ಜಗಳೂರು ತಾಪಂ ಇಲಾಖೆ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕರಾಗಿ ಹೆಚ್ ಬೋರಯ್ಯ ಅಧಿಕಾರ ಸ್ವಿಕಾರ
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on march 13
.ಜಗಳೂರು ತಾಪಂ ಇಲಾಖೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕರ ಸ್ಥಾನ ಇತ್ತೀಚೆಗೆ ತೆರವಾಗಿತ್ತು ಈ ಹಿಂದೆ ಕಾರ್ಯನಿರ್ಹಿಸುತ್ತಿದ್ದ ಚಂದ್ರಶೇಖರ್ ಮುಂಬಡ್ತಿ ಹೊಂದಿ ಹರಪನಹಳ್ಳಿ ತಾಪಂ ಇಓ ಆಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸ್ಥಾನ ಖಾಲಿಯಾಗಿತ್ತು .ಇದೀಗ ತೆರವಾದ ಸ್ಥಾನಕ್ಕೆ ಹೆಚ್ ಬೋರಯ್ಯ ತಾಪಂ ಖಾತ್ರಿ ಯೋಜನೆ ಪ್ರಭಾರ ಸಹಾಯಕ ನಿರ್ದೇಶಕರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಈ ವೇಳೆ ನೂತನ ಸಹಾಯಕ ನಿರ್ದೇಶಕ ಬೋರಯ್ಯ ರವರು ನಮ್ಮ ಶುಕ್ರದೆಸೆನ್ಯೂಸ್ ನೊಂದಿಗೆ ಮಾತನಾಡಿದರು
ಕಳೆದ ದಿನಗಳಲ್ಲಿ ಈ ಹಿಂದೆ ನಾನು ದಾವಣಗೆರೆ ಬಳ್ಳಾರಿ ವಿಜಯನಗರ ಜಿಲ್ಲೆ ಸೇರಿದಂತೆ ವಿವಿಧ ಬಾಗಗಳಲ್ಲಿ ಅಣಜಿ ಗ್ರಾಪಂ ನಲ್ಲಿ ಪಿ ಡಿ ಓ ಆಗಿ ಕರ್ತವ್ಯ ನಿರ್ವಹಿಸಿ ದಾವಣಗೆರೆ ತಾಪಂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದೆನೆ.
ಪ್ರಸ್ತುತದಲ್ಲಿ ಸರ್ಕಾರರದ ನೀಯಮದಂತೆ ಜಗಳೂರು ತಾಪಂ ಸಹಾಯಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದು ಗ್ರಾಮೀಣ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಬಾಗದ ಬಡ ಜನರಿಗೆ ಅತ್ಯಂತ ಅಸರೆಯಾಗಿದ್ದು ಕೂಲಿಕಾರರು ಮತ್ತು ಸಾರ್ವಜನಿಕರು ಈ ಯೋಜನೆಯಡಿಯಲ್ಲಿ ಉತ್ತಮ ಕಾಮಗಾರಿ ಆಯ್ಕೆ ಮಾಡಿಕೊಂಡು ಜನಪಯೋಗಿ ಕಾಮಗಾರಿ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಶಾಲಾ ಕಾಪೌಂಡ್ ನಿರ್ಮಾಣ.ರೈತರ ಕಣ ಹೊಕ್ಕಣಿಕೆ. ಕುರಿ ಶೆಡ್ ನಿರ್ಮಾಣ .ಬದು ನಿರ್ಮಾಣ ಅನೇಕ ವಿವಿಧ ಕಾಮಗಾರಿ ಆಯ್ಕೆ ಮಾಡಿಕೊಳ್ಳಲು ಆವಕಾಶವಿದೆ ಎಂದರು.