋಲಾಟ.ಭಜನೆ ಹಾಡುಗಳು ಅಂದಿನಿಂದಲೂ ಮನುಷ್ಯನ ಮನಶಾಂತಿಗೆ ಸಹಕಾರಿಯಾಗಿ ಬಹುತೇಕರಿಗೆ ಸಂಗೀತದಿಂದ ಕೆಲ ರೋಗಗಳು ನಿವಾರಣೆಯಾಗಿವೆ.ಪತ್ರಕರ್ತ ರಾಜಪ್ಪ ವ್ಯಾಸಗೊಂಡನಹಳ್ಳಿ ಮತ್ತು ಗಾಯಕ ನಾಗೇಶಿ ಇವರು ಕ್ರಿಯಾಶೀಲಯಿಂದ  ಕಾರ್ಯಕ್ರಮ ಆಯೋಜನೆ ಮಾಡಿ ಹಲವು ಗಾಯಕರುನ್ನು ಕರೆ ತಂದು ಗಾಯಕರಿಗೆ ಪ್ರೋತ್ಸಾಹ ಒಂದು ವಿಶಿಷ್ಟ ಕಾರ್ಯಕ್ರಮವಾಗಿ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಎಸ್ ಟಿ .ಘಟಕದ ರಾಜ್ಯಾದ್ಯಕ್ಷ ಕೆ ಪಿ ಪಾಲಯ್ಯ ಮಾತನಾಡಿ ಜಗಳೂರು ಕ್ಷೇತ್ರದಲ್ಲಿ ಉತ್ತಮ ಗಾಯಕರಿದ್ದು ಅವರುನ್ನು ಗುರುತಿಸುವಲ್ಲಿ ವಿಪಲತೆಯಾಗಿತ್ತು .ಶುಕ್ರದೆಸೆನ್ಯೂಸ್  ಮೀಡಿಯಾ ಪತ್ರಿಕೆ ನೇತೃತ್ವದಲ್ಲಿ ಇಂತ ವಿನೂತನ  ಜಿಲ್ಲಾ ಮಟ್ಟದ ಕರೋಕೆ ಗಾಯನ ಕಾರ್ಯಕ್ರಮದ ವೇದಿಕೆ  ಉತ್ತಮ  ಪ್ರತಿಭೆಗಳುನ್ನು ಹೊರ ತರಲು ಸಾಕ್ಷಿಯಾಗಿದೆ  ಆಯೋಜಕರಿಗೆ ನಮ್ಮ ಸಹಕಾರವಿದೆ ಎಂದು ಪ್ರಶಂಸೆಸಿದರು.

ಬಿಸ್ತುವಳ್ಳಿ ವಿ ಎಸ್ ಎಸ್ ಎನ್ ಅಧ್ಯಕ್ಷ ಬಾಬಣ್ಣ ಮಾತನಾಡಿ ಕ್ಷೇತ್ರದ ಶಾಸಕರಾದ .ಬಿ ದೇವೇಂದ್ರಪ್ಪ ಅಣ್ಣನವರು  ನನಗೆ ಶುಕ್ರದೆಸೆ ತಿರುಗಲಿ ಎಂದು ಈ ವೇದಿಕೆಯಲ್ಲಿ ಆಶಿಸಿದ್ದು ನನ್ನ ಸೌಭಾಗ್ಯ ನಾನು ಅವರು ಹೇಳಿದಂತೆ ಕ್ಷೇತ್ರದಲ್ಲಿ ಕ್ರೀಡ ಸಾಂಸ್ಕೃತಿಕ ನಾಟಕ ವಿವಿಧ ಕಲಾ ಸೇವೆಗೆ ಪ್ರೋತ್ಸಾಹ ನೀಡುತಾ ಬಂದಿದ್ದು ನಿಮ್ಮ ಅಶಿರ್ವಾದ ನನಗೆ ಶ್ರೀರಕ್ಷೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಶುಕ್ರದೆಸೆ ಪತ್ರಿಕೆ ಸಂಪಾದಕ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿದರು  ಸ್ಥಳೀಯ ಕಲಾವಿದರು ಬದುಕು ಕಟ್ಟಿಕೊಳ್ಳುವುದೆ ಒಂದು ಹರಸಾಹಸ .ಕಲಾವಿದರು ಬಣ್ಣ ಹಚ್ಚಿಕೊಂಡು ಪರದೆಯಲ್ಲಿ ತುಂಬಾ ಸೋಗಸಾಗಿ ಎಲ್ಲುರುನ್ನು ಮೆಚ್ಚಿಸುವಂತ ಮನೋರಂಜನೆ ನೀಡುವರು ಆದರೆ ಅವರ ನಿಜ ಜೀವನ ತುಂಬಾ ಕ್ಲಿಷ್ಟಕರವಾಗಿರುತ್ತದೆ ಆದ್ದರಿಂದ ಸ್ಥಳೀಯ ಕಲಾವಿದರುನ್ನು ಉಳಿಸಿ ಬೆಳೆಸಲು ನಮ್ಮ ಕ್ಷೇತ್ರದ ಶಾಸಕರು ಅಭಿವೃದ್ಧಿ ಜೊತೆಗೆ ಇತರೆ ಎಲ್ಲಾ ಕ್ಷೇತ್ರದ ಕ್ರೀಡಾ ಸಾಂಸ್ಕೃತಿಕ ಶೈಕ್ಷಣಿಕವಾಗಿ ಆದ್ಯತೆ ನೀಡಿ  ಪ್ರೊತ್ಸಾಹ ನೀಡುವಂತ  ಶಾಸಕರ ಕಾರ್ಯ ಸಾರ್ಥಕವಾಗಿದೆ.

