ಸುದ್ದಿ ಜಗಳೂರು

ನಾನು ಕೈಬಿಟ್ಟರು  ಪಕ್ಷ ಕೈಬಿಡಲ್ಲ ಪ್ರಮಾಣಿಕವಾಗಿ ಪಕ್ಷ ನಿಷ್ಠೆಗೆ ಕೆಲಸ ಮಾಡಿ ಪಕ್ಷಕ್ಕೆ ವಿಶ್ವಾಸ ದ್ರೋಹ ಮಾಡಬೇಡಿ ಶಾಸಕ ಬಿ ದೇವೇಂದ್ರಪ್ಪ 

Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on march 16

ಪಟ್ಟಣದ ಶಾಸಕರ ಜನಸಂಪರ್ಕ ಕಛೇರಿ ಆವರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿವಿಧ ಕಾರ್ಯಕರ್ತರು ಸೇರ್ಪಡೆಯಾಗುವ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಹಲವು ಕಾರ್ಯಕರ್ತರುನ್ನು ಪಕ್ಷಕ್ಕೆ ಪಕ್ಷದ ಚಿಹ್ನೆಯ ಶಾಲು ಹಾಕುವ ಮೂಲಕ ಶಾಸಕರು ವಿವಿಧ ಕಾರ್ಯಕರ್ತರುನ್ನು ಮರು ಸೇರ್ಪಡೆ‌ ಮಾಡಿಕೊಂಡು ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಈ ಹಿಂದೆ ಕಾರಣಂತರದಿಂದ ಕಾಂಗ್ರೆಸ್ ಪಕ್ಷ ತೊರೆದು ಅನ್ಯ ಪಕ್ಷಕ್ಕೆ ಮಾರು ಹೋದ ಬಹುತೇಕ  ಕಾರ್ಯಕರ್ತರು ಪುನ ಪಕ್ಷಕ್ಕೆ  ಮರು ಸೇರ್ಪಡೆಯಾಗುತ್ತಿರುವುದು ನಮಗೆ ಆನೆ ಬಲ ಬಂದಂತಾಗಿದೆ. 

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ   ಕಾಂಗ್ರೆಸ್ ಪಕ್ಷಕ್ಕೆ  ನಿಮ್ಮಗಳ ಸಹಕಾರದಿಂದ ಕ್ಷೇತ್ರದಲ್ಲಿ ಭದ್ರವಾಗಿ ಪಕ್ಷ ಸಂಘಟನೆ ಕಟ್ಟಿ ಬೆಳೆಸಲಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಕಳೆ ತಂದಂತಾಗಿದೆ.ಕಳೆದ ದಿನಮಾನಗಳಲ್ಲಿ ಕ್ಷೇತ್ರವು 10 ವರ್ಷ ಬಿಜೆಪಿ  ವಶವಾಗಿತ್ತು.  ಆದರೆ ಪುನ  ಕಾಂಗ್ರೆಸ್ ಭದ್ರಕೋಟೆಯಾಗಲಿದೆ.

ಕ್ಷೇತ್ರದಲ್ಲಿ ಈ‌ ಹಿಂದೆ ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ಹಾಗೂ ಹೆಚ್ ಪಿ ರಾಜೇಶ್ ರವರು ಪ್ರಥಮದಲ್ಲಿ  ಕಾಂಗ್ರೆಸ್ ಪಕ್ಷದಿಂದಲೆ ಶಾಸಕರಾಗಿ ಆಯ್ಕೆಯಾಗಿದ್ದನ್ನ ಮರೆಯಬಾರದು ಆದರೆ ಇದೀಗ ಬಿಜೆಪಿ ಮಯವಾಗಿದ್ದಾರೆ 

ಈ ಬಾರಿ ದಾವಣಗೆರೆ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅತ್ಯಂತ ಬಹುಮತದಿಂದ ಗೆಲುವು ಸಾಧಿಸಲಿದೆ

 ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕರ್ತರು

  ಪಕ್ಷ ನಿಷ್ಠಾವಂತರಾಗಿರಿ ಎಂದು ಕಿವಿ ಮಾತು ಹೇಳಿದರು. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾರ್ಯಕರ್ತರು ಪ್ರಮಾಣಿಕವಾಗಿ ಕೆಲಸ ಮಾಡಿ ನಮ್ಮ ಅಭ್ಯರ್ಥಿ ಯಾರೆ ಆದರು ಗೆಲಿಸಲು ಬೂತ ಮಟ್ಟದಿಂದ ಶ್ರಮಿಸುವಂತೆ ತಿಳಿಸಿದರು.

  ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಾ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉತ್ತಮ ಆಡಳಿತಕ್ಕೆ ಸಾಕ್ಷಿಯಾದ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಸಾರ್ಥಕವಾಗಿವೆ 

 ಜಗಳೂರು ಪಟ್ಟಣ ಪಂಚಾಯತಿಯಲ್ಲಿ ನಾಮನಿರ್ದೇಶನ ಸದಸ್ಯರುನ್ನು ಸಾಮಾಜಿಕ ನ್ಯಾಯದಡಿಯಲ್ಲಿ   ನಾಮನಿರ್ದೇಶನ ಸದಸ್ಯರುನ್ನು ಅತ್ಯಂತ ಕೆಳ ಸಮುದಾಯದವರಿಗೆ ಪ್ರಾತ್ಯನಿಧ್ಯ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯರಾದ ನಾಗರತ್ನಮ್ಮ ಮಲ್ಲೇಶಪ್ಪ.ಪಪಂ ಮಾಜಿ ಅಧ್ಯಕ್ಷ ವೈ ಎನ್ ಮಂಜುನಾಥ.ಯು.ಜಿ ಶಿವಕುಮಾರ್ ಸೇರಿದಂತೆ ವಿವಿಧ ಕಾರ್ಯಕರ್ತರುನ್ನು ಸೇರ್ಪಡೆ ಮಾಡಿಕೊಂಡು ಅಭಿನಂದಿಸಿದರು. .ಕಾಂಗ್ರೆಸ್ ಎಸ್ಸಿ ಘಟಕದ ತಾಲ್ಲೂಕು ಬ್ಲಾಕ್ ಅಧ್ಯಕ್ಷರನ್ನಾಗಿ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಮಹೇಶ್ ರವರುನ್ನು ಆಯ್ಕೆ ಮಾಡಲಾಯಿತು.ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೆ ಗುರುಸಿದ್ದನಗೌಡ.ಕೆಚ್ಚೆನಹಳ್ಳಿ ಹರೀಶ್ ಹಾಗೂ ಮಡ್ರಹಳ್ಳಿ ಗೀರಿಶ್ .ಇವರುನ್ನು ಆಯ್ಕೆ ಆದೇಶ ಪ್ರತಿ ನೀಡಿದರು.

  ಕಾಂಗ್ರೆಸ್ ಎಸ್ ಟಿ ಘಟಕದ ರಾಜ್ಯಾದ್ಯಕ್ಷ ಕೆ ಪಿ.ಪಾಲಯ್ಯ ಮಾತನಾಡಿದರು

 ಕಾರ್ಯಕರ್ತರ ಸಹಕಾರದಿಂದ ಕಾಂಗ್ರೆಸ್ ಪಕ್ಷ ದೇಶದಲ್ಲಿಯೆ ಬಲಿಷ್ಠವಾಗಿದೆ. ಕೇಂದ್ರ ಬಿಜೆಪಿ ಸರ್ಕಾರ  ಒಡೆದು ಆಳು ನೀತಿ ರಾಜಕಾರಣ ಪ್ರವೇಶಿಸಿ ದೇಶ ಮಾರಾಟ ಮಾಡುವ ಸ್ಥಿತಿಗೆ ಬಂದಿದ್ದು.ದೇಶದ ಉಳಿವಿಗೆ ಕಾಂಗ್ರೆಸ್ ಅನಿವಾರ್ಯ 

ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ  ಕೆಪಿಸಿಸಿ ಆದೇಶ ಮೇರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಶಾಸಕರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವ  ಕಾರ್ಯಕರ್ತರಿಗೂ ಮತ್ತು ಚುನಾವಣೆಗೆ ಸ್ವರ್ಧಿಸುವ ಅಭ್ಯರ್ಥಿಗಳ ನಡುವೆ ವ್ಯತ್ಯಾಸವಿದೆ.ನಾಯಕನಾದವನು ಯಾವಾಗ ಬೇಕಾದರು ಪಕ್ಷ ಬದಲಿಸಬಹುದು ಆದರೆ ಕಾರ್ಯಕರ್ತರು ಗಟ್ಟಿಯಾಗಿ ಪಕ್ಷದಲ್ಲಿ ಉಳಿದು ಪಕ್ಷದ ಮೌಲ್ಯವನ್ನ ಎತ್ತಿಹಿಡಿಯಬೇಕೆಂದರು.

