ಅಹಿಂದ ನಾಯಕ .ಜಿ.ಬಿ.ವಿನಯ್ ಕುಮಾರ್ ಗೆ ಟಿಕೇಟ್ ಕೊಡಿ:ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಿ:ವಿನಯಕುಮಾರ್ ಬೆಂಬಲಿಗರಾದ ಪ್ರಸನ್ನಕುಮಾರ್ ಆಗ್ರಹ.
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on march 27
ಜಗಳೂರು ಸುದ್ದಿ:ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಅಹಿಂದ ವರ್ಗದ ನಾಯಕ ಜಿ.ಬಿ.ವಿನಯ್ ಕುಮಾರ್ ಗೆ ಕಾಂಗ್ರೆಸ್ ಟಿಕೇಟ್ ಕೊಡಿ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಿ ಎಂದು ನಾಯಕ ಸಮಾಜದ ಯುವ ಮುಖಂಡ ತಿಮ್ಲಾಪುರ ಪ್ರಸನ್ನ ಕುಮಾರ್ ಆಗ್ರಹಿಸಿದರು.
ಪಟ್ಟಣದ ಶ್ರೇಯಾ ಲಾಡ್ಜ್ ನಲ್ಲಿ ಇನ್ ಸೈಟ್ ಸಂಸ್ಥೆಯ ಜಿ.ಬಿ.ವಿನಯ್ ಕುಮಾರ್ ಅಭಿಮಾನಿ ಬಳಗದಿಂದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಮಣಿಹಾಕುತ್ತಿವೆ.ಅಹಿಂದ ವರ್ಗದ ನಾಯಕರಿಗಾಗಲಿ ಅಥವಾ ಲಿಂಗಾಯತ ಸಮುದಾಯದ ಬೇರೆಯ ನಾಯಕರಿಗೆ ಅವಕಾಶ ನೀಡುತ್ತಿಲ್ಲ.ಪ್ರಸಕ್ತವಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಹೆಸರು ಟಿಕೇಟ್ ಆಯ್ಕೆ ಪಟ್ಟಿಯಲ್ಲಿದ್ದು.ಯುವಕರಿಗೆ ಆದ್ಯತೆ ನೀಡುವ ರಾಹುಲ್ ಗಾಂಧಿ ಅವರ ಹೇಳಿಕೆ ಹುಸಿಯಾಗಿದೆ.ಈ ಬಾರಿ ರಾಜ್ಯದಲ್ಲಿ ಇನ್ ಸೈಟ್ ಸಂಸ್ಥೆಯ ಮೂಲಕ ಸ್ಪರ್ಧಾತ್ಮ ಪರೀಕ್ಷೆಗೆ ತರಬೇತಿ ನೀಡುವ ಮೂಲಕ ಪರಿಶಿಷ್ಠ ಸಮುದಾಯದ ಬಡ ವರ್ಗದ ನಿರುದ್ಯೋಗಿ ಪದವೀಧರರ ಬಾಳಿನಲ್ಲಿ ಆಶಾಕಿರಣವಾಗಿರುವ ಜಿ.ಬಿ.ವಿನಯ್ ಕುಮಾರ್ ಅವರಿಗೆ ಟಿಕೇಟ್ ಕೊಡಬೇಕು.ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸಾಕಾರಗೊಳಿಸಿರುವ ಕಾಂಗ್ರೆಸ್ ಪಕ್ಷದ ಗೆಲುವು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಿಶ್ಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲ ಮರೇನಹಳ್ಳಿ ಬಸವರಾಜ್ ಮಾತನಾಡಿ,ವಿನಯ ನಡೆ ಹಳ್ಳಿಯಕಡೆ ವಿನೂತನ ಕಾರ್ಯಕ್ರಮದ ಮೂಲಕ ಕ್ಷೇತ್ರದ ಮತದಾರರ ಸಮಸ್ಯೆಗಳನ್ನು ಆಲಿಸುವುದಲ್ಲದೆ. ಪರಿಹರಿಸುವ ಸಂಕಲ್ಪ ಹೊಂದಿದ ಜಿ.