Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on march 16
ನಾಡಿಗೆ ನಾಗಮ್ಮ ಕೇಶವಮೂರ್ತಿ ಕೊಡುಗೆ ಅಪಾರ
ಮಾತೃವಾತ್ಸಲ್ಯದ ಮಹಾತಾಯಿ
ಮಾಜಿ ಸಚಿವ ಎಚ್.ಆಂಜನೇಯ ಕಂಬನಿ
ಚಿತ್ರದುರ್ಗ-ದಾವಣಗೆರೆ ಅವಳಿ ಜಿಲ್ಲೆಯಲ್ಲಿ ರಾಜಕೀಯ ಛಾಪು ಮೂಡಿಸಿದ್ದ ನಾಗಮ್ಮ ಕೇಶವಮೂರ್ತಿ ನಾಡಿನ ದಿಟ್ಟ ಮಹಿಳೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಬಣ್ಣಿಸಿದ್ದಾರೆ.
ನಗರಸಭೆ ಸದಸ್ಯೆಯಾಗಿದ್ದ ನಾಗಮ್ಮ ಕೇಶವಮೂರ್ತಿ, 1972ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು. 1978ರಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಜನಪ್ರೀಯ ಶಾಸಕಿ ಎಂಬ ಹೆಗ್ಗಳಿಕೆ ಪಡೆದಿದ್ದರು. ಗುಂಡೂರಾವ್ ಸಚಿವ ಸಂಪುಟದಲ್ಲಿ ಪ್ರಾರ್ಥಮಿಕ-ಪ್ರೌಢ ಶಿಕ್ಷಣ ಸಚಿವಾಗಿ ಸೇವೆ ಸಲ್ಲಿಸಿದ ಅವರು, 1999ರಲ್ಲಿ ಮಸಯಕೊಂಡ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲುವು ದಾಖಲಿಸಿ, ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿ ರಾಜ್ಯದ ಅಭಿವೃದ್ದಿಗೆ ಶ್ರಮಿಸಿದ ಅವರ ಬದ್ಧತೆ ಈಗಲೂ ಮಾದರಿ ಆಗಿದೆ.
ತಮ್ಮ ಸುಧೀರ್ಘ ರಾಜಕೀಯ ಜೀವನದಲ್ಲಿ ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ದಿಗೆ ಅವರು ನೀಡಿದ ಕೊಡುಗೆ ಸ್ಮರಣೀಯ.
ಅದರಲ್ಲೂ ಶಿಕ್ಷಣ ಸಚಿವರಾಗಿದ್ದ ಸಂದರ್ಭ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಲು ನೇರ ನೇಮಕಾತಿ ಪದ್ಧತಿ ಜಾರಿಗೊಳಿಸುವ ಮೂಲಕ ಅರ್ಹರಿಗೆ ಉದ್ಯೋಗ ಸಿಗುವ ವ್ಯವಸ್ಥೆ ತಂದರು. ಈ ಮೂಲಕ ಮಕ್ಕಳಿಗೆ ಗುಣಮಟ್ಟದ ಬೊಧನೆ ಸಿಗುವ ಜೊತೆಗೆ ಶೈಕ್ಷಣಿಕ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಿದ್ದರು.ಎಚ್ ಆಂಜನೇಯ
ನನ್ನಂತಹ ಯುವಕರು ರಾಜಕೀಯದತ್ತ ಆಕರ್ಷಣೆ ಬೆಳೆಸಿಕೊಂಡು ಉನ್ನತ ರಾಜಕೀಯ ಸ್ಥಾನಮಾನ ಪಡೆಯಲು ನಾಗಮ್ಮ ಕೇಶಮೂರ್ತಿ ಅವರೇ ಮುಖ್ಯ ಕಾರಣಕರ್ತರು.
ನಮ್ಮನ್ನು ಸ್ವಂತ ಮಕ್ಕಳಂತೆ ಕಾಣುತ್ತಿದ್ದ, ನಮ್ಮ ರಾಜಕೀಯ ಬೆಳವಣಿಗೆಗೆ ಶ್ರಮಿಸುತ್ತಿದ್ದ ಅವರು ನಮ್ಮ ಪಾಲಿಗೆ ರಾಜಕೀಯ ಗುರು ಅಷ್ಟೇ ಅಲ್ಲದೇ ಅಮ್ಮ ಆಗಿದ್ದರು.
ಅವರ ಅಗಲಿಕೆ ಸುದ್ದಿ ಸ್ವಂತ ತಾಯಿಯನ್ನೇ ಕಳೆದುಕೊಂಡಷ್ಡು ದುಃಖವನ್ನು ಉಂಟು ಮಾಡಿದೆ.
ನಮ್ಮಂತಹ ರಾಜಕಾರಣಿಗಳ ಪಾಲಿಗೆ ತಾಯಿ ಆಗಿದ್ದ ಅವರ ಸೇವೆ, ಮಾತೃವಾತ್ಸಲ್ಯ ಇನ್ನೂ ನೆನಪಷ್ಟೇ ಎಂಬುದು ದುಃಖಕರ ವಿಷಯವಾಗಿದೆ.
ಮಹಾತಾಯಿ ಆತ್ಮಕ್ಕೆ ಶಾಂತಿ ಲಭಿಸಲಿ, ದುಃಖತಪ್ತ ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ದುಃಖಭರಿಸುವ ಶಕ್ತಿ ಬುದ್ಧ, ಬಸವಾದಿ ಶರಣರು ನೀಡಲಿ ಎಂದು ಮಾಜಿ ಸಚಿವ ಎವ್.ಆಂಜನೇಯ ತಮ್ಮ ಸಂತಾಪ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.