ಇದೆ ಸಂದರ್ಸಂದರ್ಭದಲ್ಲಿ ವ್ಯಾಸಗೊಂಡನಹಳ್ಳಿ ಶಾಲಾ ಮಕ್ಕಳಿಂದ ನೃತ್ಯ .ಹಾಗೂ ಗಾಯಕರಿಂದ ಉತ್ತಮ ಕ್ಲಾಸಿಕಲ್ ಗೀತೆಗಳು ಮೂಡಿಬಂದವು.

  ಕಾರ್ಯಕ್ರಮದಲ್ಲಿ ವಿ ಎಸ್ ಎಸ್ ಎನ್ ಅದ್ಯಕ್ಷ ಬಿಸ್ತುವಳ್ಳಿ ಬಾಬಣ್ಣ. ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶಣ್ಣ‌. ಐ ಎ.ಎ.ಎಸ್  ಇನ್ಸೈಟ್   ಜಿ.ಬಿ.ವಿನಯಕುಮಾರ್ ಅಳಿಯರಾದ ಶರತ್.ಮಾಜಿ ಜಿಪಂ  ಸದಸ್ಯ ಎಸ್ ಕೆ ರಾಮರೆಡ್ಡಿ. ಮುಖಂಡರಾದ ಪ್ರಕಾಶ್ ರೆಡ್ಡಿ. ಜಿಲ್ಲಾ ಕಾಂಗ್ರೆಸ್ ಕಾರ್ಯಧರ್ಶಿ ಪಲ್ಲಾಗಟ್ಟೆ ಶೇಖರಪ್ಪ.ನದಾಪ್ ಪಿಂಜಾರ್ ಸಂಘದ ಅಧ್ಯಕ್ಷ ಬಂಗ್ಲೆ ಪರಿವೀಜ್.ಪ್ರಾಂಶುಪಾಲರಾದ ನಾಗಲಿಂಗಪ್ಪ.ಮುಖಂಡ ರಂಗನಾಥರೆಡ್ಡಿ.ಸರ್ಕಾರಿ ಪ್ರಾಥಮಿಕ ಪಾಠ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತೇಶ್‌. ಕಾಂಗ್ರೆಸ್ ಕಾರ್ಮಿಕ ಸಂಘದ ರಾಜ್ಯ ಕಾರ್ಯಧರ್ಶಿ ಗುತ್ತಿದುರ್ಗದ ರುದ್ರೇಶ್. ಬೆಸ್ಕಾಂ ಇಲಾಖೆ ಲೋಕಣ್ಣ. ಮುಖಂಡರಾದ ಮಾಳಮ್ಮನಹಳ್ಳಿ ವೆಂಕಟೇಶ್.. ಪಪಂ ನಾಮನಿರ್ದೇಶನ ಸದಸ್ಯ ಸಣ್ಣ ತಾನಾಜಿ ಗೋಸಾಯಿ. ತೀರ್ಪುಗಾರರಾದ ಪರಮೇಶಣ್ಣ. ಗಾಯಕ ಮಂಜು. ಖ್ಯಾತ ಗಾಯಕಿ  ಸೌಮ್ಯ.ಗಾಯಕ ಹುಚ್ಚಂಗಿಪುರ ನಾಗೇಶಿ.ಮಾನವ ಹಕ್ಕುಗಳ ತಾಲ್ಲೂಕು ಮಹಿಳಾ ಅದ್ಯಕ್ಷೆ ಲೋಕಮ್ಮ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!