ಬಿ.ವಿನಯ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷವೇ ಗುರುತಿಸಲಾಗಿತ್ತು.ಆದರೆ ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ಕೈತಪ್ಪಿರುವುದು ಅಭಿಮಾನಿ ಬಳಗಕ್ಕೆ ಬೇಸರ ತಂದಿದೆ.ಜಿಲ್ಲೆಯಲ್ಲಿ ಹೆಚ್ಚು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಗೆಲುವಿನ ಹಾದಿ ಸುಗಮವಾಗಿದ್ದು.ಅಹಿಂದ ವರ್ಗದ ನಾಯಕನಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡಬೇಕು.ಕಳೆದ ಬಾರಿ ಶಾಮನೂರು ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಟಿಕೇಟ್ ಕೊಡಲು ಮುಂದಾದರೂ ನಿರಾಕರಿಸಿ ಸಂಬಂಧ ಜಾತಿಯ ಒಗ್ಗಟ್ಟಿಗಾಗಿ ಸ್ಪರ್ಧಿಸದೆ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅವರನ್ನು ಚುನಾವಣೆ ಸ್ಪರ್ಧಗೆ ಇಳಿಸಿ
ಮೌನವಹಿಸಿದ್ದರು ಅದು ಸೋಲಿಗೆ ಕಾರಣವಾಯಿತು ಎಂದು ಆರೋಪಿಸಿದರು.
ಮರೆನಹಳ್ಳಿ ನಾಗರಾಜ್ ಮಾತನಾಡಿ ಜಿ.ಬಿ ವಿನಯಕುಮಾರ್ ಪ್ರಮಾಣಿಕವಾಗಿ ಪಕ್ಷದಲ್ಲಿ ಸಕ್ರಿಯವಾಗಿ ಸೇವೆ ಮಾಡುತಾ ಬಂದಿರುವ ನಿಷ್ಠಾವಂತ ಜನಸೇವಕ ಅದರೆ ಜಾತಿ ರಾಜಕಾರಣದ ಷಡ್ಯಂತ್ರಕ್ಕೆ ಮಣಿದ ಕೇಂದ್ರ ಎಐಸಿಸಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿ ಟಿಕೆಟ್ ನೀಡಿರುವುದು ಬೇಸರ ತಂದಿದೆ.
ವಕೀಲ ಪ್ರಕಾಶ್ ಸಂವಿಧಾನದಡಿಯಲ್ಲಿ ಮುನ್ನೆಲೆಗೆ ಅಸ್ತಿತ್ವಕ್ಕೆ ಬಂದಂತ ಪಕ್ಷಗಳು ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಷಯದಲ್ಲಿ ತಾರತಮ್ಯ ಧೋರಣೆ ಸಂವಿಧಾನಕ್ಕೆ ವಿರುದ್ದ ನೀತಿ ಸರಿಯಲ್ಲ ಎಂದರು
ಸಂದರ್ಭದಲ್ಲಿ , ಗ್ರಾ.ಪಂ ಸದಸ್ಯ ಹೊನ್ನಮರಡಿ ಜಯ್ಯಣ್ಣ,ಮಾಜಿ ಸದಸ್ಯ ಜಿಟಿ ನಾಗರಾಜ್,ಮುಖಂಡರಾದ ಗಿರೀಶ್,ತಿಮ್ಮೇಶ್,ಶ್ರೀಕಾಂತ,ಚಿಕ್ಕಮ್ಮನಹಟ್ಟಿ ಚಂದ್ರಪ್ಪ,ಜಾವಿದ್ .ವಿರೋಪಾಕ್ಷಿ,ಸೇರಿದಂತೆ ಇದ್ದರು.