ಕಾಂಗ್ರೆಸ್ ನಿಂತಿರುವುದೆ ಕಾರ್ಯಕರ್ತರ ಸಹಕಾರದಿಂದ 

ಈ ಹಿಂದೆ ಮಾಡಿದ ತಪ್ಪನ್ನು ಪುನ ಮಾಡಬೇಡಿ ಪಕ್ಷನಿಷ್ಠೆಗೆ ಕೆಲಸ ಮಾಡಿ ಎಂದರು.

 ಕೆಪಿಸಿಸಿ ಎಸ್ ಟಿ. ಘಟಕದ ರಾಜ್ಯ ಪ್ರಧಾನಕಾರ್ಯಧರ್ಶಿ ಎಂ.ಡಿ ಕೀರ್ತಿಕುಮಾರ್ ಮಾತನಾಡಿದರು  ಕಾರ್ಯಕರ್ತರು ಹೆಸರಿಗೆ ಮಾತ್ರ ಹುದ್ದೆ ಪಡೆಯುವುದು ಶೋಭೆಯಲ್ಲ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನ ಸಂಘಟನೆ ಮಾಡಿದರೆ ಪಕ್ಷ ಗುರುತಿಸಿ ಉತ್ತಮ ಹುದ್ದೆಗಳಯ  ಕೈಬೀಸಿ ಕರೆಯಲಿವೆ ಉದಾಹರಣೆಗೆ ನಾನೇ ಸಾಕ್ಷಿ ಎಂದರು.  ನಮ್ಮ ಎಲ್ಲಾ ಕಾಂಗ್ರೆಸ್  ಘಟಕದ ಕಾರ್ಯಕರ್ತರು ಉತ್ತಮ ಪಕ್ಷ ಸಂಘಟನೆಗೆ ಶ್ರಮಿಸಿ ಲೋಕಸಭಾ ಚುನಾವಣೆಯಲ್ಲಿ ಸ್ವರ್ಧಿಸುವ ಅಭ್ಯರ್ಥಿಗೆ ಹೆಚ್ಚಿನ ಬಹುಮತ ನೀಡಿ ಗೆಲಿಸುವಂತೆ ಮನವಿ ಮಾಡಿಕೊಂಡರು..

ಈ ಸಂದರ್ಭದಲ್ಲಿ. ಕಾಂಗ್ರೆಸ್ ಬ್ಲಾಕ್ ಅದ್ಯಕ್ಷರಾದ ಷಂಷೀರ್ ಆಹಮದ್.ಕಂಬತ್ತಹಳ್ಳಿ ಮಂಜಣ್ಣ.

ವೀರಶೈವ ಸಮಾಜದ ಅದ್ಯಕ್ಷರು ಶಿವನಗೌಡ್ರು.ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ .ಮಹಿಳಾ ಉಪಾದ್ಯಕ್ಷೆ   ಸಾವಿತ್ರಮ್ಮ.ಮುಖಂಡರಾದ ಓಮಣ್ಣ.ನಿವೃತ್ತ ಅಧಿಕಾರಿ ತಿಪ್ಪೇಸ್ವಾಮಿ.ಪಪಂ ಸದಸ್ಯ ರಮೇಶ್ ರೆಡ್ಡಿ. ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ಕಾರ್ಯಧರ್ಶಿ ಗುತ್ತಿದುರ್ಗ ರುದ್ರೇಶ್.ಪಪಂ ನಾಮನಿರ್ದೇಶನ ಸದಸ್ಯರಾದ ಸಣ್ಣತಾನಾಜಿ ಗೋಸಾಯಿ.ಕುರಿ ಜೆಯ್ಯಣ್ಣ.ಗೊಡೆ ಪ್ರಕಾಶ್.ಮುಖಂಡ ಪಲ್ಲಾಗಟ್ಟೆ ಶೇಖರಪ್ಪ.ಅಲ್ಪಸಂಖ್ಯಾತ ಘಟಕದ ಮಹಮದ್ ಆಲಿ .ವಿಜಯ್ ಕೆಂಚೋಳ್ ಸೇರಿದಂತೆ ಮುಂತಾದವರು

Leave a Reply

Your email address will not be published. Required fields are marked *

You missed

error: Content is protected !!