Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on march 27

ಭದ್ರಾಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿ ಶೀಘ್ರವಾಗಿ ಜಾರಿ ಮಾಡಲು ಒತ್ತಾಯಿಸಿ ಎಪ್ರೀಲ್ 13ಕ್ಕೆ ಜಗಳೂರು ತಾಲೂಕು ಸ್ವಯಂ ಪ್ರೇರಿತ ಬಂದ್ ಗೆ ದೋಣಿಹಳ್ಳಿ ದಾಸೋಹ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ನಿರ್ಣಯ   ಕರೆಕೊಟ್ಟ ಭದ್ರಾಮೇಲ್ದಂಡೆ ನೀರಾವರಿ ಹೋರಾಟ ಸಮಿತಿ

ಇಂದು ಜಗಳೂರು ತಾಲೂಕು ದೋಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ದಾಸೋಹ ಸಂಸ್ಕೃತಿ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಮಗ್ರ ನೀರಾವರಿಗಾಗಿ ಒತ್ತಾಯಿಸಿ ರೈತ ಹಕ್ಕೊತ್ತಾಯ ಸಮಾವೇಶದಲ್ಲಿ ಹಿರಿಯ ಪತ್ರಕರ್ತ ದೋಣೆಹಳ್ಳಿ ಗುರುಮೂರ್ತಿ ಅವರು ಹಕ್ಕೊತ್ತಾಯ ನಿರ್ಣಯ ಮಾಡಿ ಬಂದ್ ಗೆ ಕರೆ ನೀಡಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು ನೀರಿಗಾಗಿ ನೆಡೆಯುವ ಜಗಳೂರು ಪಟ್ಟಣ ಬಂದ್ ಸ್ವಯಂ ಪ್ರೇರಿತವಾಗಿ .ಶಾಂತಿಯುತವಾಗಿ ನೆಡೆಯಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನವನ್ನ ಸೆಳೆಯಲು ಇದು ಮೊದಲ ಹೆಜ್ಜೆಯಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು

ಜಗಳೂರು ಬಂದ್ ಕಾರ್ಯಕ್ರಮದ ಯಶಸ್ವಿಗಾಗಿ ನಾವು ಕೈ ಜೋಡಿಸುತ್ತೆವೆ ಇಂದೊಂದು ಪರಿಣಾಮಕಾರಿ ಹೋರಾಟವಾಗಲಿ ಎಂದು ಚಿತ್ರದುರ್ಗ ಭದ್ರಾಮೇಲ್ದಂಡೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷರಾದ ಎಂ ಲಿಂಗಾರೆಡ್ಡಿ ಒತ್ತಾಯಿಸಿದರು  ಮೊಳಕಾಲ್ಮೂರು ತಾಲೂಕು ರೈತ ಮುಖಂಡರಾದ ಬೇಡರೆಡ್ಡಿಳ್ಳಿ ಶೀವಾರೆಡ್ಡಿ ರಾಜ್ಯ ರೈತ ಮುಖಂಡ ಅರುಣ್ ಕುಮಾರ್ ಕುರಡಿ ಹಿರಿಯ ದಲಿಥ ಮುಖಂಡ  ಬಿ ಎಂ ಹನುಮಂತಪ್ಪ  ಎಲ್ ಎಚ್ ಅರುಣ್ ಕುಮಾರ್ ದಾವಣಗೆರೆ ಅನುಭವ ಮಂಟಪದ ಅವರಗೆರೆ ರುದ್ರಮುನಿ ಕಮ್ಯುನಿಸ್ಟ್ ಮುಖಂಡ ಪಾಲೇನಹಳ್ಳಿ ಪ್ರಸನ್ನ ಕುಮಾದಲಿ ಇನ್ನಿತರ ಮುಖಂಡರು ಬಂದ್ ನಲ್ಲಿ ಭಾಗವಹಿಸುವುದಾಗಿ ಬೆಂಬಲ ವ್ಯಕ್ತಪಡಿಸಿದರು

ಈ ನಿರ್ಣಯದ  ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಹೆಚ್ ಪಿ ರಾಜೇಶ್ ಭಾಗವಹಿಸಿದ್ದರು ದಿವ್ಯ ಸಾನಿಧ್ಯವನ್ನ ನೀಲಗುಂದ ಗುಡ್ಡದ ಮಠದ ಶ್ರೀ ಚನ್ನಬಸವ ದೇವರು ಮುಸ್ಟೂರು ದಾಸೋಹ ಮಠದ ಶ್ರೀ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಖಾನಮಡುಗು  ಐಮಡಿ ಶರಣರು ವಹಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ತಾಲೂಕಿನ ಹಿರಿಯ ರೈತ ಹೋರಾಟಗಾರ ಗಡಿಮಾಕುಂಟೆ ಬಸವರಾಜಪ್ಪ ವಹಿಸಿದ್ದರು ಪ್ರಾಸ್ಥವಿಕವಾಗಿ ಭದ್ರಾಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್ ಒಬಳೇಶ್ ನೆರವೆರಿಸಿದರು ಯೋಜನೆ ವಸ್ತು ಸ್ಥಿತಿ ಮತ್ತು ಹೋರಾಟದ ರೂಪುರೇಷವನ್ನ ಹಿರಿಯ ಹೋರಾಟಗಾರ ನಾಗಲಿಂಗಪ್ಪ ವಿಷಯ ಮಂಡನೆ ಮಾಡಿದರು ದೊಣ್ಣೆಹಳ್ಳಿ ಗುರುಮೂರ್ತಿ ಮಂಡಿಸಿದ ನಿರ್ಣಯವನ್ನ ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ ಅನುಮೋದಿಸಿದರು

ಈ ಸಂದರ್ಭದಲ್ಲಿ 

ಹಿರಿಯರಾದ ವಾಲಿಬಾಲ್ ತಿಮ್ಮಾರೆಡ್ಡಿ ನಿವೃತ್ತ ಉಪನ್ಯಾಸಕ ಹನುಮಂತಾಪುರ ರಾಜಪ್ಪ ಸಾಹಿತಿ ಸಂಗೇನಹಳ್ಳಿ ಅಶೋಕ್ ಕುಮಾರ್ ಸಿದ್ದಿಹಳ್ಳಿ ಪ್ರಕಾಶ್ ರೆಡ್ಡಿ ಕಲ್ಲೇದೆವರಪುರ ವೀರಸ್ವಾಮಿ 

ಡಿ ಎಸ್ ಎಸ್ ತಾಲೂಕು ಸಂಚಾಲಕರಾದ ಮಲೆ ಮಾಚಿಕೆರೆ ಸತೀಶ್ ದಲಿ ಮುಖಂಡ ಪತ್ರಕರ್ತ ರಾಜಪ್ಪ ವ್ಯಾಸಗೊಂಡನಹಳ್ಳಿ 

 ಎಸ್ ಎಪ್ ಐ ಜಿಲ್ಲಾ ಸಂಚಾಲಕ ಬಿ ಎಮ್ ಅನಂತರಾಜ್ ರೈತ ಮುಖಂಡ ಆರ್ ವಿ ಹೇಮಾರೆಡ್ಡಿ ಭರಮಸಾಗರ ಕುಮಾರ್ ಗ್ಯಾಸ್ ಒಬಣ್ಣ ತೋರಣಗಟ್ಟೆ ಬಡಪ್ಪ ಹಾಗೂ ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *

You missed

error: Content is protected !!